property Law: ಒಂದು ಮನೆ ಎಂದಮೇಲೆ ಅಲ್ಲಿ ಆಸ್ತಿ ವಿಚಾರಕ್ಕೆ ಜಗಳ, ಮನಸ್ತಾಪ ಬಂದೇ ಬರುತ್ತದೆ. ಮೊದಲೆಲ್ಲ ತಂದೆ ಮನೆ ಆಸ್ತಿಯ ಮೇಲೆ ಹೆಣ್ಣುಮಕ್ಕಳಿಗೆ ಹಕ್ಕು ಇರಲಿಲ್ಲ.. ಆದರೆ 2005ರ ಉತ್ತರಾಧಿಕಾರಿ ಕಾಯ್ದೆಯ ಅನುಸಾರ ತಂದೆಯ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಅಸ್ತಿಯಲ್ಲಿ ಗಂಡುಮಕ್ಕಳಿಗೆ ಇರುವಷ್ಟೇ ಸಮಾನವಾದ ಹಕ್ಕು ಹೆಣ್ಣುಮಕ್ಕಳಿಗೆ ಎಂದು ಕೋರ್ಟ್ ತೀರ್ಪು ನೀಡಿದೆ. ಹಕ್ಕು ಇದ್ದರು ಸಹೋದರರಿಗೆ ತ್ಯಾಗ ಮಾಡುವ ಹೆಣ್ಣುಮಕ್ಕಳು ಇದ್ದಾರೆ..

ಇನ್ನು ಕೆಲವರು ತಂದೆ ವಿಲ್ ಮಾಡದೆ ಮರಣ ಹೊಂದಿದಾಗ ತಮಗೆ ಆಸ್ಟಿವಲ್ಲಿ ಪಾಲು ಬೇಕು ಎಂದು ಕೇಸ್ ಹಾಕುವವರು ಇದ್ದಾರೆ. ಈ ರೀತಿ ತಂದೆಯ ಆಸ್ತಿ ಮೇಲೆ ಕೇಸ್ ಹಾಕಿ, ಅದನ್ನು ಪಡೆದುಕೊಂಡ ಹೆಣ್ಣುಮಕ್ಕಳು ಸಾಕಷ್ಟು ಜನರಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಥದ್ದೊಂದು ಕೇಸ್ ಗೆ ಮಹತ್ವದ ತೀರ್ಪು ಸಿಕ್ಕಿದೆ. ಅದೇನು ಎಂದರೆ, ಒಬ್ಬ ಮಹಿಳೆ ರಿಟ್ ಅರ್ಜಿ ಹಾಕಿದ್ದರು, ಕೋರ್ಟ್ ನ ಏಕಪೀಠ ಸದಸ್ಯತ್ವ ಈ ಕೇಸ್ ವಿಚಾರಣೆ ನಡೆಸಿದ್ದು, ವರದಕ್ಷಿಣೆಗೆ ನೀಡಿದ ಆಸ್ತಿಯನ್ನು ಇದೇ ಪಟ್ಟಿಗೆ ಸೇರಿಸಿಕೊಳ್ಳಬಹುದು ಎಂದು ತಿಳಿಸಿದೆ.

ಅಷ್ಟಕ್ಕೂ ಈ ಪ್ರಕರಣದಲ್ಲಿ ನಡೆದಿರುವುದು ಏನು ಎಂದರೆ, ಬೆಂಗಳೂರಿನ ಸಿವಿಲ್ ಕೋರ್ಟ್ ನಲ್ಲಿ ಒಬ್ಬ ಮಹಿಳೆ ತನ್ನ ಸಹೋದರನ ವಿರುದ್ಧ ಕೇಸ್ ಹಾಕಿದ್ದರು. ತವರು ಮನೆಯ ಆಸ್ತಿಯಲ್ಲಿ ತನಗೆ ಪಾಲು ಸಿಗಬೇಕು ಎಂದು ಕೇಸ್ ಹಾಕಿದ್ದು, ಆಕೆಯ ಸಹೋದರ ವರದಕ್ಷಿಣೆ ರೂಪದಲ್ಲಿ ನೀಡಿರುವ ಆಸ್ತಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. ಕೋರ್ಟ್ ಕೂಡ ಇದನ್ನು ಒಪ್ಪಿಕೊಂಡಿದೆ.

ವರದಕ್ಷಿಣೆಗೆ ನೀಡಿದ ಆಸ್ತಿಯನ್ನು ಪರಿಗಣಿಸಬಹುದು ಎಂದು ತೀರ್ಪು ನೀಡಿದ ಕೋರ್ಟ್, ಅರ್ಜಿ ಮಾರ್ಪಾಡು ಮಾಡಬೇಕು ಎಂದು ತೀರ್ಪು ನೀಡಿತು. ಆದರೆ ಈ ಮಹಿಳೆ ತನಗೆ ಆಸ್ತಿಯಲ್ಲಿ ಪಾಲು ಸಿಗಬೇಕು ಎಂದು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರು. ಈಕೆಯ ಪರವಾಗಿ ಹೈಕೋರ್ಟ್ ನಲ್ಲಿ ವಾದದಲ್ಲಿ ಮಾತನಾಡಿದ ಲಾಯರ್, ವರದಕ್ಷಿಣೆ ರೂಪದಲ್ಲಿ ಪಡೆದಿರುವ ಆಸ್ತಿ, ಆಕೆಯ ಮಾವ ಮತ್ತು ಗಂಡ ಸಂಪಾದನೆ ಮಾಡಿರುವ ಸ್ವಯಾರ್ಜಿತ ಆಸ್ತಿ, ಅದನ್ನು ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ ಎಂದು ವಾದಿಸಿದರು.

ಆದರೆ ಹೈಕೋರ್ಟ್ ನ ನ್ಯಾಯಪೀಠ ಇಬರಿಬ್ಬರ ವಾದವನ್ನು ಕೇಳಿದ ನಂತರ, ಒಂದು ವೇಳೆ ಹೆಣ್ಣುಮಗಳ ಮದುವೆ ವೇಳೆ ಆಸ್ತಿ ನೀಡಿದ್ದರೆ, ಮತ್ತೆ ಆಸ್ತಿ ವಿಭಜನೆ ಮಾಡುವಾಗ ಅದನ್ನು ಪರಿಗಣಿಸಬೇಕು ಎಂದು ಕೋರ್ಟ್ ತೀರ್ಪು ನೀಡಿದೆ. ಹಾಗೆಯೇ ಕುಟುಂಬದ ಆಸ್ತಿ ಸ್ವಂತ ಸಂಪಾದನೆ ಆಗಿದ್ದರೆ, ಅದನ್ನು ಗಣನೆಗೆ ತೆಗೆದುಕೊಳ್ಳುವುದು ಬೇಡ ಎಂದು ಹೇಳಲಾಗಿದೆ..

By

Leave a Reply

Your email address will not be published. Required fields are marked *