ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸೊಂಟ ನೋವು ತುಂಬಾ ಜಾಸ್ತಿ ಆಗ್ತಾನೆ ಇದೆ. ಇದಕ್ಕಾಗಿ ಹಲವಾರು ಜನರು ಡಾಕ್ಟರ್ ಬಳಿ ಹೋಗಿ ಮಾತ್ರೆಗಳನ್ನ ತೆಗೆದುಕೊಂಡಿರುತ್ತೀರ. ಆದ್ರೆ ಯಾವಾಗ್ಲೂ ಸದಾ ಮಾತ್ರೆಗಳನ್ನೇ ತೆಗೆದುಕೊಳ್ಳುತ್ತಾ ಇದ್ದರೆ ನಿಧಾನವಾಗಿ ಅದು ನಮಗೆ ಅಡ್ಡ ಪರಿಣಾಮ ಬೀರಲು ಆರಂಭಿಸುತ್ತದೆ. ಹಾಗಾಗಿ ಇದರ ಬಗ್ಗೆ ಚಿಂತೆ ಮಾಡದೆ ಈ ಬೆನ್ನು ನೋವು ಹಾಗೂ ಸೊಂಟ ನೋವಿಗೆ ಕಾರಣ ಏನು ಹಾಗೂ ಉತ್ತಮ ಪರಿಹಾರ ಏನು ಅನ್ನೋದನ್ನ ನೋಡೋಣ.
ಈಗಿನ ನಮ್ಮ ಜೀವನ ಶೈಲಿಯಲ್ಲಿ ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದು, ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದು, ದ್ವಿಚಕ್ರ ವಾಹನದಲ್ಲಿ ಬಹಳಷ್ಟು ದೂರ ಪ್ರಯಾಣ ಮಾಡುವುದರಿಂದಲೂ ಆಫೀಸ್ ನಲ್ಲಿ ದೀರ್ಘ ಕಾಲದವರೆಗೆ ಕುಳಿತಲ್ಲೇ ಕುಳಿತಿರುವುದರಿಂದ ಸಹ ಸೊಂಟ ನೋವು, ಬೆನ್ನು ನೋವು ಬರತ್ತೆ. ಈ ಬೆನ್ನು ನೋವು ಬರದೆ ಇರುವ ಹಾಗೇ ನಾವು ಸಾಕಷ್ಟು ಮಾತ್ರೆಗಳನ್ನು ಸಹ ತೆಗೆದುಕೊಳ್ಳುತ್ತೇವೆ. ಸ್ಟಿರಾಯ್ಡ್ಸ್ ಮತ್ತು ಪೆನ್ ಕಿಲ್ಲರ್ ತೆಗೆದುಕೊಳ್ಳುವುದರಿಂದ ಆ ಕ್ಷಣಕ್ಕೆ ಕಡಿಮೆ ಆದಂತೆ ಅನಿಸಿದರೂ ಸಹ ಮತ್ತೆ ನೋವು ಕಾಣಿಸಿಕೊಳ್ಳುತ್ತದೆ ಅದಲ್ಲದೆ ಪದೇ ಪದೇ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮ ಸಹ ಬೀರುತ್ತವೇ.
ನಮ್ಮ ಮೂಳೆಗಳ ಬೆಳವಣಿಗೆಗೆ ಕ್ಯಾಲ್ಶಿಯಂ ಅಂಶ ಬೇಕಾಗಿರುವುದರಿಂದ ಹಾಲಿನಲ್ಲಿ ಹೆಚ್ಚು ಕ್ಯಾಲ್ಶಿಯಂ ಅಂಶ ಇರುವುದರಿಂದ ಹಾಲನ್ನು ಹೆಚ್ಚು ಕುಡಿಯಬೇಕು. ಮೊಳಕೆ ಕಟ್ಟಿದ ಕಾಳುಗಳು ಹಾಗೂ ಹೆಚ್ಚು ಪೌಷ್ಟಿಕಾಂಶ ಇರುವಂತಹ ಆಹಾರವನ್ನು ಸೇವಿಸಬೇಕು. ನೀರನ್ನು ಜಾಸ್ತಿ ಕುಡಿಯಬೇಕು. ಇವುಗಳ ಜೊತೆಗೆ ವಾಕಿಂಗ್, ಯೋಗ ಪ್ರಾಣಾಯಾಮ ಮಾಡುವುದರ ಜೊತೇಗೆ ನಮ್ಮ ದೇಹ ಸದಾಕಾಲ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಸೊಂಟ ನೋವು ಮತ್ತೆ ಮತ್ತೆ ಮರುಕಳಿಸದಂತೆ ಪೂರ್ತಿಯಾಗಿ ಕಡಿಮೆ ಆಗುವ ಹಾಗೇ ಮಾಡಲು ಯಾವ ಮನೆ ಮದ್ದು ಇದೆ ಅನ್ನೋದನ್ನ ನೋಡೋಣ.
ಈ ಮನೆ ಮದ್ದು ಮಾಡಲು ಬೇಕಾಗಿರುವುದು ಮೆಂತೆ 200 ಗ್ರಾಮ್, ಜೀರಿಗೆ 100 ಗ್ರಾಮ್ ಹಾಗೂ ಕಾಳುಮೆಣಸು 25 ಗ್ರಾಮ್. ಈ ಮೂರು ಪದಾರ್ಥಗಳನ್ನೂ ಸಹ ಹುರಿದುಕೊಳ್ಳದೆ ಹಾಗೇ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ಈ ಪುಡಿಯನ್ನು ಸೇರಿಸಿ ಗಂಟು ಆಗದ ಹಾಗೇ ಮಿಕ್ಸ್ ಮಾಡಿಕೊಂಡು ಅದಕ್ಕೆ ಒಂದು ಟೀ ಸ್ಪೂನ್ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಶುಗರ್ ಇರುವವರು ರುಚಿಗೆ ಬೇಕಿದ್ದಲ್ಲಿ ಸೈನ್ದವ ಲವನವನ್ನು ಸೇರಿಸಿಕೊಳ್ಳಬಹುದು. ಉಳಿದವರು ಬೆಲ್ಲ ಸೇರಿಸಿಕೊಳ್ಳಲೂ ಬಹುದು. ಇದನ್ನು ದಿನಕ್ಕೆ ಎರಡು ಸಲ ಅಂದರೆ ಬೆಳಿಗ್ಗೆ ತಿಂಡಿ ಆದ ನಂತರ ಹಾಗೂ ರಾತ್ರಿ ಊಟ ಆದ ಅರ್ಧ ಗಂಟೆಯ ನಂತರ ಇದನ್ನು ಕುಡಿಯಬೇಕು. ಇದನ್ನು ಸತತವಾಗಿ ಒಂದು ವಾರ ಮಾಡಿದಲ್ಲಿ ಇದರ ಪರಿಣಾಮ ತಿಳಿಯುತ್ತದೆ. ನಿಧಾನವಾಗಿ ಕಡಿಮೆ ಆಗುವುದು ತಿಳಿಯುತ್ತದೆ. ಹಾಗೆ ಬೇಕಿದ್ದಲ್ಲಿ ಮತ್ತೆ ಮಾಡಿಕೊಳ್ಳಲೂ ಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಬೇರೆ ಯಾವುದೇ ಸಣ್ಣ ಪುಟ್ಟ ಕಾಯಿಲೆಗಳು ಇದ್ದರೂ ಸಹ ಕಡಿಮೆ ಆಗುತ್ತದೆ.
ಮೆಂತೆ ಕಾಳು ಮೂಳೆಗಳಿಗೆ ಬಲವನ್ನು ನೀಡುತ್ತದೆ. ಒಬೆಸಿಟಿಯನ್ನ ದೂರ ಮಾಡಿ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಡಯಾಬಿಟಿಸ್ ಹಾಗೂ ವಾತವನ್ನು ಸಹ ಕಡಿಮೆ ಮಾಡುತ್ತದೆ. ಜೀರಿಗೆಯನ್ನು ಬಳಸುವುದರಿಂದಲೂ ಸಹ ನಮ್ಮ ದೇಹದಲ್ಲಿ ಯಾವ ಭಾಗದಲ್ಲಿ ನೋವು ಇದ್ದರೂ ಸಹ ಕಡಿಮೆ ಮಾಡುತ್ತದೆ. ನಾವು ತಿಂದ ಆಹಾರ ಬೇಗ ಜೀರ್ಣ ಆಗಲು ಸಹಾಯ ಮಾಡಿ ಜೀರ್ಣ ಶಕ್ತಿಗೆ ಸಹಾಯ ಮಾಡುತ್ತದೆ. ಹಾಗೆ ಕಾಳು ಮೆಣಸು ಇದರಲ್ಲಿ ಸಹ ನಮ್ಮ ನೋವನ್ನು ಕಡಿಮೆ ಮಾಡುವ ಗುಣ ಇದ್ದು ಇದೂ ಸಹ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.