ಬಡವರ ಪಾಲಿನ ಸೇಬು ಎಂದೇ ಖ್ಯಾತವಾಗಿರುವ ಸೀಬೆಹಣ್ಣು ಎಲ್ಲ ಕಾಯಿಲೆಗಳಿಗೆ ರಾಮಬಾಣ ಎಂದು ಹೇಳಬಹುದು. ಇವತ್ತು ಈ ಲೇಖನದ ಮೂಲಕ ಸೀಬೆಹಣ್ಣಿನ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ಸೀಬೆ ಹಣ್ಣಿನಲ್ಲಿ ಇರುವ ಜೀವಸತ್ವ ದಿಂದ ನಮ್ಮಲ್ಲಿ ನಗು ವಸಡುಗಳು ಗಟ್ಟಿಗೊಳ್ಳುತ್ತದೆ. ಬಾಯಿ ಹುಣ್ಣು ಹಾಗೂ ವಸಡಿನ ರಕ್ತಸ್ರಾವ ಹೀಗೆ ಬಾಯಿಗೆ ಸಂಬಂಧಿಸಿದ ಕೆಲವು ಕಾಯಿಲೆಗಳು ಸಹ ಗುಣಮುಖವಾಗುತ್ತವೆ. ಇನ್ನು ಸೀಬೆ ಎಲೆ ಚಿಗುರು ಅದರಿಂದ ಕಷಾಯವನ್ನು ತಯಾರಿಸಿ ಉಪ್ಪು ಹಾಕಿ ದಿನಕ್ಕೆ ಮೂರು ಬಾರಿ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ದುರ್ನಾತವನ್ನು ಹೋಗಲಾಡಿಸಿ ಕೊಳ್ಳಬಹುದು. ಸೀಬೆಹಣ್ಣು ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಯುವಂತೆ ಮಾಡುತ್ತದೆ ಕೆಂಪು ಸಿಬಿ ಯಲ್ಲಿರುವ ವಿಟಮಿನ್ ಸಿ ಮತ್ತು ನಾರಿನ ಅಂಶ ಅಧಿಕ ಪ್ರಮಾಣದಲ್ಲಿರುತ್ತವೆ ನಾರಿನ ಅಂಶ ಸಣ್ಣಕರುಳಿನಲ್ಲಿ ಆಹಾರ ಸರಾಗವಾಗಿ ಹೋಗಲು ಸಹಕರಿಸಿ ನಮ್ಮ ಜೀರ್ಣಕ್ರಿಯೆಯನ್ನು ಸರಿಮಾಡುತ್ತದೆ. ಹಸಿವನ್ನು ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳಬೇಕು ಎನ್ನುವವರಿಗೆ ಸೀಬೆಹಣ್ಣು ಉತ್ತಮ ಮನೆಮದ್ದು. ಸ್ಥೂಲಕಾಯ ಇರುವವರಿಗೆ ಸೀಬೆ ಹಣ್ಣಿನ ಸೇವನೆ ಬಹಳ ಉತ್ತಮ. ಸೀಬೆ ಹಣ್ಣಿನಲ್ಲಿ ಇರುವಂತಹ ಅಧಿಕ ಮಟ್ಟದ ನಾರಿನ ಅಂಶ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸೇಬು ಕಿತ್ತಳೆ ದ್ರಾಕ್ಷಿ ಮುಂತಾದ ಹಣ್ಣುಗಳಿಗೆ ಹೋಲಿಸಿದರೆ ಸೀಬೆ ಹಣ್ಣಿನಲ್ಲಿ ಇರುವಂತಹ ಸಕ್ಕರೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಹಾಗಾಗಿ ಸೀಬೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹ ಸಮಸ್ಯೆಯಿಂದ ದೂರವಿರಬಹುದು. ಸೀಬೆಹಣ್ಣು ಗರ್ಭಿಣಿ ಸ್ತ್ರೀಯರಿಗೆ ಬಹಳ ಉತ್ತಮ ಸೀಬೆ ಹಣ್ಣಿನ ಬೀಜವನ್ನು ತೆಗೆದು ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ ಹೃದ್ರೋಗ, ಅರಿಶಿನ ಕಾಮಾಲೆ , ಉಬ್ಬಸ ಹಾಗೂ ಕ್ಷಯರೋಗ ದಂತಹ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ಗರ್ಭಾವಸ್ಥೆಯಲ್ಲಿ ಸೀಬೆಹಣ್ಣು ಪೋಲಿಕ್ ಆಮ್ಲ ವಿಟಮಿನ್ ಬಿ 9 ಇರುವಂತಹ ಸೀಬೆಹಣ್ಣು ಮಗುವಿನ ನರಮಂಡಲದ ಪೋಷಣೆಗೆ ಸಹಾಯಕಾರಿಯಾಗುತ್ತದೆ ಅಷ್ಟೇ ಅಲ್ಲದೆ ನರವೈಜ್ಞಾನಿಕ ಅಸ್ವಸ್ಥತೆಯಿಂದ ಶಿಶುವನ್ನು ಕಾಪಾಡುತ್ತದೆ. ಸೀಬೆ ಹೂವುಗಳನ್ನು ನುಣ್ಣಗೆ ಅರೆದು ಅದನ್ನು ಗಾಯವಾದ ಜಾಗಕ್ಕೆ ಪಟ್ಟು ಹಾಕಿದಲ್ಲಿ ಶೀಘ್ರವೇ ಗುಣವಾಗುವುದು. ಶ್ರೀಗಂಧದ ಜೊತೆ ಸೀಬೆ ಎಲೆಯನ್ನು ಸೇರಿಸಿ ಹಚ್ಚಿದರೆ ಕಜ್ಜಿ ಹುಳುಕಡ್ಡಿ ಇಂತಹ ಸಮಸ್ಯೆಗಳು ಗುಣವಾಗುತ್ತವೆ. ಇದೇ ಲೇಖನವನ್ನು ತಲೆ ಹೊಸ ಹಚ್ಚಿಕೊಂಡು ಒಂದೆರಡು ಗಂಟೆ ನಂತರ ಬಿಟ್ಟು ಸ್ನಾನ ಮಾಡಿದರೆ ಹೇನು ಕೂಡ ಮಾಯವಾಗುತ್ತದೆ.
ಸಿಬೆ ಹಣ್ಣಿನಿಂದ ಮಾನಸಿಕ ಒತ್ತಡವನ್ನು ಸಹ ನಿಯಂತ್ರಿಸಲು ಸಾಧ್ಯವಾಗುತ್ತದೆ . ಇನ್ನು ಕ್ಯಾನ್ಸರ್ ನಿರೋಧಕ ಅಂಶ ಇದರಲ್ಲಿ ಇರುವುದರಿಂದ ಕ್ಯಾನ್ಸರ್ ರೋಗ ಬರದಂತೆ ಸಹ ತಡೆದುಕೊಳ್ಳಬಹುದು. ದೇಹದಲ್ಲಿ ಅಪಾಯವನ್ನು ಉಂಟು ಮಾಡುವ ಜೀವಕೋಶಗಳನ್ನು ಸಹ ನಾಶಮಾಡುತ್ತದೆ. ಸೀಬೆಹಣ್ಣಿನ ಲ್ಲಿ ಲೈಕೊಪಿನ್ ಎಂಬ ಪ್ರಬಲ ಆಂಟಿಆಕ್ಸಿಡೆಂಟ್ ಇದ್ದು ಇದು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಕಣ್ಣಿನ ದೃಷ್ಟಿ ಹೆಚ್ಚಿಸಲು ಸೀಬೆಹಣ್ಣು ಉತ್ತಮ ಮನೆಮದ್ದು . ಇನ್ನು ಇದು ಮಧುಮೇಹ ಸ್ನೇಹಿಯು ಆಗಿದೆ. ಸಿಬಿ ಕಾಯಿಗಳನ್ನು ಹಲ್ಲಿನಲ್ಲಿ ಕಚ್ಚಿ ತಿನ್ನುವುದರಿಂದ ದಂತಕ್ಷಯ ಬಾದೆಗಳು ಕಾಣಿಸುವುದಿಲ್ಲ . ಸಿಬೇ ಎಲೆಗಳನ್ನು ನುಣ್ಣಗೆ ರುಬ್ಬಿ ಇದನ್ನು ಮೈಕೈಗಳಿಗೆ ಹಚ್ಚಿಕೊಂಡು ನೀರಿನಲ್ಲಿ ಸ್ನಾನ ಮಾಡಿದರೆ ಬೆವರಿನ ದುರ್ವಾಸನೆ ಸಹ ಹೋಗುತ್ತದೆ. ಸೀಬೆ ಹಣ್ಣಿನಲ್ಲಿ ಅಡಗಿರುವ ಅಂತಹ ಆರೋಗ್ಯಕಾರಿ ಉಪಯೋಗಗಳು ಒಂದೆರಡಲ್ಲ ಹತ್ತು ಹಲವಾರು ಇವೆ.