Health tips For Men ಇತ್ತೀಚಿನ ಜೀವನಶೈಲಿಯೋ ಅಥವಾ ಯಾವುದೇ ಕಡಿಮೆ ಇಲ್ಲದೆ ತಮ್ಮ ಇಷ್ಟದಂತೆ ಬದುಕುತ್ತಿರುವುದರಿಂದಲೋ ತಮ್ಮಿಷ್ಟದ ಆಹಾರ ಪದ್ಧತಿಗಳಿಂದಲೋ ಏನೋ ಪುರುಷರಲ್ಲಿ ಬಂಜೆತನವು ಹೆಚ್ಚು ಕಾಡುತ್ತಿದೆ. ಹೆಚ್ಚುತ್ತಿರುವ ಒತ್ತಡದಿಂದ ಪುರುಷರು ಸಂತಾನವನ್ನು ಪಡೆಯಲಾಗದೆ ಹೆಣಗಾಡುತ್ತಿದ್ದಾರೆ. ಹೆಚ್ಚು ಒತ್ತಡ ಪೂರಕವಾದ ಜೀವನ ಹೆಚ್ಚು ಒತ್ತಡ ಜೀವನ ಶೈಲಿಯು ಇವರಲ್ಲಿ ಹಾರ್ಮೋನ್ ಗಳ ಅಸಮತೋಲನೆಯನ್ನು ಉಂಟುಮಾಡಿದೆ.
ಮೊಬೈಲ್ ಬಂದ ಮೇಲೆ ಅಂತೂ ಸಾಮಾನ್ಯವಾಗಿ ಹೆಚ್ಚಾಗುತ್ತಿರುವ ಈ ಬಂಜೆತನದ ಸಮಸ್ಯೆ ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲೂ ಕಾಣುತ್ತಿದೆ. ದೈಹಿಕ ವ್ಯಾಯಾಮ ಇಲ್ಲದೆ ಇರುವುದು ಸಮಯಕ್ಕೆ ಸರಿಯಾದಂತಹ ನಿದ್ರೆ ಇಲ್ಲದಿರುವುದು ಇವೆಲ್ಲವೂ ಕೂಡ ಈ ಪುರುಷರ ಫಲವತ್ತತೆಯನ್ನ ಕಳೆದುಕೊಳ್ಳಲು ಕಾರಣವಾಗುತ್ತಿದೆ.
ತಡ ರಾತ್ರಿಯವರಿಗೆ ಇರುವ ಕೆಲಸದಿಂದ ಸಮಯಕ್ಕೆ ಸರಿಯಾಗಿ ನಿದ್ರೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಇಡೀ ದಿನ ಆಯಾಸವನ್ನು ಅನುಭವಿಸುವಂತಾಗುತ್ತದೆ. ಇದೇ ರೀತಿ ಪ್ರಮೇಣ ಅದು ಪುರುಷರಲ್ಲಿ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಇದೇ ಪುರುಷರ ಬಂಜೆತನವಾಗಿ ಬದಲಾಗುತ್ತದೆ. ಇತ್ತೀಚಿಗಂತೂ ತುಂಬಾ ಹೆಚ್ಚಾಗಿ ಕಾಡುತ್ತಿರುವ ಈ ವ್ಯವಸ್ಥೆ ಸರ್ವೇಸಾಮಾನ್ಯವಾಗಿಬಿಟ್ಟಿದೆ.
ಈ ರೀತಿಯ ಒತ್ತಡದಿಂದ ಪುರುಷರು ಧೂಮಪಾನ ಮಧ್ಯಪಾನಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಹಾಗೂ ಜಂಕ್ ಫುಡ್ ಗಳನ್ನ ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯಪಾನ ಹಾಗೂ ಧೂಮಪಾನಗಳು ಪುರುಷರ ಲಿವರ್ ಗಳಿಗಷ್ಟೇ ಅಲ್ಲದೆ ಪುರುಷರ ಫಲವತ್ತತೆಯನ್ನು ಏರುಪೇರುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂತಾನ ಹೀನರಾಗಿ ಬಾಳುವುದಕ್ಕಿಂತ ಕೆಟ್ಟ ಚಟಗಳಾದ ಧೂಮಪಾನ ಮಧ್ಯಪಾನಗಳನ್ನು ಬಿಟ್ಟು ಒಳ್ಳೆಯ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳನ್ನು ರೂಡಿಸಿಕೊಳ್ಳುವುದು ಉತ್ತಮ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇದನ್ನೂ ಓದಿ ಪೈಲ್ಸ್ ಮೂಲವ್ಯಾದಿ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಇದೆ ಈ ಸುಲಭ ಮನೆಮದ್ದು