ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ತುಪ್ಪಕ್ಕೆ ಅದರದ್ದೇ ಆದ ವಿಶೇಷವಾದ ಮಹತ್ವ ಇದ್ದು ತುಪ್ಪಕ್ಕೆ ಅಗ್ರಸ್ಥಾನ ನೀಡಲಾಗಿದೆ. ಹಲವಾರು ವರ್ಷಗಳಿಂದ ತುಪ್ಪವನ್ನು ಒಂದು ಔಷಧದ ರೀತಿಯಲ್ಲಿ ಸಾಕಷ್ಟು ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೇ. ತುಪ್ಪದಲ್ಲಿ ಕರಗುವ ಬಿಂದು ಅಧಿಕವಾಗಿದೆ. ಹೀಗಾಗಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಾಗೂ ಇನ್ನಿತರ ಪದಾರ್ಥಗಳ ತಯಾರಿಕೆಯಲ್ಲಿ ತುಪ್ಪ ಉತ್ತಮವಾದದ್ದು. ನಾವು ಸೇವಿಸುವ ಆಹಾರ ಪದಾರ್ಥಗಳಿಂದ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಕೆ ಇವುಗಳನ್ನು ಹೀರಿಕೊಳ್ಳಲು ನಮಗೆ ತುಪ್ಪ ಅವಶ್ಯವಾಗಿ ಸಹಾಯಕಾರಿ ಆಗಿದೆ. ಈ ವಿಟಮಿನ್ ಗಳು ಕಣ್ಣು, ಚರ್ಮ ದ ಆರೋಗ್ಯಕ್ಕೆ ಹಾಗೂ ಇನ್ನಿತರ ಕಾರ್ಯಗಳಿಗೆ ಸಹ ಬೇಕಾಗಿರುವಂತಹದ್ದು. ಇತ್ತೀಚೆಗೆ ಅರಿವಿಗೆ ಬಂದಿರುವುದು ಏನು ಅಂದರೆ, ಕೇಟೋಜನಿಕ್ ಆಹಾರ ಪದ್ಧತಿ, ಒಳ್ಳೆಯ ಕೊಬ್ಬು ನಮ್ಮ ದೇಹಕ್ಕೆ ಅವಶ್ಯಕ ಹಾಗೂ ಇವು ಬೇಕು ಎನ್ನುವುದು ವೈಜ್ಞಾನಿಕವಾಗಿ ಸಾಭೀತಾಗಿರುವ ವಿಷಯ. ಅಂತಹ ಉತ್ತಮ ಆಹಾರಗಳಲ್ಲಿ ತುಪ್ಪವೂ ಕೂಡ ಒಂದು. ಬೆಣ್ಣೆಯನ್ನು ಹದವಾಗಿ ಕಾಯಿಸಿ ಅತ್ಯುತ್ತಮ ಪದಾರ್ಥವಾಗಿ ಮಾರ್ಪಾಡು ಮಾಡಲಾಗುತ್ತದೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಆ ವಿಷಯ ಬಂದಾಗ ನಾವು ಹೆಚ್ಚಿನ ಗಮನ ನೀಡುತ್ತೇವೆ. ಅದರಲ್ಲೂ ಎಣ್ಣೆಯ ಅಂಶವನ್ನು ಹೊಂದಿರುವ ತುಪ್ಪ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.
ಊಟದ ಜೊತೆಗೆ ಒಂದಿಷ್ಟು ತುಪ್ಪವನ್ನು ಸೇವಿಸಿದರೆ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ತುಪ್ಪದಲ್ಲಿ ಇರುವಂತಹ ಕ್ಯಾಲರಿಗಳು , ಪೋಷಕಾಂಶಗಳು ಅಧಿಕವಾಗಿ ಇದ್ದುದರಿಂದ ಇವು ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತವೆ. ಇಷ್ಟೇ ಅಲ್ಲದೇ ತುಪೋಆ ಕೊಬ್ಬು ಕರಗುವ ವಿಟಮಿನ್ ಗಳಿಂದ ಹಾಗೂ ಅನೇಕ ಆರೋಗ್ಯಕರ ಕೊಬ್ಬಿನ ಆಮ್ಲಗಳಿಂದ ಕೂಡಿರುತ್ತದೆ. ಬಲದಾಯಕ ಮೂಳೆಗಳಿಂದ ಆರಂಭಿಸಿ ತೂಕವನ್ನು ಇಳಿಸುವವರೆಗೂ ಸಹ ತುಪ್ಪದ ಕಾರ್ಯ ವ್ಯಾಪ್ತಿ ಹರಡಿದೆ. ಆಹಾರ ತಜ್ಞರ ಪ್ರಕಾರ ಒಂದು ಲೋಟ ಬಿಸಿ ಹಾಲಿಗೆ ಒಂದು ಅಥವಾ ಎರಡು ಚಮಚ ತುಪ್ಪವನ್ನು ಹಾಕಿ ಕುಡಿಯಬೇಕು ಇದರಿಂದ ಮಲಬದ್ಧತೆ ಸಮಸ್ಯೆ ದೂರ ಆಗುತ್ತದೆ. ತುಪ್ಪದಲ್ಲಿ ಇರುವಂತಹ ಬ್ಯಾಟ್ರಿಕ್ ಆಮ್ಲವು ಕರುಳಿನ ಪದರದ ಆರೋಗ್ಯಕ್ಕೆ ನೆರವಾಗುತ್ತದೆ. ತುಪ್ಪವೂ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
ಶೀತ ಮತ್ತು ಕಟ್ಟಿದ ಮೂಗು ಇದರಿಂದಾಗಿ ಕೆಲವೊಂದು ಸಲ ತುಂಬಾ ಕಿರಿ ಕಿರಿ ಅನಿಸುತ್ತದೆ. ಇದರಿಂದಾಗಿ ಬಳಲುವುದು ಮಾತ್ರ ಅಲ್ಲದೆ ಉಸಿರಾಡಲೂ ಸಹ ತೊಂದರೆ ಉಂಟಾಗುತ್ತದೆ. ಮೊಯಿಗೂ ಕಟ್ಟುವುದರಿಂದ ನಿವಾರಣೆ ಪಡೆಯಲು ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ಉಗುರು ಬೆಚ್ಚಗೆ ಇದ್ದಾಗ ಮೂಗಿನ ಹೊಳ್ಳೆಗಳಿಗೆ ಬಿಡಬೇಕು. ಇದರಿಂದ ಒಳ್ಳೆಯ ಆರಾಮ ಸಿಗುತ್ತದೆ. ಈ ಮೂಲಕ ತುಪ್ಪವು ಮೂಗಿನಿಂದ ಗಂಟಲಿಗೆ ಸೇರಿ ಸೋಂಕನ್ನು ನಿವಾರಣೆ ಮಾಡುತ್ತದೆ. ತುಪ್ಪದಲ್ಲಿ ಇರುವಂತಹ ಅಮೈನೋ ಆಮ್ಲ ಇದು ಕೊಬ್ಬನ್ನು ಸ್ವಚ್ಛ ಗೊಳಿಸಿ ಕೊಬ್ಬಿನ ಕೋಅಹಗಳು ಕುಗ್ಗಲು ಸಹಾಯಕಾರಿ ಆಗಿದೆ. ಓಮೆಗ 3 ಮತ್ತು ಒಮೆಗ 6 ಕೊಬ್ಬಿನ ಆಮ್ಲವು ಅಧಿಕ ಭಾರವನ್ನು ಕಳೆದು ಕೊಬ್ಬನ್ನು ಕರಗಿಸಲು ಸಹ ನೆರವಾಗುತ್ತದೆ. ಮನೆಯಲ್ಲಿ ತಯಾರಿಸಿದ ತುಪ್ಪವನ್ನು ಆಹಾರದ ಜೊತೆಗೆ ಒಂದು ಚಮಚ ತೆಗೆದುಕೊಳ್ಳುವುದರಿಂದ ಜೀರ್ಣ ಕ್ರಿಯೆಗೆ ಸಹಾಯಕಾರಿ ಆಗುತ್ತದೆ.
ಮಧುಮೇಹದಿಂದ ಬಳಲುತ್ತಾ ಇದ್ದರೆ ಅನ್ನ ಮತ್ತಿ ಗೋಧಿಯಿಂದ ತಯಾರಿಸಿದ ಆಹಾರ ಅಷ್ಟು ಒಳ್ಳೆಯದಲ್ಲ. ಇವುಗಳನ್ನು ಅಧಿಕ ಗ್ಲೈಸಮಿಕ್ ಹೊಂದಿರುವ ಆಹಾರ ಎನ್ನಲಾಗುತ್ತದೆ. ಚಪಾತಿ , ಪರೋಟ, ಬಿಳಿ ಅಕ್ಕಿ ಅನ್ನ ಇವುಗಳ ಮೇಲೆ ತುಪ್ಪವನ್ನು ಹಾಕಿ ತಿನ್ನುವುದರಿಂದ ಗ್ಲೈಸಮಿಕ್ ಅಂಶ ಕಡಿಮೆ ಆಗುವುದು ಎಂದು ಹೇಳುತ್ತಾರೆ ಹಾಗೇ ಸರಿಯಾಗಿ ಜೀರ್ಣ ಆಗಳು ಸಹಾಯಕಾರಿ ಆಗುತ್ತದೆ. ತುಪ್ಪದಲ್ಲಿ ಇರುವ ಪರಿಪೂರ್ಣ ಕೊಬ್ಬು ರಕ್ತದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೋಗಲಾಡಿಸಲು ನೆರವಾಗುತ್ತದೆ. ನಿತ್ಯವೂ ತಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆದರೂ ತುಪ್ಪವನ್ನು ಸೇವಿಸುತ್ತಾ ಬಂದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರ ಇರಬಹುದು. ಮಾನವನ ಸೌಂದರ್ಯದ ಭಾಗವಾದ ತುಟಿಗಳು ಇವು ಸೂರ್ಯನ ಕಿರಣ , ಧೂಳು ಮುಂತಾದವುಗಳಿಂದ ತಮ್ಮ ನೈಸರ್ಗಿಕ ಗುಲಾಬಿ ಬಣ್ಣವನ್ನು ಕಳೆದುಕೊಂಡಿರುತ್ತವೆ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ತುಟಿಗಳಿಗೆ ಹಚ್ಚಿ ಮರುದಿನ ಬೆಳಗ್ಗೆ ಒಣಗಿರುವ ಪದರಗಳನ್ನು ತೆಗೆದರೆ ತುಟಿಗಳು ಸುಂದರವಾಗಿ ಕಾಣುತ್ತವೆ. ಈ ಮನೆಮದ್ದನ್ನು ಪ್ರತೀ ದಿನ ಮಾಡುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು.