ಎಲ್ಲಾ ಸಮಯದಲ್ಲೂ ಎಲ್ಲಾ ಸಂದರ್ಭಗಳಲ್ಲೂ ನಮಗೆ ಸಿಗುವ ಹಾಗೂ ಉಪಯೋಗಕ್ಕೆ ಬರುವ ಔಷಧೀಯ ಗುಣಗಳನ್ನು ಹೊಂದಿರುವ ಗಿಡ ಎಂದರೆ ಅದು ಬೇವಿನ ಗಿಡ. ಬೇವಿನ ಗಿಡದ ಪ್ರತಿಯೊಂದು ಭಾಗವೂ ಸಹ ಆರೋಗ್ಯಕ್ಕೆ ರಾಮಬಾಣ ಇದ್ದಂತೆ. ಬೇವಿನ ಮರ ಮನುಷ್ಯ ಉಸಿರಾಡಲು ಬೇಕಾದ ಶುದ್ಧವಾದ ಗಾಳಿಯನ್ನು ನಮಗೆ ಒದಗಿಸುತ್ತದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೇವಿನ ಮರವನ್ನು ಲಕ್ಷ್ಮೀ ದೇವಿಯ ಸ್ವರೂಪ ಎಂದು ತಿಳಿದು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಬೇವಿನಮರವನ್ನು ಮನೆಯ ವೈದ್ಯ ಎಂದೇ ಹೇಳಲಾಗುತ್ತದೆ. ಯುಗಾಧಿ ಹಬ್ಬದ ದಿನದಂದು ಬೇವಿನ ಎಲೆ, ಹೂವು ಮತ್ತು ಬೆಲ್ಲವನ್ನು ಸೇರಿಸಿ ತಿನ್ನುತ್ತೇವೆ.
ಬೇವಿನ ಹೂವನ್ನು ನಾವು ಸೇವಿಸುವುದರಿಂದ ಮನುಷ್ಯನ ದೇಹ ಗಟ್ಟಿ ಆಗುತ್ತದೆ. ಬೇವನ್ನು ಆಯುರ್ವೇದ ಶಾಸ್ತ್ರದ ಪ್ರಕಾರ ಸರ್ವರೋಗ ನಿವಾರಕ ಎಂದು ಹೇಳಲಾಗುತ್ತದೆ. ನಮ್ಮ ಶಾಸ್ತ್ರದ ಪ್ರಕಾರ ಯಾರು ಬೇವಿನ ಮರದ ಕೆಳಗೆ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರೋ ಅವರು ತುಂಬಾ ಆರೋಗ್ಯದಿಂದ ಕೂಡಿರುತ್ತಾರೆ ಎಂದು ಹೇಳುತ್ತಾರೆ. ನಮಗೆಲ್ಲ ತಿಳಿದಿರುವ ಹಾಗೆಯೇ ಹಿಂದಿನ ಕಾಲದಲ್ಲಿ ಹಲ್ಲು ಉಜ್ಜಲು ಯಾವುದೇ ಪೇಸ್ಟ್ ಮತ್ತು ಪೌಡರ್ ಗಳು ಇರುತ್ತ ಇರಲಿಲ್ಲ. ಬದಲಿಗೆ ಬೇವಿನ ಮರದ ಕಡ್ಡಿಗಳನ್ನು ಹಲ್ಲುಗಳನ್ನು ಸ್ವಚ್ಛ ಮಾಡಲು ಎಂದು ಬಳಸುತ್ತಾ ಇದ್ದರು. ಇದರಿಂದ ಎಷ್ಟೇ ವರ್ಷಗಳು ಆದರೂ ಸಹ ಹಲ್ಲುಗಳು ಗಟ್ಟಿಯಾಗಿ ಇರುತ್ತಿತ್ತು ಅಲ್ಲದೆ ಯಾವುದೇ ರೀತಿಯ ಹಲ್ಲಿನ ಸಮಸ್ಯೆಗಳೂ ಸಹ ಈಗಿನವರ ಹಾಗೆ ಹಿಂದಿನ ಕಾಲದ ಜನರಿಗೆ ಕಾಡುತ್ತಾ ಇರಲಿಲ್ಲ. ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಾ ಇವೆ. ಹಾಗಾಗಿ ಹಲ್ಲಿನ ಸಮಸ್ಯೆ ಇರುವವರು ಬೇವಿನ ಕಡ್ಡಿಯನ್ನು ಬಳಸಿ ಹಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ಮನೆಯನ್ನು ಸ್ವಚ್ಛ ಮಾಡುವಾಗ ಬಳಸಿದರೆ ಮನೆಯಲ್ಲಿ ಯಾವುದೇ ರೀತಿಯ ರೋಗ ತರುವಂತಹ ಕೆಟ್ಟ ಬ್ಯಾಕ್ಟೀರಿಯಾಗಳೂ ಸಹ ಇರುವುದಿಲ್ಲ. ನಮ್ಮಲ್ಲಿ ಇತ್ತೀಚೆಗೆ ಚರ್ಮ ಸಮಸ್ಯೆಗಳು ತುಂಬಾನೇ ಕಾಡುತ್ತಾ ಇವೆ. ಬೇವಿನ ಎಲೆಗಳನ್ನು ಸ್ನಾನ ಮಾಡುವ ಬಿಸಿ ನೀರಿಗೆ ಹಾಕಿಕೊಂಡು ಸ್ನಾನ ಮಾಡುವುದರಿಂದ ಎಲ್ಲಾ ರೀತಿಯ ಚರ್ಮ ರೋಗಗಳು ಸಹ ಮಾಯ ಆಗುತ್ತವೆ. ಅಷ್ಟೇ ಅಲ್ಲದೇ ಬೇವಿನ ಚಿಗುರು ಎಲೆಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಅಂತಹ ಕಾಯಿಲೆಗಳನ್ನು ಗುಣ ಮಾಡಿಕೊಳ್ಳಬಹುದು. ಹೊಟ್ಟೆಯಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಬೇವಿನ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಜಂತು ಹುಳಗಳನ್ನು ಸಹ ನಿವಾರಿಸಿ ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
ಶುಗರ್ ಕಾಯಿಲೆ ಇರುವವರು ದಿನಕ್ಕೆ 3 ಎಲೆಗಳಂತೆ ಸೇವಿಸಿದರೂ ಸಹ ಶುಗರ್ ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನಮ್ಮಲ್ಲಿ ಬಹಳಷ್ಟು ಜನರು ರೈತರು ಇದ್ದಾರೆ. ಆದರೆ ಅವರಿಗೆ ತಾವು ಬೆಳೆದ ಬೆಳೆಗಳನ್ನು ವರ್ಷಗಟ್ಟಲೆ ಹೇಗೆ ಹುಳಗಳು ಆಗದಂತೆ ಧಾನ್ಯಗಳು ಹಾಲು ಆಗದಂತೆ ಹೇಗೆ ಇಟ್ಟುಕೊಳ್ಳುವುದು ಎಂದು ಚಿಂತೆ ಆಗುತ್ತಾ ಇರುತ್ತದೆ. ಅದಕ್ಕೆ ಯಾವುದೇ ಧಾನ್ಯಗಳಲ್ಲಿ ಬೇವಿನ ಎಲೆಗಳನ್ನು ಹಾಕಿ ಶೇಖರಿಸುವುದು ಸೂಕ್ತ. ಬೆವನ ಎಲೆ ಯಾವುದೇ ರೀತಿಯ ಕ್ರಿಮಿಗಳು ಬಾರದಂತೆ ತಡೆದು ಧವಸ ಧಾನ್ಯಗಳನ್ನು ರಕ್ಷಿಸುತ್ತದೇ. ಬೇವಿನ ಮರದ ಖಾಂಡದಲ್ಲಿ 12 ರೀತಿಯ ಔಷಧೀಯ ಗುಣಗಳು ಇರುತ್ತದೆ ಬೇವಿನ ಮರದ ಖಾಂಡದ ಚುರನ್ನಯೂ ರಾತ್ರಿ ನೀರಿನಲ್ಲಿ ನೀನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ರಕ್ತ ಶುದ್ಧಿ ಆಗುತ್ತದೆ. ಅಲರ್ಜಿ ಅಂತಹ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಬಹಳಷ್ಟು ಜನರಿಗೆ ಮುಖದ ಮೇಲೆ ಮೊಡವೆ ಮತ್ತು ಕಪ್ಪು ಕಲೆಗಳು ಇರುತ್ತವೆ ಅದಕ್ಕೆ ಬೇವಿನ ಎಲೆಗಳನ್ನು ಪೆಅತ್ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಆದ ಕಪ್ಪು ಕಲೆಗಳು ಮತ್ತು ಮೊಡವೆಗಳನ್ನು ಹೋಗಲಾಡಿಸಿಕೊಳ್ಳಬಹುದು