Govt Home Scheme: ನಮ್ಮ ದೇಶದಲ್ಲಿ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಆಸೆ ಹೊಂದಿರುವವರು ಲಕ್ಷಾಂತರ ಜನರಿದ್ದಾರೆ. ಆದರೆ ಎಲ್ಲರಿಗೂ ಅವರಿಷ್ಟದ ಹಾಗೆ, ಕನಸಿನ ಹಾಗೆ ಮನೆ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗಿರುವುದಿಲ್ಲ. ಅದಕ್ಕೆ ಕಾರಣ ಹಲವು ಇರುತ್ತದೆ, ಹಲವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮವಾದ ಸಪೋರ್ಟ್ ಇಲ್ಲದೆ ಮನೆ ಮಾಡಿಕೊಳ್ಳಲು ಆಗಿರುವುದಿಲ್ಲ, ಈ ರೀತಿ ಆರ್ಥಿಕವಾಗಿ ಕಷ್ಟದಲ್ಲಿದ್ದು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಇರುವವರಿಗೆ ಕೇಂದ್ರ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ, ಈ ವೇಳೆ ಜನರನ್ನು ಆಕರ್ಷಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳಲ್ಲಿ ಒಂದು ಮನೆ ನೀಡುವ ಯೋಜನೆ ಆಗಿದೆ. ಲೋಕಸಭಾ ಚುನಾವಣೆಯ ವೇಳೆಗೆ ಜನರ ಮನಗೆಲ್ಲಬೇಕಾಗಿರುವ ಕಾರಣ, ಬಡವರಿಗೆ ಮತ್ತು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಇಟ್ಟುಕೊಂಡಿರುವರಿಗೆ ಇದೀಗ ಒಂದು ಗುಡ್ ನ್ಯೂಸ್ ನೀಡಿದೆ. ಮನೆ ಮಾಡಿಕೊಳ್ಳಲು ಹೆಚ್ಚು ಹಣ ಇಲ್ಲದವರು ಸಾಮಾನ್ಯವಾಗಿ ಬ್ಯಾಂಕ್ ಮೊರೆ ಹೋಗುತ್ತಾರೆ.
ಮನೆ ಕಟ್ಟುವುದಕ್ಕಾಗಿ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸೌಲಭ್ಯವಿದೆ. ಆದರೆ ಹೋಮ್ ಲೋನ್ ಗಳನ್ನು ತೆಗೆದುಕೊಂಡರೆ ಅದರಲ್ಲಿ ಬಡ್ಡಿ ಜಾಸ್ತಿ ಇರುತ್ತದೆ. ಪ್ರತಿ ತಿಂಗಳು ಬಡ್ಡಿ ಕಟ್ಟಿ, ಬೇಗ ಸಾಲ ತೀರಿಸುವುದಕ್ಕೂ ಕೂಡ ಜನರಿಗೆ ಕಷ್ಟ ಆಗುತ್ತದೆ. ಜನರಿಗೆ ಈ ತೊಂದರೆ ಆಗಬಾರದು ಎಂದು ಕೇಂದ್ರ ಸರ್ಕಾರ ಇದೀಗ ಹೊಸದೊಂದು ಉಪಾಯ ತಂದಿದೆ. ಅದೇನು ಎಂದರೆ, ಇನ್ನುಮುಂದೆ 40 ರಿಂದ 50 ಲಕ್ಷ ರೂಪಾಯಿವರೆಗು ಬ್ಯಾಂಕ್ ನಲ್ಲಿ ಲೋನ್ ಪಡೆದವರಿಗೆ ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ ಸರ್ಕಾರ.
Govt Home Scheme 2023
ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದು, ವಿಶೇಷವಾಗಿ ಬಡತನದಲ್ಲಿದ್ದು ತಮಗಾಗಿ ಒಂದು ಸೂರು ಕಟ್ಟಿಕೊಳ್ಳಬೇಕು ಎಂದು ಆಸೆ ಪಡುತ್ತಿರುವವರಿಗಾಗಿ, ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಸಾಲ ಪಡೆದರೆ, ಅಂಥವರಿಗೆ ಖಂಡಿತವಾಗಿ ಸಾಲದ ಮೇಲೆ ಸಬ್ಸಿಡಿ ಸಿಗುತ್ತದೆ. ಈ ಯೋಜನೆಯ ಸೌಲಭ್ಯ ಯಾರಿಗೆಲ್ಲಾ ಸಿಗುತ್ತದೆ ಎಂದು ನೋಡುವುದಾದರೆ, ಸ್ಲಮ್, ಕೊಳಗೇರಿ, ನಗರಗಳಲ್ಲಿ ಸ್ವಂತ ಮನೆ ಇಲ್ಲದೆ ವಾಸ ಮಾಡುತ್ತಿರುವವರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು.
ಈ ಯೋಜನೆಯ ಹೆಸರು ಗೃಹಸಾಲ ಸಬ್ಸಿಡಿ ಯೋಜನೆ 2023,ಈ ಯೋಜನೆಯ ಮೂಲಕ ಮನೆ ನಿರ್ಮಾಣ ಮಾಡುವುದಕ್ಕೆ 3 ರಿಂದ 5% ಸಬ್ಸಿಡಿ ಸರ್ಕಾರದಿಂದ ಸಿಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇದರ ಅರ್ಥ ಒಂದು ವೇಳೆ ನೀವು 40 ರಿಂದ 50 ಲಕ್ಷದವರೆಗು ಹೋಮ್ ಲೋನ್ ಪಡೆದಿದ್ದರೆ, ನಿಮಗೆ ವರ್ಷಕ್ಕೆ 9 ಲಕ್ಷ ರೂಪಾಯಿಯವರೆಗು ಸಬ್ಸಿಡಿ ಸಿಗುತ್ತದೆ. ಹೋಮ್ ಲೋನ್ ಅನ್ನು ಹೊಸದಾಗಿ ಪಡೆದಿರುತ್ತಾರೋ ಅಂಥವರ ಖಾತೆಗೆ ಮೊದಲೇ ಕೇಂದ್ರ ಸರ್ಕಾರದಿಂದ ಹಣ ಜಮೆ ಆಗಿರುತ್ತದೆ.
ಇದು ಜನರಿಗಾಗಿ ಕೇಂದ್ರ ಸರ್ಕಾರ ಹೊರತಂದಿರುವ ಒಂದು ಬೆಸ್ಟ್ ಪ್ಲಾನ್ ಆಗಿದ್ದು, ದೇಶದಲ್ಲಿ ಕಷ್ಟದಲ್ಲಿರುವ ಎಲ್ಲಾ ಜನರು ಕೂಡ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಆದರೆ ಈ ಯೋಜನೆ ಲಭ್ಯವಿರುವುದು ಸಿಟಿಗಳಲ್ಲಿ, ಸ್ಲಮ್ ಗಳಲ್ಲಿ ವಾಸ ಮಾಡುತ್ತಾ ಕಷ್ಟದಲ್ಲಿ ಇರುವವರಿಗೆ. ಹಳ್ಳಿಗಳಲ್ಲಿ ವಾಸ ಮಾಡುವವರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ.