ಮನುಷ್ಯನಿಗೆ ಅರೋಗ್ಯ ಎಷ್ಟು ಮುಖ್ಯವೋ ಕೆಲವೊಮ್ಮೆ ಸೌಂದರ್ಯ ಕೂಡ ಅಷ್ಟೇ ಮುಖ್ಯವಾಗಿ ಬೇಕಾಗಬಹುದು ಕೆಲವರು ತನ್ನ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವು ವಿಧಾನಗಳನ್ನು ಬಳಸುತ್ತಾರೆ. ಇನ್ನು ಕೆಲವರ ಮುಖದ ಮೇಲೆ ಚಿಕ್ಕ ಚಿಕ್ಕ ರಂದ್ರಗಳಿರುತ್ತವೆ. ಇವುಗಳನ್ನು ನಿವಾರಿಸಿಕೊಳ್ಳಲು ಹಲವು ರೀತಿಯಲ್ಲಿ ಹಣ ಖರ್ಚು ಮಾಡುತ್ತಾರೆ. ಆದ್ರೆ ಈಮೂಲಕ ಸುಲಭವಾಗಿ ಪರಿಹಾರ ಕಂಡುಕೊಳ್ಳುವ ಒಂದಿಷ್ಟು ಮನೆಮದ್ದನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.
ಮನೆಮದ್ದು: ಮುಖದ ಮೇಲಿನ ಚಿಕ್ಕ ಚಿಕ್ಕ ರಂದ್ರ ನಿವಾರಣೆಗೆ ಓಟ್ಸ್ ಪೌಡರ್ ಒಂದು ಚಮಚ, ಒಂದು ಚಮಚ ಮೊಸರು ಹಾಗೂ ಅರ್ಧ ಚಮಚ ನಿಂಬೆ ರಸ ಈ ಮೂರನ್ನು ಚನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಬೆಚ್ಚಗಿನ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಇದನ್ನು ಆಯಿಲ್ ಫೇಸ್ ಇರೋರು ವಾರದಲ್ಲಿ ಒಂದು ಬಾರಿ ಮಾಡಿ, ಇನ್ನು ನಾರ್ಮಲ್ ಫೇಸ್ ನವರು ತಿಂಗಳಲ್ಲಿ ಎರಡು ಬಾರಿ ಮಾಡಿ ಹೀಗೆ ೩-೪ ತಿಂಗಳು ಮಾಡುವುದರಿಂದ ಮುಖದಲ್ಲಿನ ರಂದ್ರಗಳು ನಿವಾರಣೆಯಾಗಿ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು
ಮತ್ತೊಂದು ಸುಲಭ ಮನೆಮದ್ದು; ನೆನಸಿ ಸಿಪ್ಪೆ ತಗೆದ 7ರಿಂದ 8 ಬಾದಾಮಿ ಬೀಜಗಳನ್ನು ತಗೆದುಕೊಂಡು ಪೇಸ್ಟ್ ತಯಾರಿಸಿಕೊಳ್ಳಿ, ಈ ಪೇಸ್ಟ್ ಗೆ ಒಂದು ಚಮಚ ನಿಂಬೆ ರಸವನ್ನು ಬೆರಸಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದ್ನನು ಮೇಲೆ ತಿಳಿಸಿದ ಹಾಗೆ ಆಯಿಲ್ ಫೇಸ್ ಇರೋರು ವಾರದಲ್ಲಿ ಒಮ್ಮೆ ಮಾಡಿ ಮಾಡಿ ನಾರ್ಮಲ್ ಫೇಸ್ ಇರೋರು ೨ ವಾರಕ್ಕೊಮ್ಮೆ ಮಾಡಿ. ಉತ್ತಮ ಪರಿಹಾರ ಪಡೆಯಬಹುದಾಗಿದೆ.