TATA Nexon: ನಮ್ಮ ದೇಶದಲ್ಲಿ ಜನರ ನಂಬಿಕೆ ಗಳಿಸಿರುವ ಕಾರ್ ಸಂಸ್ಥೆ ಟಾಟಾ ಸಂಸ್ಥೆ ಎಂದು ಹೇಳಬಹುದು. ಟಾಟಾ ಸಂಸ್ಥೆಯು ಸುರಕ್ಷತೆಯ ವಿಚಾರದಲ್ಲಿ ಜನರಿಗೆ ಹೆಚ್ಚು ಇಷ್ಟವಾಗುತ್ತದೆ, ಅಪಘಾತಗಳು ನಡೆದರು ಕೂಡ ಪ್ರಯಾಣಿಕರ ಪ್ರಾಣಕ್ಕೆ ಹಾನಿಯಾಗದ ಹಾಗೆ ಕಾಪಾಡಿರುವ ಹಲವು ಘಟನೆಗಳು ವೈರಲ್ ಆಗಿದೆ. ಕೆಲವು ಸಾರಿ ಡ್ರೈವ್ ಮಾಡುವವರ ಅಜಾಗರೂಕತೆ ಇಂದ ಅಪಘಾತ ನಡೆಯುತ್ತದೆ. ಇತ್ತೀಚೆಗೆ ನಡೆದಿರುವ ಅಂಥದ್ದೊಂದು ಘಟನೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ಛತ್ತೀಸ್ಘಡದಲ್ಲಿ. ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಟಾಟಾ ನೆಕ್ಸಾನ್ ಕಾರ್ ಅಪಘಾತಕ್ಕೆ ಒಳಗಾಗಿದೆ, ಹಲವು ಬಾರಿ ಪಲ್ಟಿ ಹೊಡೆದು ಅಪಘಾತ ಆಗಿದ್ದರು ಕೂಡ, ಒಳಗಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ, ಆದರೆ ಪ್ರಾಣಕ್ಕೆ ಯಾವುದೇ ಹಾನಿ ಆಗಿಲ್ಲ. NH 43ಯಲ್ಲಿ ಈ ಘಟನೆ ನಡೆದಿದ್ದು, ಬೈಕುಂತಪುರ ರೈಲ್ವೆ ಸ್ಟೇಶನ್ ನಲ್ಲಿ ಆಕ್ಸಿಡೆಂಟ್ ಆಗಿದೆ, ಈ ಅಪಘಾತದ ವಿಡಿಯೋವನ್ನು ನಿಖಿಲ್ ರಾಣಾ ಅವರು ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಇರುವುದು ಏನು ಎಂದರೆ, ಟಾಟಾ ನೆಕ್ಸಾನ್ ಕಾರ್ ಓವರ್ ಸ್ಪೀಡ್ ಆಗಿ ಚಲಿಸುತ್ತಿದ್ದಾಗ ಕಂಟ್ರೋಲ್ ತಪ್ಪಿ ಅಪಘಾತಕ್ಕೆ ಒಳಗಾಗಿದ್ದು, ಕಾರ್ ಸ್ಟಾಪ್ ಆಗುವುದಕ್ಕಿಂತ ಮೊದಲು ಹಲವು ಸಾರಿ ಪಲ್ಟಿ ಹೊಡೆದಿದೆ. ಆದರೆ ಕಾರ್ ನ ಒಳಗೆ ಇರುವ ಪ್ರಯಾಣಿಕರ ಪ್ರಾಣಕ್ಕೆ ಹಾನಿ ಆಗಿಲ್ಲ. ಈ ಆಕ್ಸಿಡೆಂಟ್ ಆಗುವುದಕ್ಕೆ ಕಾರಣ ಹೈ ಸ್ಪೀಡ್ ಆಗಿದ್ದು, ಅಂದು ರೋಡ್ ಗಳು ಮಳೆಯಿಂದ ಒದ್ದೆ ಆಗಿದ್ದವು. ಸ್ಪೀಡ್ ಆಗಿ ಡ್ರೈವ್ ಮಾಡುವಾಗ ಓವರ್ ಸ್ಪೀಡ್ ಇಂದಾಗಿ ಡ್ರೈವರ್ ಗೆ ಕಂಟ್ರೋಲ್ ತಪ್ಪಿ, ಕಾರ್ ಆ-ಕ್ಸಿಡೆಂಟ್ ಆಗಿದೆ.
ಈ ಆ-ಕ್ಸಿಡೆಂಟ್ ಆದಾಗ, ಆ ಕಾರ್ ಬೇರೆ ಯಾವುದೇ ಕಾರ್ ಗೆ ಡಿಕಿ ಹೊಡೆದಿಲ್ಲ. ಈ ಆಕ್ಸಿಡೆಂಟ್ ನಲ್ಲಿ ಕಾರ್ ನ ಬಾನೆಟ್, ಕಾರ್ ಡೋರ್, ರೂಫ್ ಮತ್ತು ಟೈಲ್ ಗೇಟ್ ಎಲ್ಲವೂ ಢಮಾರ್ ಆಗಿದೆ. ಕಾರ್ ನ ಮುಂಭಾಗ ಮತ್ತು ಹಿಂಭಾಗದಲ್ಲಿ ಇರುವ ವಿಂಡೋಗಳು ಕೂಡ ಹಾಳಾಗಿವೆ. ಕೊನೆಯದಾಗಿ SUV ಕಾರ್ ಅನ್ನು ಕ್ರೇನ್ ಸಹಾಯ ಪಡೆದು ಕಾರ್ ನ ಹೊರತೆಗೆಯಲಾಗಿದೆ. ಈ ಆಕ್ಸಿಡೆಂಟ್ ನೋಡಿದರೆ, ಟಾಟಾ ನೆಕ್ಸಾನ್ ಕಾರ್ ಎಷ್ಟು ಸ್ಟ್ರಾಂಗ್ ಎಂದು ಗೊತ್ತಾಗುತ್ತಿದೆ.
tata nexon safety
ಈ ಆ-ಕ್ಸಿಡೆಂಟ್ ಆದ ನಂತರ ಕಾರ್ ನ ಕ್ಯಾಬಿನ್ ಮತ್ತು ಪಿಲ್ಲರ್ ಈ ಎರಡಕ್ಕೂ ಯಾವುದೇ ತೊಂದರೆ ಆಗಿಲ್ಲ. ಹಾಗೆಯೇ ರೂಫ್ ಗೆ ಕೂಡ ಯಾವುದೇ ತೊಂದರೆ ಆಗಿಲ್ಲ, ಹಾಗೆಯೇ ಟಾಟಾ ನೆಕ್ಸಾನ್ ಕಾರ್ NCAP ನಲ್ಲಿ ಸ್ಟಾರ್ ರೇಟಿಂಗ್ ಪಡೆದಿರುವ ಮೊದಲ ಕಾರ್ ಎನ್ನಿಸಿಕೊಂಡಿದೆ. ಈ ಕಾರ್ ನ ಮಾಲೀಕ ಕೂಡ ಘಟನೆಗ ಬಗ್ಗೆ ಮಾತನಾಡಿ, ಇದು ಚಾಲಕನ ತಪ್ಪು ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ. ರಸ್ತೆಗಳು ಒದ್ದೆ ಆಗಿದ್ದ ಕಾರಣದಿಂದ ಈ ರೀತಿ ಆಗಿದೆ, ನಿಧಾನವಾಗಿ ಕಾರ್ ಓಡಿಸಬೇಕಿತ್ತು ಎಂದು ಹೇಳಿದ್ದಾರೆ.
ಈ ಆ-ಕ್ಸಿಡೆಂಟ್ ಘಟನೆ ನೋಡಿದರ್ಸ್, ಮಳೆ ಬಂದು ರಸ್ತೆ ಒದ್ದೆ ಇರುವಾಗ ನಿಧಾನವಾಗಿ ವಾಹನ ಚಲಿಸಬೇಕು ಎನ್ನುವುದನ್ನು ತಿಳಿಸುವ ಒಂದು ಉದಾಹರಣೆ ಆಗಿದೆ. ಈ ವೇಳೆ ಡ್ರೈವಿಂಗ್ ಸ್ಪೀಡ್ ಅನ್ನು 50% ಅಷ್ಟು ಕಡಿಮೆ ಮಾಡಬೇಕು ಎಂದು ಸೂಚನೆ ನೀಡಲಾಗುತ್ತಿದೆ. ಸ್ಪೀಡ್ ಲಿಮಿಟ್ ಒಳಗೆಯೇ ಡ್ರೈವ್ ಮಾಡಬೇಕು. ಟೈರ್ ಗಳ ಸ್ಥಿತಿ ಹೇಗಿರುತ್ತದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗುತ್ತದೆ.
ಟಾಟಾ ನೆಕ್ಸಾನ್ ನಲ್ಲಿ ಸುರಕ್ಷತೆಗಾಗಿ ಯಾವ ಅಂಶಗಳು ಇದೆ ಎಂದು ನೋಡುವುದಾದರೆ, 6 ಸ್ಟ್ಯಾಂಡರ್ಡ್ ಏರ್ ಬ್ಯಾಗ್ ಗಳು, Electronic Stability Control, ABS, EBD, ISOFIX, ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್, ಪಾರ್ಕಿಂಗ್ ಸೆನ್ಸಾರ್ ಇದೆಲ್ಲವೂ ಇದೆ. ಇತ್ತೀಚೆಗೆ ಟಾಟಾ ನೆಕ್ಸಾನ್ ಅಪ್ಗ್ರೇಡ್ ಸಹ ಆಗಿದ್ದು. ಬೇರೆ ಎಲ್ಲಾ ಕಾರ್ ಗಳಿಗೆ ಪೈಪೋಟಿ ನೀಡುತ್ತಿದೆ. ಒಂದು ವೇಳೆ ನೀವು ಸುರಕ್ಷಿತವಾದ ಕಾರ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಟಾಟಾ ನೆಕ್ಸಾನ್ ಒಳ್ಳೆಯ ಆಯ್ಕೆ ಆಗಿದೆ.