Bangals for women: ಹೆಣ್ಣು ಮಕ್ಕಳು ಮದುವೆಯ ಮೊದಲು ಹಾಗೂ ಮದುವೆಯ ನಂತರ ಸದಾ ಕಾಲ ಅವರ ಕೈಯಲ್ಲಿ ಬಳೆಗಳಿದ್ದರೆ ಚೆನ್ನ. ಮುತ್ತೈದೆಯ ಲಕ್ಷಣಗಳಲ್ಲಿ ಬಳೆಯೂ ಒಂದು ಪ್ರಮುಖವಾಗಿದೆ. ಹೆಣ್ಣು ಮಕ್ಕಳು ಬಳೆಯನ್ನು ಹಾಕಿಕೊಂಡು ಗಲಗಲನೆ ಶಬ್ಧದಿಂದ ಮನೆಯ ತುಂಬಾ ಓಡಾಡಿದರೆ ಮನೆ ಸಂತಸದಿಂದ ತುಂಬುತ್ತದೆ ಹಾಗೂ ಆ ಮನೆಗೆ ಒಳ್ಳೆಯದಾಗುತ್ತದೆ. ಹಾಗಾದರೆ ಹೆಣ್ಣು ಮಕ್ಕಳು ಯಾವ ಬಣ್ಣದ ಬಳೆಗಳನ್ನು ಧರಿಸಬೇಕು ಯಾವ ಬಣ್ಣದ ಬಳೆಗಳನ್ನು ಧರಿಸಬಾರದು ಅದಕ್ಕೆ ಕಾರಣಗಳೇನು ಎನ್ನುವುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಹೆಂಗಸರು ಕೆಲವು ಬಣ್ಣದ ಬಳೆಗಳನ್ನು ಯಾವುದೆ ಕಾರಣಕ್ಕೂ ಬಳಸಬಾರದು. ಅಕಸ್ಮಾತ್ ಗೊತ್ತೊ ಗೊತ್ತಿಲ್ಲದೆಯೊ ಕಪ್ಪು ಬಣ್ಣದ, ನೀಲಿ ಬಣ್ಣದ, ಗ್ರೇ ಬಣ್ಣ ಈ ಮೂರು ಬಣ್ಣದ ಬಳೆಗಳನ್ನು ಧರಿಸಿದರೆ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಇರುವುದಿಲ್ಲ. ಅಷ್ಟೆ ಅಲ್ಲದೆ ಈ ಬಣ್ಣದ ಬಳೆಗಳನ್ನು ಹಾಕಿಕೊಂಡ ಹೆಂಗಸರ ಜೊತೆಯಲ್ಲಿ ಇರುವವರಿಗೂ ಏಳಿಗೆ ಆಗುವುದಿಲ್ಲ ಮನೆಯಲ್ಲಿ ಸಣ್ಣ ಸಣ್ಣ ಕಲಹಗಳೂ ದೊಡ್ಡದಾಗುತ್ತಾ ಹೋಗುತ್ತದೆ. ಮನೆಯ ಯಜಮಾನನಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಮಾನಸಿಕ ಕಿರಿ ಕಿರಿಯಿಂದ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತಾ ಹೋಗುತ್ತದೆ. ಕೈಗೊಂಡ ಕೆಲಸ ಕಾರ್ಯದಲ್ಲಿ ಅಡ್ಡಿಗಳು ಬರುತ್ತದೆ, ಆರೋಗ್ಯಕ್ಕೆ ಸಂಬಂಧಿಸಿದ ರೋಗಗಳು ಉಲ್ಬಣವಾಗುತ್ತದೆ.

ಹೆಣ್ಣು ಮಕ್ಕಳು ಗಾಜಿನ ಬಳೆಗಳನ್ನು ಧರಿಸಿದರೆ ಬಹಳ ಒಳ್ಳೆಯದು ಗಾಜಿನ ಬಳೆಗಳನ್ನು ಧರಿಸಿದರು ಎಷ್ಟು ಸಂಖ್ಯೆಯ ಬಳೆಗಳನ್ನು ಧರಿಸಬೇಕು ಎಂಬ ಪದ್ಧತಿಯಿದೆ ಒಂದೊಂದು ಕೈಯಿಗೆ ಆರು ಬಳೆಗಳನ್ನು ಅಂದರೆ ಎರಡು ಕೈಯಿಗೆ ಹನ್ನೆರಡು ಬಳೆಗಳನ್ನು ಹಾಕಿಕೊಳ್ಳಬೇಕು. ಬಹಳಷ್ಟು ಹೆಣ್ಣುಮಕ್ಕಳು ಚಿನ್ನದ ಬಳೆಗಳು ಅಥವಾ ಚಿನ್ನದ ಆಭರಣಗಳನ್ನು ಧರಿಸಿಕೊಂಡಾಗ ಗಾಜಿನ ಬಳೆಗಳನ್ನು ತೆಗೆದು ಇಡುತ್ತಾರೆ ಆದರೆ ಇದು ಸರಿಯಲ್ಲ ಎಷ್ಟೆ ಚಿನ್ನದ ಆಭರಣಗಳನ್ನು ಧರಿಸಿದರು ಹೆಣ್ಣುಮಕ್ಕಳ ಕೈಯಲ್ಲಿ ಚಿನ್ನದ ಬಳೆಗಳು ಜೊತೆಗೆ ಒಂದು ಅಥವಾ ಎರಡು ಗಾಜಿನ ಬಳೆಗಳನ್ನು ತಪ್ಪದೆ ಧರಿಸಬೇಕು. ಆಗ ಮಾತ್ರ ಲಕ್ಷ್ಮೀ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಹೆಣ್ಣುಮಕ್ಕಳು ಕೇವಲ ಚಿನ್ನದ ಬಳೆಗಳನ್ನು ಹಾಕಿಕೊಂಡಿದ್ದರೆ ಲಕ್ಷ್ಮೀಯ ಅನುಗ್ರಹ ಕಡಿಮೆಯಾಗುತ್ತದೆ.

Bangals for women

ಹಾಗಾದರೆ ಯಾವ ಬಣ್ಣದ ಬಳೆಗಳನ್ನು ಧರಿಸಿದರೆ ಹೆಣ್ಣುಮಕ್ಕಳಿಗೆ ಶ್ರೇಷ್ಠವೆಂದರೆ ಹಳದಿ ಬಣ್ಣ, ಹಸಿರು ಬಣ್ಣ ಅಥವಾ ಕೆಂಪು ಬಣ್ಣದ ಬಳೆಗಳನ್ನು ಧರಿಸಬಹುದು ಇದು ಬಹಳ ಮುಖ್ಯವಾದುದು ಇದರಿಂದ ಸುಮಂಗಲಿತನ ಹೆಚ್ಚಾಗುವುದು ಇನ್ನೂ ಹಸಿರು ಬಣ್ಣದ ಬಳೆಗಳನ್ನು ಧರಿಸಿದರೆ ವೃತ್ತಿ ಕ್ಷೇತ್ರದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತದೆ. ಹಳದಿ ಬಣ್ಣದ ಬಳೆಗಳನ್ನು ಧರಿಸಿದರೆ ಸಮಾಜದಲ್ಲಿ ವಿಶೇಷವಾದ ಉನ್ನತವಾದ ಸ್ಥಾನಕ್ಕೆ ಏರುತ್ತಾರೆ ಒಳ್ಳೆಯ ಹೆಸರನ್ನು ಸಹ ಸಂಪಾದನೆ ಮಾಡುತ್ತಾರೆ.

ಬಳೆಗಳ ಶಬ್ಧ ಕೇಳುತ್ತಿದ್ದರೆ ಇನ್ನು ಕೇಳಬೇಕೆನಿಸುತ್ತದೆ ಆದರೆ ಆಧುನಿಕ ಕಾಲದ ಹೆಣ್ಣು ಮಕ್ಕಳು ಹಣೆಗೆ ಕುಂಕುಮವನ್ನು ಇಡುವುದಾಗಲಿ, ಕೈಗಳಿಗೆ ಬಳೆಗಳನ್ನು ಹಾಕುವುದಾಗಲಿ ಮರೆಯುತ್ತಿದ್ದಾರೆ ಆದರೆ ಹೆಣ್ಣು ಮಕ್ಕಳ ಕೈಯಲ್ಲಿ ಬಳೆಗಳಿದ್ದರೆ ಅದು ಲಕ್ಷಣವೆನಿಸುತ್ತದೆ. ಇನ್ನು ಮುಂದೆ ಆದರೂ ಹೆಣ್ಣು ಮಕ್ಕಳು ಕೈ ತುಂಬಾ ಬಳೆಗಳನ್ನು ಹಾಕುವಂತಾಗಲಿ ಆದರೆ ಯಾವ ಬಣ್ಣದ ಬಳೆಗಳನ್ನು ಹಾಕಿಕೊಳ್ಳಬೇಕು ಎಂದು ತಿಳಿದುಕೊಂಡು ಅದೆ ಬಣ್ಣದ ಬಳೆಗಳನ್ನು ಧರಿಸಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!