ಕೆಲವೊಮ್ಮೆ ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು ನಮಗೆ ಆಶ್ಚರ್ಯ ಅನ್ನಿಸಬಹುದು. ನಾವು ನಂಬಿ ಮಾಡುವ ಕೆಲಸ ಒಂದಾದರೆ, ನಮಗೆ ಕೆಡಕು ಅಗುವಂಥ ಕೆಲಸಗಳು ಹಲವು ನಡೆಯಬಹುದು. ಇಂಥ ಘಟನೆಗಳು ಸಾಕಷ್ಟು ನಡೆಯುತ್ತದೆ. ಅದರಲ್ಲೂ ಈಗಿನ ಕಾಲದಲ್ಲಿ ನಾವು ಒಂದು ಹೋಟೆಲ್ ಅಥವಾ ಎಲ್ಲಿಯೇ ಹೋದರು ಅಷ್ಟು ಸುಲಭವಾಗಿ ಯಾವುದನ್ನು ಕೂಡ ನಂಬಲು ಸಾಧ್ಯ ಅಗುವುದಿಲ್ಲ. ನಮಗೆ ಮೋಸ ಆಗುವಂಥ ಘಟನೆಗಳೇ ಹೆಚ್ಚಾಗಿ ನಡೆಯಬಹುದು.
ಅಂಥ ಘಟನೆಗಳು ನಡೆದಿರುವ ಬಗ್ಗೆ ನಾವು ಹಲವು ಬಾರಿ ಮಾಧ್ಯಮದಲ್ಲಿ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಇದೀಗ ಅಂಥದ್ದೇ ಒಂದು ಘಟನೆ ನಡೆದಿದೆ, ಈ ಘಟನೆಗಳು ಕೆಂಗೇರಿ ರೋಡ್ ಬಳಿ, ಕೆಂಗೇರಿ ಮೇನ್ ರೋಡ್ ನಲ್ಲಿರುವ ಕೆಂಚನಾಪುರದಲ್ಲಿ ಇರುವ ಶೆಟ್ಟಿ ಲಂಚ್ ಹೋಮ್ ಎನ್ನುವ ಹೋಟೆಲ್ ಗೆ ಹೋಗಿರುವ ಪ್ರೇಮಿಗಳ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ, ಅವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲಾಗಿದೆ.
ಈ ಕಾರಣಕ್ಕೆ ಹೋಟೆಲ್ ಮಾಲೀಕರಾದ ನಯನಾ ಮತ್ತು ಕಿರಣ್ ಹೆಸರಿನ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ನಡೆದಿರುವುದು ಏನು ಎಂದರೆ, ಈ ಹೋಟೆಲ್ ನ ಮಾಲೀಕರು ಪ್ರೇಮಿಗಳಿಗೆ ರೂಮ್ ನೀಡಿದ್ದು, ರೂಮ್ ಒಳಗೆ ಹಿಡನ್ ಕ್ಯಾಮೆರಾ ಇಟ್ಟು, ಅಲ್ಲಿ ನಡೆದಿರುವುದೆಲ್ಲವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ನಂತರ ಅದನ್ನು ಅ’ಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ, ಇಬ್ಬರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಕಿರಣ್ ಆ ವಿಡಿಯೋವನ್ನು ಹುಡುಗಿಗೆ ಕಳಿಸಿದ್ದಾನೆ.
ಈ ವಿಡಿಯೋವನ್ನು ಆಕೆಗೆ ವಾಟ್ಸಾಪ್ ಮೂಲಕ ಕಳಿಸಿ, 1 ಲಕ್ಷ ರೂಪಾಯಿ ಹಣ ಕೊಡಬೇಕು ಇಲ್ಲದೆ ಹೋದರೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿಯೂ, ಅವರ ಮನೆಯವರು ಮತ್ತು ಫ್ರೆಂಡ್ಸ್ ಗೆ ಕೂಡ ಅದೇ ವಿಡಿಯೋವನ್ನು ಕಳಿಸಿಕೊಡುವುದಾಗಿಯೂ ಆ ಯುವತಿಯನ್ನು ಹೆದರಿಸಿದ್ದಾನೆ ಎಂದು ಮಾಹಿತಿ ಸಿಕ್ಕಿದೆ.
ಹೋಟೆಲ್ ತನ್ನ ಬಾಯ್ ಫ್ರೆಂಡ್ ಜೊತೆಗೆ ಬರುತ್ತಿದ್ದ ಈ ಹುಡುಗಿ ಮತ್ಯಾರು ಅಲ್ಲ, ಹೋಟೆಲ್ ನಡೆಸುತ್ತಿರುವ ನಯನಾ ಎನ್ನುವ ಮಹಿಳೆಯ ರಿಲೇಟಿವ್ ಆಗಿದ್ದಾಳೆ. ಆಕೆ ಎಂಬಿಎ ಓದಿದ್ದು, ಆಗಾಗ ತನ್ನ ಬಾಯ್ ಫ್ರೆಂಡ್ ಜೊತೆಗೆ ಹೋಟೆಲ್ ಗೆ ಬಂದು ಉಳಿದುಕೊಳ್ಳುತ್ತಿದ್ದಳು ನಯನಾ ಗೆ ಎಲ್ಲಾ ವಿಚಾರ ಗೊತ್ತಿದ್ದರಿಂದ ಆಕೆಯೇ ಉದ್ದೇಶಪೂರ್ವಕವಾಗಿ ಹಿಡನ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿ, ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾಳೆ..
ಬ್ಲ್ಯಾಕ್ ಮಾಡುವ ಪ್ರಯತ್ನದಲ್ಲಿ ಆಕೆಯನ್ನು ಹೆದರಿಸಲು ಹೋಗಿ, ಕಿರಣ್ ಮತ್ತು ನಯನಾ ಇಬ್ಬರು ಕೂಡ ಪೊಲೀಸರ ಅತಿಥಿಯಾಗಿದ್ದಾರೆ. ಇಂಥ ಹಲವು ಘಟನೆಗಳು ಆಗಾಗ ನಡೆಯುತ್ತದೆ. ಹಾಗಾಗಿ ನಾವು ಎಲ್ಲೇ ಹೋದರು ಬಹಳ ಹುಷಾರಾಗಿ ಇರಬೇಕು. ಇದನ್ನೂ ಓದಿ E Swathu: ಇ- ಸ್ವತ್ತು ಪಡೆಯಲು ಇನ್ಮುಂದೆ ದಿನಗಟ್ಟಲೇ ಕಾಯಬೇಕಿಲ್ಲ, ಸುಲಭವಾಗಿ ಪಡೆಯಲು ಸರ್ಕಾರದ ಹೊಸ ನಿಯಮ ಇಲ್ಲಿದೆ