Land Records about information: ಪ್ರತಿಯೊಬ್ಬ ರೈತ ಕೂಡ ತನ್ನ ಹತ್ತಿರ ಇರುವ ಜಮೀನನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಸರ್ವೇ ಇಲಾಖೆಗೆ ಅಪ್ಲಿಕೇಶನ್ ಹಾಕಿ, ಅಲ್ಲಿನ ಸಹಾಯ ಪಡೆದು ತಮ್ಮ ಜಮೀನಿನ ಸುತ್ತ ಬೌಂಡರಿ ಹಾಕಿಸಿಕೊಳ್ಳುತ್ತಾನೆ. ಒಂದು ವೇಳೆ ನಿಮ್ಮ ಹತ್ತಿರ ಇರುವ ಜಮೀನಿಗೆ ಸಂಬಂಧ ಪಟ್ಟ ದಾಖಲೆಯ ಅನುಸಾರ, ಜಮೀನು ಇಲ್ಲ ಎನ್ನುವುದಾದರೆ ಆ ವೇಳೆ ಕಾನೂನಿನ ಮೂಲಕ ಮಾಡುವ ಸರ್ವೇ ಬಹಳ ಮುಖ್ಯವಾಗುತ್ತದೆ.

ಒಂದು ವೇಳೆ ನಿಮ್ಮ ಜಮೀನಿನಲ್ಲಿ ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದರೆ, ನೀವು ಅವರ ಬಳಿ ಕೇಳಿಕೊಂಡರು ಸಹ ಅವರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಬಿಟ್ಟುಕೊಡದೆ ಹೋದರೆ, ಆಗ ಪಕ್ಕದ ಜಮೀನಿನ ಮಾಲೀಕರ ಜೊತೆಗೆ ಜಗಳ ನಡೆಯುತ್ತದೆ. ಸರ್ಕಾರದಿಂದ ಸರ್ವೇ ನಡೆದಿರುವುದು ಗೊತ್ತಾದ ಮೇಲು ಕೂಡ ಅವರು ಒತ್ತುವರಿ ಆಗಿರುವ ಸ್ಥಳವನ್ನು ಬಿಟ್ಟುಕೊಡಲಿಲ್ಲ ಎಂದರೆ ನೀವು ಕಾನೂನಿನ ಮೂಲಕ ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಈ ಕೆಲಸವನ್ನು ನೀವು ಹೇಗೆ ಮಾಡಬಹುದು ಎಂದು ತಿಳಿಸುತ್ತೇವೆ ನೋಡಿ..

ಈ ಸಮಸ್ಯೆ ಇಂದ ಪರಿಹಾರ ಪಡೆಯಲು ಭೂ ಸರ್ವೇ ಇಲಾಖೆಗೆ ನಿಮ್ಮ ಹತ್ತಿರ ಇರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಜೊತೆಗೆ ಭೂಮಿ ಒತ್ತುವರಿ ಮಾಡಿಕೊಂಡಿರುವ ತಮ್ಮ ಅಪ್ಪಪಕ್ಕದ ರೈತರ ಅಡ್ರೆಸ್ ಮತ್ತು ಅವರ ಫೋನ್ ನಂಬರ್ ಎರಡನ್ನು ಕೂಡ ನೀಡಿರಬೇಕು. ಆಗ ಆ ರೈತರ ಅಡ್ರೆಸ್ ಭೂ ಸರ್ವೇ ಇಲಾಖೆಯಿಂದ ನೋಟೀಸ್ ಕಳಿಸಲಾಗುತ್ದೆ.

Land Records about information

ಜಮೀನನ್ನು ಸರ್ವೇ ಮಾಡುವ ದಿವಸ ಅವರ ಅಕ್ಕಪಕ್ಕದ ಜಮೀನಿನ ರೈತರು ಕೂಡ ಅಲ್ಲೇ ಇದ್ದರೆ ಆಗ ಇನ್ನು ಸುಲಭವಾಗುತ್ತದೆ. ಆ ದಿನ ಆ ಹಳ್ಳಿಯ ಮುಖ್ಯಸ್ಥರನ್ನು ರೈತರು ಕರೆಸಿದ್ದರೆ, ಅದು ಕೂಡ ಒಳ್ಳೆಯದೇ ಆಗುತ್ತದೆ. ಸರ್ವೇ ನಡೆದ ನಂತರ ಅಧಿಕಾರಿಗಳು ವರದಿ ನೀಡುತ್ತಾರೆ, ಒಂದು ವೇಳೆ ನಿಮ್ಮ ಭೂಮಿ ಒತ್ತುವರಿ ಆಗಿದೆ ಎನ್ನುವುದಾದರೆ ಫೋಟೋ ಸಮೇತ ವರದಿಯನ್ನು ಕೂಡ ನೀಡುತ್ತಾರೆ. ಅಧಿಕಾರಿಗಳು ಕೊಡದೆ ಹೋದರೆ, ಒಂದು ವಾರ ಕಳೆದ ನಂತರ ನಾಡಕಚೇರಿಗೆ ಭೇಟಿ ನೀಡಿ ನೀವೇ ವರದಿಯನ್ನು ಪಡೆದುಕೊಳ್ಳಬಹುದು.

ನಿಮ್ಮ ಕೈಗೆ ಎಲ್ಲಾ ವರದಿಗಳು ಸಿಕ್ಕ ನಂತರ ನಿಮ್ಮ ಭೂಮಿ ಒತ್ತುವರಿ ಆಗಿದೆ ಎನ್ನುವುದು ಸಾಬೀತಾದ ಬಳಿಕ, ನಿಮ್ಮ ಅಕ್ಕಪಕ್ಕದ ರೈತರ ಜೊತೆಗೆ ಈ ವಿಚಾರದ ಬಗ್ಗೆ ಕುಳಿತು ಮಾತನಾಡಬಹುದು, ಅಥವಾ ಹಿರಿಯರಿಂದ ಪಂಚಾಯಿತಿಯಲ್ಲಿ ಬಗೆಹರಿಸಿಕೊಳ್ಳಬಹುದು. ಇದ್ಯಾವುದು ಸರಿ ಹೋಗಲಿಲ್ಲ ಎಂದರೆ, ನಿಮಗೆ ಹತ್ತಿರದಲ್ಲಿರುವ ಪೊಲೀಸ್ ಸ್ಟೇಶನ್ ನಲ್ಲಿ ಕಂಪ್ಲೇಂಟ್ ಕೊಡಬಹುದು, ಕಂಪ್ಲೇಂಟ್ ಕೊಡುವುದಕ್ಕೆ ಸರ್ವೇ ಇಲಾಖೆಯಿಂದ ನೀಡುವ ರಿಪೋರ್ಟ್ ಅವಶ್ಯಕವಾಗುತ್ತದೆ. ಜೊತೆಗೆ ಸಾಕ್ಷಿ ಹೇಳಿಕೆ ಇದೆಲ್ಲ ವಿವರಣೆ, ದಾಖಲೆಗಳನ್ನು ನೀಡಿ, ನಿಮಗೆ ಮತ್ತು ನಿಮ್ಮ ಜಮೀನಿಗೆ ರಕ್ಷಣೆ ಕೊಡಬೇಕೆಂದು ದೂರು ನೀಡಿ, ಅದರ ರೆಸಿಪ್ಟ್ ಅನ್ನು ಕೇಳಿ ಪಡೆದುಕೊಳ್ಳಿ.

ನೀವು ಇಷ್ಟೆಲ್ಲಾ ಮಾಡಿದಮೇಲೆ, ಪಕ್ಕದ ಜಮೀನಿನ ರೈತ ಮತ್ತೊಮ್ಮೆ ಸರ್ವೇ ಮಾಡಿಸಬೇಕು ಎಂದು ಹೇಳಿದರೆ, ಆ ಮಾತಿಗೂ ಒಪ್ಪಿಗೆ ಕೊಡಿ.. ನಂತರ ನೀವು ವಕೀಲರ ಬಳಿ ಹೋಗಿ ಅವರ ಸಹಾಯದಿಂದ ನ್ಯಾಯಾಲಯದಲ್ಲಿ ಈ ಬಗ್ಗೆ ದೂರು ದಾಖಲಿಸಬಹುದು.

ಈ ರೀತಿಯ ಕೇಸ್ ಗಳು ಇತ್ಯರ್ಥವಾಗಲು 10 ವರ್ಷಗಳ ಸಮಯ ತೆಗೆದುಕೊಳ್ಳಬಹುದು. ಹಾಗಾಗಿ ಇಂಥ ಸಮಸ್ಯೆಗಿಂತ ಮಾತನಾಡಿ ರಾಜಿ ಮಾಡಿಕೊಳ್ಳುವುದು ಕೂಡ ಒಳ್ಳೆಯ ಆಯ್ಕೆ ಆಗಿದೆ. ನಿಮಗೆ ಸರಿ ಎನ್ನಿಸುವ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

By

Leave a Reply

Your email address will not be published. Required fields are marked *