Farmer Bank lone About New Updates: ನಮ್ಮ ದೇಶದಲ್ಲಿ ಈ ವರ್ಷ ಮುಂಗಾರು ಮಳೆ ಸರಿಯಾಗಿ ಬರದ ಕಾರಣ, ಕೃಷಿಯಲ್ಲಿ ಸಮಸ್ಯೆ ಉಂಟಾಗಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಹಲವು ರೈತರಿಗೆ ತಾವು ಹಾಕಿದ ಬೆಲೆಗೆ ತಕ್ಕ ಪ್ರತಿಫಲ ಸಿಗದೆ, ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರವು ರೈತರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದು, 31 ಜಿಲ್ಲೆಗಳಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ. ಜೊತೆಗೆ ಬರ ಸಮಸ್ಯೆಗೆ ಪರಿಹಾರ ನೀಡುವುದಕ್ಕು ಮುಂದಾಗಿದೆ.

ಬರ ಉಂಟಾಗಿರುವ ಕಾರಣದಿಂದ ರೈತರು ತೀವ್ರವಾದ ದುಃಖದಲ್ಲಿದ್ದಾರೆ. ಈ ಕಾರಣಕ್ಕೆ ರೈತರ ಜವಾಬ್ದಾರಿ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ ಆಗಿದ್ದು, ಪ್ರಸ್ತುತ ಯಾರು ಕೂಡ ರೈತರಿಂದ ಸಾಲ ವಸೂಲಿ ಮಾಡಬಾರದು ಮತ್ತು ನರೇಗಾ ಯೋಜನೆಯ ಅಡಿಯಲ್ಲಿ ರೈತರಿಗೆ ಹೆಚ್ಚಿನ ಉದ್ಯೋಗಾವಕಾಶ ಮಾಡಿಕೊಡಬೇಕು ಎನ್ನುವ ನಿರ್ಧಾರವನ್ನು ತುಮಕೂರು ಜಿಲ್ಲೆಯ ತಾಲ್ಲೂಕುಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತುಮಕೂರು ಜಿಲ್ಲೆಯ ಡಿಸಿ ಶ್ರೀನಿವಾಸ್ ಅವರು ಮಾಧ್ಯಮದ ಎದುರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಕೂಡ ಬರುತ್ತದೆ ಎನ್ನಲಾಗಿದ್ದು, ಈ ಕಾರಣಕ್ಕೆ ತುಮಕೂರು ಜಿಲ್ಲೆಯ ಡಿಸಿ ಆಗಿರುವ ಶ್ರೀನಿವಾಸ್ ಅವರು ಬರಪೀಡಿತ ತಾಲ್ಲೂಕು ಎಂದು ಎಲ್ಲಾ ತಾಲ್ಲೂಕುಗಳನ್ನು ಘೋಷಣೆ ಮಾಡಿ, ತುಮಕೂರು ಜಿಲ್ಲೆಯ ಬ್ಯಾಂಕ್ ಗಳು, ಸಂಘ ಸಂಸ್ಥೆಗಳು ಸೇರಿದಂತೆ ಯಾವ ಸಂಸ್ಥೆ ಕೂಡ ರೈತರ ಬಳಿ ಸಾಲ ವಸೂಲಿ ಮಾಡಬಾರದು ಎಂದು ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲದೆ ರೈತರಿಗೆ ಬೆಳೆ ಪರಿಹಾರ ನೀಡುವ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.

ಬರಪೀಡಿತ ಪ್ರದೇಶಗಳಿಗೆ ಪರಿಹಾರ ಹಣ ಹೇಗೆ ಹಂಚಿಕೆ ಆಗುತ್ತದೆ ಎಂದು ತಿಳಿಯುವುದಾದರೆ, ಮಳೆಯಿಂದ ಬೆಳೆ ಬರುವಂಥ ಭೂಮಿಗೆ ಒಂದು ಹೆಕ್ಟರ್ ಗೆ 8500 ರೂಪಾಯಿ ಪರಿಹಾರ, ನೀರಾವರಿ ಬೆಳೆ ಬೆಳೆಯುವ ಭೂಮಿಗೆ ಪ್ರತಿ ಹೆಕ್ಟರ್ ಗೆ 17,000 ರೂಪಾಯಿ ಪರಿಹಾರ, ವಾಣಿಜ್ಯ ಬೆಳೆ ಬೆಳೆಯುವ ಪ್ರದೇಶಕ್ಕೆ 22,000 ರೂಪಾಯಿ ಪರಿಹಾರ ಸಿಗುತ್ತದೆ. ಹಾಗೆಯೇ ರೇಷ್ಮೆ ಬೆಳೆಗೆ ಪ್ರತಿ ಹೆಕ್ಟರ್ ಗೆ 6000 ರೂಪಾಯಿ ಪರಿಹಾರ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Farmer Bank lone About New Updates

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದು, ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ನರೇಗಾ ಯೋಜನೆಯ ಅಡಿಯಲ್ಲಿ ಒಂದು ವರ್ಷಕ್ಕೆ 100 ದಿನಗಳ ಕಾಲ ಕೆಲಸ ಕೊಡಲಾಗುತ್ತದೆ. ಆದರೆ ಈಗ ಬರ ತೊಂದರೆ ಇರುವುದರಿಂದ, 150 ದಿನಗಳವರೆಗು ಕೆಲಸ ಕೊಡಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ರೈತರಿಗೆ ಸಹಾಯ ಅಗಲಿದೆ, ಪರಿಸ್ಥಿತಿ ಹೀಗಿರುವಾಗ ಇದನ್ನು ಸುರಿಯಾಗಿ ನಿಭಾಯಿಸಲು ಗ್ರಾಮ ಸಹಾಯಕರು, ಕೃಷಿ ಸಹಾಯಕರು ಇವರುಗಳ ತಂಡ ಮಾಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳಾಗಿ ಅಪಾಯಿಂಟ್ ಮಾಡಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುತ್ತದೆ ಎಂದು ಹೇಳಿದ್ದಾರೆ.

ಜೊತೆಗೆ ಯಾವ ರೈತರ ಬಳಿ ಕೊಳವೆ ಬಾವಿ ಇದೆಯೋ ಅಂಥವರನ್ನು ಗುರುತಿಸಿ ಅವರಿಗೆ ಮೇವು ಕಿಟ್ ವಿತರಣೆ ಮಾಡಲಾಗುತ್ತದೆ. ಮಳೆಯನ್ನು ಅರ್ಧ ಭಾಗವಾಗಿ ಆಶ್ರಯಿಸಿ ಕೃಷಿ ಮಾಡುವವರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿ ಮತ್ತು ಕೀಟನಾಶಕ ಜಿಲ್ಲೆಯ ಕಡೆಯಿಂದ ಸಿಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಮಳೆ ಇಲ್ಲದ ಕಾರಣ ಕೃಷಿಗೆ ಸಮಸ್ಯೆ ಮಾತ್ರವಲ್ಲ, ಕುಡಿಯುವ ನೀರಿನ ವಿಚಾರಕ್ಕೂ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ, ಆ ಸಮಸ್ಯೆಗು ಕೂಡ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

By

Leave a Reply

Your email address will not be published. Required fields are marked *