ನಮ್ಮ ಸುತ್ತಮುತ್ತಲಿನಲ್ಲಿರುವ ಹಲವು ಸಸ್ಯ ಪ್ರಭೇದಗಳು ಆಯುರ್ವೇದ ಔಷದಿ ಗುಣಗಳನ್ನು ಹೊಂದಿರುತ್ತವೆ ಹಾಗೂ ಮನುಷ್ಯನ ಹಲವು ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಗುಣಗಳನ್ನು ಸಹ ಹೊಂದಿರುತ್ತವೆ. ಈ ಲೇಖನದ ಮೂಲಕ ಮುಖ್ಯವಾಗಿ ಸೀತಾಫಲ ಹಾಗೂ ಅದರ ಎಲೆಯಿಂದ ಇರುವ ಉಪಯೋಗಗಳನ್ನು ತಿಳಿದುಕೊಳ್ಳೋಣ.
ಸೀತಾಫಲ ಹಣ್ಣು ಹತ್ತಾರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವಂತ ಹಣ್ಣಾಗಿದೆ. ಈ ಹಣ್ಣು ಚಿಕ್ಕೋರಿಂದ ವಯಸ್ಸಾದವರಿಗೂ ಇಷ್ಟವಾಗುವಂಥ ಹಣ್ಣಾಗಿದ್ದು ಇದರಲ್ಲಿ ಪೋಷಕಾಂಶಗಳನ್ನು ಹೇರಳವಾಗಿ ಕಾಣಬಹುದು. ಇನ್ನು ಈ ಹಣ್ಣು ತಿನ್ನೋದ್ರಿಂದ ದೇಹದಲ್ಲಿನ ನಗತ್ಯ ಬೊಜ್ಜು ಕಡಿಮೆಯಾಗುತ್ತದೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇನ್ನು ಹೃದಯದ ಆರೋಗ್ಯಕ್ಕೆ ಹೇಳಿ ಮಾಡಿಸಿದ ಹಣ್ಣು ಇದಾಗಿದೆ.
ಮಧುಮೇಹ ನಿಯಂತ್ರಣಕ್ಕೆ: ಸೀತಾ ಫಲದ ಎಲೆಗಳಿಂದ ತೆಗೆದ ರಸವನ್ನು ನಿತ್ಯ ಬೆಳಿಗ್ಗೆ ಒಂದು ಟೀ ಸ್ಪೂನ್ ಅಳತೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ತೂಕವನ್ನು ಸಹ ಕಡಿಮೆ ಮಾಡುತ್ತದೆ.
ಸೀತಾಫಲ ಎಲೆಯ ಕಷಾಯ: ಸೀತಾ ಫಲ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ದಂತೆ ಕಾಯಿಸಿಕೊಂಡ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಈ ಸೀತಾಪಾಲಾ ಎಲೆಯನ್ನು ನುಣ್ಣಗೆ ಅರೆದುಕೊಂಡು ಗಾಯಕ್ಕೆ ಅಥವಾ ಚರ್ಮ ರೋಗ ಸಮಸ್ಯೆಗೆ ಬಳಸಿದ್ರೆ ಪರಿಹಾರವಿದೆ. ಇನ್ನು ಈ ಹಣ್ಣನು ನಿಯಮಿತವಾಗಿ ತಿನ್ನೋದ್ರಿಂದ ದೇಹಕ್ಕೆ ಬಲ ಶಕ್ತಿ ಹಾಗೂ ನರಗಳ ಬಲಹೀನತೆ ನಿವಾರಿಸಿಕೊಳಬಹುದು. ಒಟ್ಟಾರೆಯಾಗಿ ಹತ್ತಾರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವಂತ ಈ ಹಣ್ಣನ್ನು ಸೇವಿಸಿ ಉತ್ತಮ ಅರೋಗ್ಯ ವೃದ್ಧಿಸಿಕೊಳ್ಳಿ.