ವಿಶ್ವದಲ್ಲಿ ಮದುವೆ ಎನ್ನುವ ಸಂಪ್ರದಾಯ ಎಲ್ಲಾ ಕಡೆ ಇದೆ. ಒಂದು ಗಂಡು ಹೆಣ್ಣು ಮದುವೆಯ ಮೂಲಕ ಪರಸ್ಪರವಾಗಿ ಒಂದಾಗುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ. ಮದುವೆ ಎನ್ನುವುದು ಎಲ್ಲರ ಆಸೆ ಕನಸು, ಒಂದೊಂದು ಊರುಗಳು, ಒಂದೊಂದು ದೇಶಗಳಲ್ಲೂ ಮದುವೆಗೆ ಸಂಬಂಧಿಸಿದ ಬೇರೆ ಬೇರೆ ಆಚಾರಣೆ ಇರುತ್ತದೆ. ಪ್ರಪಂಚದಲ್ಲಿ ಹಲವು ಬುಡಕಟ್ಟು ಜನಾಂಗಗಳು ಇದ್ದು ಅವರೆಲ್ಲರ ಆಚರಣೆ ಬೇರೆ ಬೇರೆ ರೀತಿಯಲ್ಲೇ ಇರುತ್ತದೆ.
ಕೆಲವು ಪದ್ಧತಿಗಳ ಬಗ್ಗೆ ಕೇಳಿದರೆ ನಮಗೆ ವಿಚಿತ್ರ ಎನ್ನಿಸಿ ಹೀಗೂ ನಡೆಯುತ್ತಾ ಎಂದು ಅನ್ನಿಸುತ್ತದೆ. ಒಂದು ಬುಡಕಟ್ಟಿನ ಜನಾಂಗದಲ್ಲಿ ಹುಡುಗಿ ತಮ್ಮ ಅಣ್ಣತಮ್ಮಂದಿರನ್ನು ಮದುವೆಯಾಗಬಹುದು, ಮದುವೆಯಾಗುವುದಕ್ಕೆ ಮೊದಲೇ ಅವರೊಡನೆ ಇರುವ ಅವಕಾಶವನ್ನು ಕೊಡುವ ವಿಚಿತ್ರ ಪದ್ಧತಿ ಕೂಡ ಇದೆ. ಅದನ್ನು ಹೊರತುಪಡಿಸಿ ಈಗ ಮತ್ತೊಂದು ಪದ್ಧತಿಯ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..
ಈ ಪದ್ಧತಿ ನಡೆಯುವುದು ಬಾಂಗ್ಲಾದೇಶದ ಮಂಡಿ ಎನ್ನುವ ಬುಡಕಟ್ಟು ಜನಾಂಗದ. ಈ ಬುಡಕಟ್ಟಿನ ಹೆಣ್ಣುಮಕ್ಕಳು ತನ್ನ ತಂದೆಯ ಜೊತೆಗೆ ಮದುವೆಯಾಗುತ್ತಾರೆ. ಹೆಣ್ಣುಮಕ್ಕಳು ಬಯಸಿ ತಂದೆಯ ಜೊತೆಗೆ ಮದುವೆಯಾಗಿ ಜ್ ತಂದೆಯಿಂದಲೇ ಮಗುವನ್ನು ಪಡೆಯುತ್ತಾರೆ. ತಂದೆಯನ್ನೇ ಗಂಡನನ್ನಾಗಿ ಸ್ವೀಕರಿಸಿ ಮಗುವನ್ನು ಪಡೆಯುವ ಪದ್ಧತಿ ನಮಗೆ ವಿಚಿತ್ರ ಅನ್ನಿಸಬಹುದು. ಆದರೆ ಎಲ್ಲಾ ತಂದೆಯರು ಕೂಡ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಆಗುವುದಿಲ್ಲ. ಚಿಕ್ಕ ವಯಸ್ಸಿಗೆ ಮದುವೆಯಾಗಿ ಗಂಡನನ್ನು ಕಳೆದುಕೊಂಡ ಮಹಿಳೆ ಮತ್ತೆ ಮದುವೆ ಆಗಬಹುದು, ಆಕೆ ಎರಡನೇ ಮದುವೆ ಆಗುವ ಪುರುಷನ ಪತ್ನಿಯ ಮೊದಲ ಗಂಡನಿಂದ ಜನಿಸಿದ ಹೆಣ್ಣುಮಗುವನ್ನು ಮದುವೆ ಆಗಬಹುದು.
ಇಲ್ಲಿ ಒಬ್ಬ ಮಹಿಳೆ ಮದುವೆಯ ಬಳಿಕ ಆಕೆಯ ಗಂಡ ವಿಧಿವಶನಾಗಿ, ಆಕೆ ಒಬ್ಬ ಮಗಳು ಇದ್ದರೆ, ತಾಯಿಯ ಜೊತೆಗೆ ಆ ಮಗಳು ಕೂಡ ವಿಧವೆ ಆಗುತ್ತಾಳೆ. ಒಂದು ವೇಳೆ ತಾಯಿ ಎರಡನೇ ಮದುವೆಯಾದರೆ, ಆ ಮಗಳು ತಾಯಿಯ ಎರಡನೇ ಗಂಡನನ್ನು ತನ್ನ ಗಂಡ ಎಂದು ಸ್ವೀಕರಿಸಬೇಕು. ತಾಯಿ ಮಗಳು ಇಬ್ಬರಿಗೂ ಆಗ ಗಂಡ ಒಬ್ಬನೇ ಆಗುತ್ತಾರೆ. ಇಬ್ಬರು ಕೂಡ ಆ ವ್ಯಕ್ತಿಯ ಜೊತೆಗೆ ಸಂಸಾರ ಮಾಡಬೇಕು. ಆ ವ್ಯಕ್ತಿಯಿಂದಲೇ ತಾಯಿ ಮಗಳು ಇಬ್ಬರು ಕೂಡ ಮಗುವನ್ನು ಪಡೆಯುತ್ತಾರೆ. ಇಬ್ಬರಿಗು ಹುಟ್ಟುವ ಮಕ್ಕಳಿಗೆ ತಂದೆ ಮತ್ತು ತಾತ ಎರಡು ಆತನೇ ಆಗುತ್ತಾನೆ.
ನಮಗೆ ಈ ವಿಚಾರ ಬಹಳ ವಿಚಿತ್ರ ಅನ್ನಿಸುತ್ತದೆ. ಈ ಪದ್ಧತಿಯನ್ನು ಇಂದಿಗೂ ಕೂಡ ಈ ಜನಾಂಗದವರು ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಪದ್ಧತಿ ಅನುಸರಿಸುವುದಕ್ಕೂ ಒಂದು ಕಾರಣ ಇದೆ, ತಾಯಿ ಆದವಳು ಗಂಡನನ್ನು ಕಳೆದುಕೊಂಡಾಗ ಆಕೆ ಇನ್ನೊಂದು ಮದುವೆಯಾದರೆ ಆಕೆಯ ಮಗು ಅನಾಥವಾಗುತ್ತದೆ ಎಂದು ಒಬ್ಬ ವ್ಯಕ್ತಿಯನ್ನೇ ಇಬ್ಬರು ಗಂಡನಾಗಿ ಸ್ವೀಕರಿಸುತ್ತಾರೆ. ಆಗ ಇಬ್ಬರನ್ನು ಕೂಡ ಆ ವ್ಯಕ್ತಿ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ನಂಬಿಕೆ ಇರುತ್ತದೆ.
ಈ ಪದ್ಧತಿಯ ಬಗ್ಗೆ ಗೊತ್ತಾಗಿದ್ದು ಒರೊಲಾ ಡಾಲ್ಬೋಟ್ ಎನ್ನುವ 30 ವರ್ಷದ ಮಹಿಳೆ ಇಂದ, ಈಕೆಯ ಬದುಕಿನ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 15 ವರ್ಷಗಳ ಹಿಂದೆ ಆಕೆಗೆ ತನ್ನ ತಂದೆಯ ಜೊತೆಗೆ ಬಲವಂತ ಮಾಡಿ ಮದುವೆ ಮಾಡಲಾಗಿತ್ತು. ಆತನಿಂದ 3 ಮಕ್ಕಳನ್ನು ಪಡೆದಿದ್ದಾಳೆ. ಆಕೆ ವಾಸ ಮಾಡುತ್ತಿರುವ ಹಳ್ಳಿಯಲ್ಲಿ ಎಲ್ಲರ ಪರಿಸ್ಥಿತಿ ಕೂಡ ಇದೇ ಆಗಿದೆ.