Home Tips: ಒಂದು ಮನೆ ಸುಸೂತ್ರವಾಗಿ ನಡೆಯಬೇಕಾದರೆ ಒಬ್ಬ ಪುರುಷನಿಂದ ಖಂಡಿತವಾಗಿಯೂ ಸಾಧ್ಯವಿಲ್ಲ ಆದರೆ ಒಬ್ಬ ಮಹಿಳೆಯಿಂದ ಸಾಧ್ಯವಾಗುತ್ತದೆ. ನಮ್ಮ ಸುತ್ತಮುತ್ತಲು ಅದೆಷ್ಟೊ ಮಹಿಳೆ ಮನೆ ಕೆಲಸ ಮಾಡಿಕೊಂಡು ಹೊರಗೆ ದುಡಿದು, ತನ್ನ ಮನೆಯನ್ನು ನೋಡಿಕೊಳ್ಳುತ್ತಿದ್ದಾಳೆ. ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸವನ್ನು ಒಂದು ನಿಮಿಷ ವಿಶ್ರಾಂತಿ ಇಲ್ಲದೆ ಮಾಡುವ ಎಲ್ಲಾ ಮಹಿಳೆಯರಿಗೆ ಅವರಿಗಾಗಿ ಒಂದಷ್ಟು ಸಲಹೆಗಳಿರುವ ಆತ್ಮೀಯ ಕಿವಿ ಮಾತುಗಳಿರುವ ಈ ಲೇಖನವನ್ನು ತಪ್ಪದೆ ಓದೋಣ.
ಸದಾ ಕಾಲ ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು ಕೆಲವು ಎಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಗಡಿಬಿಡಿಯಲ್ಲಿ ಕೇವಲ ಸ್ಟವ್ ಆಫ್ ಮಾಡುತ್ತಾರೆ ಆದರೆ ಸಿಲಿಂಡರ್ ರೆಗ್ಯುಲೇಟರ್ ನ್ನು ಆಫ್ ಮಾಡುವುದನ್ನು ಮರೆಯಬಾರದು ಇದರಿಂದ ಅಪಾಯ ಆಗುವುದು ತಡೆಯುತ್ತದೆ. ಅಡುಗೆ ಮನೆಯಲ್ಲಿ ಯಾವುದೆ ಕಾರಣಕ್ಕೂ ಮೂರು ಒಲೆ ಇರುವ ಸ್ಟವ್ ಅನ್ನು ಬಳಸಲೇಬಾರದು ಎಂದು ಶಾಸ್ತ್ರದಲ್ಲಿ ತಿಳಿಸಿದೆ. ಗಂಡ ಕೆಲಸಕ್ಕೆ ಹೋಗುವವರಾಗಿದ್ದರೆ ಮಕ್ಕಳು ಶಾಲೆಗೆ ಹೋಗುವವರಿದ್ದರೆ ಸಾಮಾನ್ಯವಾಗಿ ಹೆಂಡತಿ ಗಂಡ ಹಾಗೂ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಕಟ್ಟಿಕೊಡುತ್ತಾರೆ ಹೀಗೆ ಊಟವನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಕಟ್ಟಬಾರದು ಪ್ಲಾಸ್ಟಿಕ್ ಡಬ್ಬದಲ್ಲಿ ಊಟ ಕಟ್ಟುವುದರಿಂದ ಊಟವೂ ಸರಿಯಾಗಿ ಇರುವುದಿಲ್ಲ ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಒಂದು ವೇಳೆ ಡಬ್ಬಕ್ಕೆ ಹಾಕುವಾಗ ಊಟ ಬಿಸಿ ಇದ್ದರೆ ವಾಸನೆ ಬರುತ್ತದೆ.
ಈಗಿನ ದಿನಗಳಲ್ಲಿ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಆದರೆ ಬಲಗೈ ಬೆರಳಿನ ಉಗುರುಗಳಿಗೆ ಬಣ್ಣವನ್ನು ಹಚ್ಚಬಾರದು ಏಕೆಂದರೆ ಮಹಿಳೆಯರು ಅಡುಗೆ ಮಾಡುವುದರಿಂದ ಅದರಲ್ಲೂ ಬಲಗೈಯನ್ನು ಹೆಚ್ಚು ಬಳಸುವುದರಿಂದ ಉಗುರಿನ ಮೇಲಿನ ಬಣ್ಣ ಅಡುಗೆಗೆ ತಾಗಿದರೆ ಅದನ್ನು ಊಟ ಮಾಡುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಏಕೆಂದರೆ ಮಹಿಳೆಯರು ಉಗುರಿಗೆ ಹಚ್ಚುವ ಬಣ್ಣದಲ್ಲಿ ಕೆಮಿಕಲ್ ಇರುತ್ತದೆ. ಮಹಿಳೆಯರೆ ನಿಮ್ಮ ಮತ್ತು ನಿಮ್ಮ ಕುಟುಂಬದವರ ಆರೋಗ್ಯಕ್ಕಾಗಿ ಬಲಗೈ ಬೆರಳುಗಳ ಉಗುರಿಗೆ ಬಣ್ಣ ಹಚ್ಚದಿರಿ.
ಸೌಂದರ್ಯವೃದ್ಧಿಯ ಇನ್ನೊಂದು ಮುಖ್ಯ ಅಂಶವೆಂದರೆ ತಲೆ ಕೂದಲು ಹಿಂದಿನ ಕಾಲದ ಮಹಿಳೆಯರಿಗೆ ಕೂದಲು ಉದ್ದವಾಗಿರುತ್ತಿತ್ತು ತುರುಬು ಕಟ್ಟಿಕೊಳ್ಳುತ್ತಿದ್ದರು ಈಗಿನ ದಿನಮಾನಗಳಲ್ಲಿ ಮಹಿಳೆಯರು ತಮ್ಮ ಕೂದಲನ್ನು ಗಿಡ್ಡದಾಗಿ ಶೇಪ್ ಕೊಟ್ಟು ಕತ್ತರಿಸಿಕೊಳ್ಳುತ್ತಾರೆ ಕೂದಲು ಬಿಟ್ಟುಕೊಂಡು ಅಡುಗೆ ಮನೆಯಲ್ಲಿ ಅಡುಗೆ ಮಾಡಲೇಬಾರದು ಕೂದಲು ಬಿಟ್ಟುಕೊಂಡು ಅಡುಗೆ ಮಾಡಿದರೆ ಅಡುಗೆಯಲ್ಲಿ ಕೂದಲು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಅಡುಗೆಯಲ್ಲಿ ಕೂದಲು ಸೇರಿದ್ದು ಊಟಕ್ಕೆ ಕೂದಲು ಸಿಕ್ಕಿದರೆ ಶಾಸ್ತ್ರದ ಪ್ರಕಾರ ದಾರಿದ್ರ ಅಂತಹ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಪ್ರತಿಯೊಂದು ಮನೆಯಲ್ಲಿ ಅಡುಗೆ ಮನೆಯು, ಮಲಗುವ ಕೋಣೆ, ದೇವರಕೋಣೆ ಹೀಗೆ ಪ್ರತ್ಯೇಕ ಕೋಣೆಗಳಿರುತ್ತವೆ ಅಡುಗೆ ಮನೆಯಲ್ಲಿ ಯಾವುದೆ ಕಾರಣಕ್ಕೂ ಔಷಧಿಗಳನ್ನ ಇಡಲೇಬೇಡಿ ಇದರಿಂದ ಅಡುಗೆ ಸಾಮಾಗ್ರಿಗಳು ಔಷಧಿಯ ವಾಸನೆ ಬರುತ್ತಿರುತ್ತದೆ ಇದರಿಂದ ಮನೆಯವರು ಊಟ ಮಾಡಲು ಹಿಂಜರಿಯುತ್ತಾರೆ.
ಯಾವುದೆ ಕಾರಣಕ್ಕೂ ಅಡುಗೆ ಮನೆಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗಬೇಡಿ. ಚಪ್ಪಲಿ ಎನ್ನುವುದು ಮನೆಯ ಹೊರಗೆ ಇರಬೇಕು ಎನ್ನುವುದು ಹಿರಿಯರು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕಾಲುನೋವು, ಶೀತದ ಕಾರಣಕ್ಕಾಗಿ ಚಪ್ಪಲಿಯನ್ನು ಹಾಕಿಕೊಂಡು ಇಡಿ ಮನೆಯನ್ನು ಓಡಾಡುತ್ತಾರೆ ಆದರೆ ಅಡುಗೆ ಮನೆಗೆ ಚಪ್ಪಲಿಯನ್ನು ಧರಿಸಿಕೊಂಡು ಹೋಗದೆ ಇರುವುದು ಒಳ್ಳೆಯದು. ಕೆಲಸಕ್ಕೆ ಹೋಗುವ ಮಹಿಳೆಯರು ಒಂದೆ ಬಾರಿಗೆ ಹೆಚ್ಚು ಅಡುಗೆಯನ್ನು ಮಾಡಿ ಇಡಿ ದಿನ ಅದನ್ನೆ ತಿನ್ನುತ್ತಾರೆ ಅಥವಾ ಮನೆಯಲ್ಲಿ ಫ್ರಿಜ್ ನಲ್ಲಿ ಇಡುತ್ತಾರೆ ಈ ರೀತಿಯ ತಂಗಳು ಊಟವನ್ನು ಹೆಚ್ಚು ತಿನ್ನಬಾರದು ಇದರಿಂದ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಅದೆ ಸಮಯಕ್ಕೆ ಫ್ರೆಶ್ ಆಗಿ ಅಡುಗೆ ಮಾಡಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
Home Tips for women’s
ಅಡುಗೆ ಮನೆಯಲ್ಲಿ ದೇವರ ಫೋಟೊ ಇಟ್ಟು ಪೂಜೆ ಮಾಡುವುದನ್ನು ಮಾಡಲೇಬಾರದು. ಮನೆಯಲ್ಲಿ ದೇವರ ಕೋಣೆಯನ್ನು ಪ್ರತ್ಯೇಕವಿಟ್ಟು ಅಲ್ಲಿಯೆ ದೇವರ ಪೂಜೆಯನ್ನು ಮಾಡಬೇಕು. ನಮ್ಮ ದೈನಂದಿನ ಜೀವನದಲ್ಲಿ ಮೊಬೈಲ್ ಎಷ್ಟು ಮುಖ್ಯವಾಗಿದೆ ಎಂದರೆ ದಿನದ ಮುಕ್ಕಾಲು ಪಾಲು ಮೊಬೈಲ್ ನಲ್ಲಿಯೆ ನಾವು ಕಳೆಯುತ್ತೇವೆ. ಮಹಿಳೆಯರು ಅಡುಗೆ ಮಾಡುವಾಗ ಮೊಬೈಲ್ ನೋಡುತ್ತಾ ಅಡುಗೆ ಮಾಡುವುದು ಒಳ್ಳೆಯದಲ್ಲ ಇದರಿಂದ ಮನೆಗೆ ಶ್ರೇಯಸಲ್ಲ ಹಾಗೂ ಅಡುಗೆಯು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಹಿಳೆಯರಿರಲಿ ಪುರುಷರಿರಲಿ ಪ್ರತಿಯೊಬ್ಬರು ಪ್ರತಿದಿನ ಹೆಚ್ಚಾಗಿ ನೀರನ್ನು ಕುಡಿಯಲೇಬೇಕು ಆರೋಗ್ಯದ ದೃಷ್ಟಿಯಿಂದ ನೀರನ್ನು ಕುಡಿಯುವುದು ಅವಶ್ಯಕವಾಗಿದೆ. ದಿನದ ಮನೆಯ ಕೆಲಸದ ಒತ್ತಡದಲ್ಲಿ ಮಹಿಳೆಯರು ನೀರು ಕುಡಿಯುವುದನ್ನು ಮರೆಯಬಹುದು ಆದರೆ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನವಿಟ್ಟುಕೊಂಡು ಪ್ರತಿದಿನ 8 ಗ್ಲಾಸ್ ನೀರನ್ನು ಕುಡಿಯಲೇಬೇಕು.
ಕೆಲವು ಮಹಿಳೆಯರು ಅತಿಯಾಗಿ ಮೇಕಪ್ ಮಾಡಿಕೊಳ್ಳುತ್ತಾರೆ ಮನೆಯಲ್ಲಿದ್ದರೂ ಹೊರಗೆ ಹೋಗುತ್ತಿದ್ದರು ಮೇಕಪ್ ಮಾಡಿಕೊಂಡಿರುತ್ತಾರೆ ಇನ್ನು ಕೆಲವು ಮಹಿಳೆಯರು ತಮ್ಮ ತ್ವಚೆಯ ಅಥವಾ ತಮ್ಮ ಸೌಂದರ್ಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ ಈ ಎರಡು ರೀತಿ ಮಾಡುವುದು ತಪ್ಪು ಅತಿಯಾದ ಮೇಕಪ್ ಮಾಡುವ ಬದಲು ಮಹಿಳೆಯರು ತಮ್ಮ ತ್ವಚೆಯ ಬಗ್ಗೆ ನ್ಯಾಚುರಲ್ ಆಗಿ ಕಾಳಜಿ ವಹಿಸಬೇಕಾಗುತ್ತದೆ. ಮದುವೆಯ ನಂತರವಂತು ಕೆಲವು ಮಹಿಳೆಯರು ಮದುವೆಯಾಗಿದೆ ಇನ್ನೇನಕ್ಕೆ ನನಗೆ ಸೌಂದರ್ಯದ ಬಗ್ಗೆ ಗಮನ ಎಂದು ಅಸಡ್ಡೆ ತೋರಿಸುತ್ತಾರೆ ಇದು ಸರಿಯಲ್ಲ ಮದುವೆಯ ನಂತರವೂ ಯಾವಾಗಲೂ ತಮ್ಮ ಆರೋಗ್ಯ ವೃದ್ಧಿಯಲ್ಲಿ ತ್ವಚೆಯ ಸೌಂದರ್ಯವನ್ನು ವೃದ್ಧಿಸುವುದು ಒಂದು ಭಾಗವಾಗಿದೆ.
ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಾ ಅಥವಾ ಇನ್ನೇನೊ ಕೆಲಸ ಮಾಡುತ್ತಾ ಮಹಿಳೆಯರು ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದಿಲ್ಲ ಆದರೆ ಮಹಿಳೆಯರು ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವ ರೂಢಿಯನ್ನು ಇಟ್ಟುಕೊಳ್ಳಬೇಕು ಮಹಿಳೆಯರ ಆರೋಗ್ಯದಲ್ಲಿ ಉತ್ತಮವಾಗಿದ್ದರೆ ಮಾತ್ರ ಅಡುಗೆ ಕೆಲಸ ಹಾಗೂ ಮನೆ ಇನ್ನಿತರ ಕೆಲಸಗಳು ಸರಾಗವಾಗಿ ನಡೆಯುತ್ತಿರುತ್ತದೆ ಮನೆಯಲ್ಲಿರುವವರ ಕಾಳಜಿಯ ಜೊತೆಗೆ ನಿಮ್ಮ ಕಾಳಜಿಯು ಮುಖ್ಯವಾಗಿರುತ್ತದೆ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ದಿನದ 24 ಗಂಟೆಯಲ್ಲಿ ಮಹಿಳೆಯರು ತಮಗಾಗಿ ಒಂದಷ್ಟು ಸಮಯವನ್ನು ಮೀಸಲಿಡಬೇಕು ಇಲ್ಲದಿದ್ದರೆ ಮುಂದೊಂದು ದಿನ ತನಗಾಗಿ ಏನು ಮಾಡಿಕೊಳ್ಳಲಿಲ್ಲವೆಂಬ ಕೊರಗು ಕಾಣಿಸುತ್ತದೆ ಅದಕ್ಕೆ ಅವಕಾಶ ಕೊಡಬೇಡಿ.
ಪ್ರತಿಯೊಬ್ಬ ಮಹಿಳೆಗೆ ಕೊನೆಯದಾಗಿ ಹೇಳುವ ಮುಖ್ಯವಾದ ಕಿವಿಮಾತೆನೆಂದರೆ ಯಾವುದೆ ಕಾರಣಕ್ಕೂ ಕೆಲಸದ ಒತ್ತಡದಲ್ಲಿಯೂ ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದನ್ನು ಮರೆಯದಿರಿ ಮಹಿಳೆಯರು ತಮ್ಮ ಮನೆಯನ್ನು ನಿಭಾಯಿಸುವ, ನಡೆಸಿಕೊಂಡು ಹೋಗುವ ಸಾಮರ್ಥ್ಯ, ಆರೋಗ್ಯ, ಬುದ್ಧಿವಂತಿಕೆಯನ್ನು ಹೊಂದಿದ್ದರೆ ಮಾತ್ರ ನಿಮಗೆ ಸಮಾಜದಲ್ಲಿ ಉನ್ನತ ಸ್ಥಾನ ಸಿಗುತ್ತದೆ ಗೌರವಕ್ಕೆ ಒಳಗಾಗುತ್ತೀರಾ ಎಂಬುದನ್ನು ಮರೆಯಬೇಡಿ. ಎಷ್ಟೆ ಕೆಲಸವಿದ್ದರೂ ಪ್ರತಿದಿನ ನಿಮ್ಮ ಆರೋಗ್ಯವನ್ನು ಲಕ್ಷ್ಯದಲ್ಲಿಟ್ಟುಕೊಳ್ಳಿ ಆರೋಗ್ಯದ ಕಡೆ ಗಮನಹರಿಸಿ ನಿಮ್ಮ ಆರೋಗ್ಯದ ಮೇಲೆಯೆ ನಿಮ್ಮ ಮನೆ ಹಾಗೂ ಮನೆಯವರ ಜೀವನ ನಿಂತಿರುತ್ತದೆ.
ಹಲವು ಮಾಹಿತಿಯನ್ನು ಹಲವಾರು ಲೇಖನಗಳಿಂದ ತಿಳಿಯಬಹುದು ಆದರೆ ಪ್ರತಿದಿನ ಮನೆ ಕೆಲಸ ಮಾಡುವ ತನಗಾಗಿ ಅಲ್ಲದೆ ತನ್ನವರಿಗಾಗಿಯೇ ಜೀವಿಸುವ ಒಂದು ಜೀವಿ ಅಮ್ಮ ಅಥವಾ ಪ್ರತಿಯೊಬ್ಬ ಗೃಹಿಣಿ ಅಂತಹ ಪ್ರತಿ ಮನೆಯ ಗೃಹಿಣಿಯರಿಗೆ ಕೆಲವೊಂದಿಷ್ಟು ಉಪಯುಕ್ತ ಮಾಹಿತಿ ಇರುವ ಈ ಲೇಖನವನ್ನು ನೀವು ಓದಿ ತಪ್ಪದೆ ನಿಮ್ಮ ಸುತ್ತಮುತ್ತಲಿನವರಿಗೆ ತಿಳಿಸಿ.