ಹಿಂದಿನ ಕಾಲದ ಜೀವನ ಶೈಲಿಯಲ್ಲಿ ಆರೋಗ್ಯವಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ ಬದಲಾಯಿತು ಜೀವನಶೈಲಿಗೆ ತಕ್ಕನಾಗಿ ಉಡುಪುಗಳು ಕೂಡ ಬದಲಾದವು. ನಾವು ಧರಿಸುವ ಡ್ರೆಸ್, ಸೀರೆಗಳಲ್ಲಿ ಬದಲಾವಣೆ ಆಗಿದ್ದಲ್ಲದೆ ಒಳ ಉಡುಪುಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಯಿತು. ಈಗಿನ ದಿನಗಳಲ್ಲಿ ಮಹಿಳೆಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಬ್ರಾಅನ್ನು ಧರಿಸುತ್ತಾರೆ. ಅದರಿಂದ ಅವರ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸಾಕಷ್ಟು ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಮಹಿಳೆಯರು ಪ್ರತಿ ದಿನ ಧರಿಸುವ ಒಳ ಉಡುಪುಗಳಲ್ಲಿ ಬ್ರಾ ಕೂಡ ಒಂದಾಗಿದೆ. ಮಹಿಳೆಯರು ಬ್ರಾ ಧರಿಸಿ ರಾತ್ರಿ ಮಲಗುವುದು ಒಳ್ಳೆಯದಾ ಅಥವಾ ಅದರಿಂದ ಯಾವುದಾದರೂ ಅಡ್ಡ ಪರಿಣಾಮಗಳಿವೆಯಾ ಎನ್ನುವುದು ಹಲವು ಮಹಿಳೆಯರ ಪ್ರಶ್ನೆಯಾಗಿದೆ. ಹೆಚ್ಚಿನ ಮಹಿಳೆಯರು ತಮ್ಮ ಸ್ತನ ಜೊತುಬೀಳಬಾರದು ಎಂದು ಧರಿಸುತ್ತಾರೆ. ಮಹಿಳೆಯರು ಇತ್ತೀಚಿನ ದಿನಗಳಲ್ಲಿ ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ ತಮ್ಮ ಸೌಂದರ್ಯ ವೃದ್ಧಿಗಾಗಿ ಹಲವು ಆಧುನಿಕ ಪದ್ಧತಿಗಳ ಮೊರೆ ಹೋಗುತ್ತಿದ್ದಾರೆ ಅದರಂತೆ ತಮ್ಮ ಅಂದ ಹೆಚ್ಚಿಸಿಕೊಳ್ಳಲು ಬ್ರಾಅನ್ನು ಬಳಸುತ್ತಾರೆ ಇದರಿಂದ ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಕೆಲವು ಮಹಿಳೆಯರಿಗೆ ಈಗಾಗಲೆ ಸ್ತನಗಳು ಜೋತು ಬಿದ್ದಿದ್ದರೂ ಕಾಣಬಾರದು ಎಂಬ ಕಾರಣಕ್ಕೆ ಟೈಟ್ ಆದ ಬ್ರಾ ಅನ್ನು ಧರಿಸುತ್ತಾರೆ ಮಹಿಳೆಯರು ಇಂತಹ ತಪ್ಪುಗಳನ್ನು ಮಾಡಬಾರದು ಇದರಿಂದ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರ ಕೆಲವು ಸಮಸ್ಯೆಗಳಿಗೆ ದುಪಟ್ಟವನ್ನು ಬಳಸುವುದು ಉತ್ತಮ ದುಪಟ್ಟಾದಲ್ಲಿ ಈಗೀಗ ಕೆಲವು ವಿವಿಧ ರೀತಿಯ ವಿನ್ಯಾಸ ಆಕರದ ದುಪ್ಪಟ್ಟಾಗಳು ಮಾರುಕಟ್ಟೆಗೆ ಬಂದಿವೆ. ಟೈಟಾದ ಬ್ರಾಅನ್ನು ಧರಿಸುವುದರಿಂದ ರಕ್ತದ ಸಂಚಾರ ಸರಾಗವಾಗಿ ಆಗುವುದಿಲ್ಲ ತೋಳುಗಳಲ್ಲಿನ ನರಗಳಿಗೆ ಮತ್ತು ದೇಹದ ಉಳಿದ ಭಾಗಗಳಿಗೆ ರಕ್ತದ ಸಂಚಾರವನ್ನು ತಡೆಯುತ್ತದೆ ಇದರಿಂದ ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿರುತ್ತದೆ ಇದರ ಬಗ್ಗೆ ಬಹಳಷ್ಟು ಮಹಿಳೆಯರಿಗೆ ಗೊತ್ತಿರುವುದಿಲ್ಲ.
ಮಹಿಳೆಯರು ರಾತ್ರಿ ಬ್ರಾ ಧರಿಸುವುದರಿಂದ ಸ್ತನ ಅಂಗಾಂಶವನ್ನು ತಲುಪದಂತೆ ರಕ್ತವನ್ನು ತಡೆಯಬಹುದು ಇದರಿಂದ ತಲೆ ತಿರುಗುವಿಕೆ, ಸ್ನಾಯು ಸೆಳೆತ ಕಂಡುಬರುತ್ತದೆ ಅನೇಕ ಮಹಿಳೆಯರು ಸ್ನಾಯು ಸೆಳೆತ ಸಮಸ್ಯೆಯನ್ನು ಎದುರಿಸುತ್ತಾರೆ ಅದಕ್ಕೆ ಇದು ಕಾರಣವಾಗಿದೆ.
ಮಹಿಳೆಯರು ಧರಿಸುವ ಬ್ರಾದ ಕೊಕ್ಕೆಗಳು ಮತ್ತು ಪಟ್ಟಿಗಳು ಚರ್ಮದ ಮೇಲ್ಮೈಗೆ ಪದೆ ಪದೆ ಉಜ್ಜುತದೆ ಇದರಿಂದ ನೋವು, ಅಸ್ವಸ್ಥತೆ, ಕಿರಿಕಿರಿಯಂತಹ ಸಮಸ್ಯೆಗಳು ಕಂಡುಬರುತ್ತದೆ. ಇಡಿ ರಾತ್ರಿ ನಿರಂತರವಾಗಿ ಬ್ರಾ ಧರಿಸುವುದರಿಂದ ಘರ್ಷಣೆಯನ್ನು ಉಂಟುಮಾಡುತ್ತದೆ, ಮಹಿಳೆಯರ ದೇಹದಲ್ಲಿ ಮೆಲನೋಸೈಟ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ಕಪ್ಪು ಕಲೆಗಳು, ಅಸಮ ಚರ್ಮದ ಟೋನನ್ನು ರೂಪಿಸುತ್ತದೆ. ಕೆಲವು ಮಹಿಳೆಯರಿಗೆ ಟೈಟ್ ಆದ ಬ್ರಾಅನ್ನು ಧರಿಸುವುದರಿಂದ ಹೊಟ್ಟೆಯ ಮೇಲ್ಭಾಗದಲ್ಲಿ ಸುತ್ತಲೂ ಅಲರ್ಜಿ ಉಂಟಾಗಬಹುದು. ಇತ್ತೀಚಿನ ಮಹಿಳೆಯರು ಆರೋಗ್ಯಕ್ಕಿಂತ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ ಆದರೆ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸೌಂದರ್ಯ ಚೆನ್ನಾಗಿರಲು ಸಾಧ್ಯ.
ಆರೋಗ್ಯವೆ ಭಾಗ್ಯ ಎನ್ನುವ ಮಾತಿನಂತೆ ಆರೋಗ್ಯವೆ ಹಾಳಾದರೆ ಸೌಂದರ್ಯವಿದ್ದು ಪ್ರಯೋಜನಕ್ಕೆ ಬರುವುದಿಲ್ಲ ಆದ್ದರಿಂದ ಮಹಿಳೆಯರು ಇನ್ನು ಮುಂದಾದರೂ ಸೌಂದರ್ಯದ ಕಡೆ ಗಮನಹರಿಸುವುದಕ್ಕಿಂತ ಆರೋಗ್ಯದ ಕಡೆಯೂ ಗಮನಹರಿಸುವುದು ಅವಶ್ಯಕವಾಗಿದೆ. ಆರೋಗ್ಯ ಚೆನ್ನಾಗಿದ್ದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಇದರಿಂದ ಸೌಂದರ್ಯ ವೃದ್ಧಿಯಾಗುತ್ತದೆ. ಮಹಿಳೆಯರ ಕೈಯಲ್ಲಿಯೆ ಅವರ ಆರೋಗ್ಯವಿದೆ ಆದ್ದರಿಂದ ತಮ್ಮ ಉಡುಪುಗಳ ಬಗ್ಗೆ ಸದಾ ಗಮನವಿದ್ದು ಆರೋಗ್ಯದ ದೃಷ್ಟಿಯಿಂದ ಒಳಿತಾಗುವ ಉಡುಪುಗಳನ್ನು ಧರಿಸುವುದು ಒಳ್ಳೆಯದು. ಈ ಮಾಹಿತಿ ಅತ್ಯಂತ ಉಪಯುಕ್ತವಾಗಿದ್ದು ಮಹಿಳೆಯರು ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕಾಗಿದೆ ಈಗಲಾದರೂ ಮಹಿಳೆಯರು ಈ ಲೇಖನವನ್ನು ಓದುವ ಮೂಲಕ ತಮ್ಮ ಆರೋಗ್ಯದ ಕಡೆ ಗಮನ ಹರಿಸಲಿ