ಆಷಾಡ ಮಾಸದಲ್ಲಿ ಯಾವ ದೇವರನ್ನು ಪೂಜಿಸಿದರೆ ಯಾವ ಯಾವ ರೀತಿಯ ಫಲದೊರೆಯುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಹಿಂದೂ ಧರ್ಮದ ಪ್ರಕಾರ, ಹಿಂದೂ ಧರ್ಮದ ನಾಲ್ಕನೇ ತಿಂಗಳ ಆಷಾಡ ಮಾಸ ಆಗಿದೆ. ಆಷಾಢಮಾಸದ ಈ ತಿಂಗಳಿನಲ್ಲಿ ವರ್ಷ ಋತುವಿನ ಆರಂಭವಾಗುತ್ತದೆ. ಅಷ್ಟೇ ಅಲ್ಲದೆ ಈ ಸಮಯದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಕಾರಣ ಈ ಸಮಯದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಕೂಡಿರುತ್ತದೆ.
ಆಶಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡುವುದರಿಂದ ಹೆಚ್ಚು ಫಲವನ್ನು ನೀಡುತ್ತದೆ. ಇದರ ಜೊತೆಗೆ ದೇವಿಯ ಪೂಜೆ ಕೂಡ ಮಂಗಳಕರ ಹಾಗೂ ಶ್ರೇಯಸ್ಕರ ವಾಗಿದೆ. ಅಷ್ಟೇ ಅಲ್ಲದೆ ಶ್ರೀಹರಿ ವಿಷ್ಣುವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಜಲ ದೇವರ ಆರಾಧನೆಯನ್ನು ಮಾಡುವುದರಿಂದ ಯಾವುದೇ ರೀತಿ ಹಣಕಾಸಿನ ಸಮಸ್ಯೆ ಉಂಟಾಗುವುದಿಲ್ಲ. ಈ ತಿಂಗಳಿನಲ್ಲಿ ಅವಶ್ಯಕವಾಗಿ ಮಂಗಳ ಹಾಗೂ ಸೂರ್ಯನ ಪೂಜೆಯನ್ನು ಮಾಡಲೇಬೇಕು.
ಆಷಾಡ ಮಾಸದ ಈ ತಿಂಗಳಿನಲ್ಲಿ ನೀರು ಇರುವಂತಹ ಹಣ್ಣುಗಳು ಸೇವನೆಯನ್ನು ಹೆಚ್ಚಾಗಿ ಮಾಡಬೇಕು. ಬೇಲ್ ಹಣ್ಣನ ಹೆಚ್ಚಾಗಿ ಸೇವಿಸಬಾರದು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸಹ ಆಶಾಡ ಮಾಸದಲ್ಲಿ ಹೆಚ್ಚಾಗಿ ಸೇವಿಸಬಾರದು. ಈ ಸಮಯದಲ್ಲಿ ಸೋಂಪು ಇಂಗು ಹಾಗೂ ನಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಈ ತಿಂಗಳಿನಲ್ಲಿ ಶ್ರೀಹರಿ ವಿಷ್ಣು ನಿದ್ರೆಗೆ ಜಾರುತ್ತಾರೆ ಹಾಗಾಗಿ ಈ ಸಮಯದಲ್ಲಿ ನಾಲ್ಕು ತಿಂಗಳುಗಳ ಕಾಲ ಯಾವುದೇ ಶುಭ ಕಾರ್ಯಗಳು ಸಹ ನಡೆಯುವುದಿಲ್ಲ.