ಕ್ಯಾರೆಟ್ ಇದೊಂದು ಭೂಮಿಯ ಒಳಗಡೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರಿರುವ ಒಂದು ತರಕಾರಿ. ಆಕರ್ಷಕ ಬಣ್ಣವನ್ನು ಹೊಂದಿರುವ ಕ್ಯಾರೆಟ್ ಇದು ಮೊಲದ ಅಚ್ಚು ಮೆಚ್ಚಿನ ಆಹಾರ. ಇದನ್ನ ನಾವೂ ಕೂಡ ಪ್ರತೀ ದಿನ ನಿಯಮಿತವಾಗಿ ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಿದ್ರೆ ಕ್ಯಾರೆಟ್ ಅನ್ನು ಪ್ರತೀ ದಿನ ನಿಯಮಿತವಾಗಿ ಸೇವಿಸುವುದರಿಂದ ಏನೆಲ್ಲ ಲಾಭಗಳು ಇವೆ ಅನ್ನೋದನ್ನ ನೋಡೋಣ.
ಕಣ್ಣಿನ ತೊಂದರೆ ಇದ್ದವರು ಕ್ಯಾರೆಟ್ ಅನ್ನು ಬಳಸುವುದು ಉತ್ತಮ. ಪ್ರತೀ ದಿನ ನಿಯಮಿತವಾಗಿ ಕ್ಯಾರೆಟ್ ಬಳಸುವುದರಿಂದ ಕಣ್ಣಿನ ಎಲ್ಲ ಸಮಸ್ಯೆಗಳಿಂದ ದೂರ ಇರಬಹುದು. ಕ್ಯಾನ್ಸರ್ ರೋಗವನ್ನು ತಡೆಯುವ ಶಕ್ತಿ ಕ್ಯಾರೆಟ್ ನಲ್ಲಿ ಇದೆ. ಪ್ರತೀ ದಿನ ನಿಯಮಿತವಾಗಿ ಕ್ಯಾರೆಟ್ ಅನ್ನು ಸೇವಿಸುವುದರಿಂದ ಕ್ಯಾನ್ಸರ್ ಬರದಂತೆ ನೋಡಿಕೊಳ್ಳಬಹುದು. ಇನ್ನು ಸೌಂದರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸದಾ ಅದರ ಕಡೆ ಗಮನ ಕೊಡುವವರು ಪ್ರತೀ ದಿನ ಒಂದು ಕ್ಯಾರೆಟ್ ತಿನ್ನುವುದರಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಿಕೊಳ್ಳಲು ಸಹ ಕ್ಯಾರೆಟ್ ಸಹಾಯಕಾರಿ ಆಗಿದೆ.
ಕ್ಯಾರೆಟ್ ಮತ್ತು ಬೀಟ್ರೂಟ್ ಇವೆರಡನ್ನೂ ಬಳಸಿ ಜ್ಯೂಸು ತಯಾರಿಸಿ ಕುಡಿಯುವುದರಿಂದ ಹೆಚ್ಚಿನ ಲಾಭಗಳು ಇವೆ. ಕ್ಯಾರೆಟ್ ಅನ್ನು ಜ್ಯುಸ್ ಮಾಡದೆ ಹಾಗೆ ತಿನ್ನುವುದರಿಂದ ಹಲ್ಲು ಮತ್ತು ಒಸಡು ಗಟ್ಟಿಗೊಳ್ಳುತ್ತದೆ. ಕ್ಯಾರೆಟ್ ಅನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ಸೇವಿಸುವುದು ಉತ್ತಮ. ಅದರಲ್ಲೂ ಊಟದ ಮಧ್ಯೆ ಹಸಿವಾದಾಗ ಆ ಸಂದರ್ಭದಲ್ಲಿ ಕ್ಯಾರೆಟ್ ಸಲಾಡ್ ಮಾಡಿಕೊಂಡು ಸೇವಿಸುವುದು ಉತ್ತಮ. ಹಳ್ಳಿ ಕಡೆಯ ಜನಎನ್ನು ಹೆಚ್ಚಾಗಿ ಗಮನಿಸಿದರೆ ಅವರು ಊಟದಲ್ಲಿ ಹೆಚ್ಚಾಗಿ ಹಸಿ ತರಕಾರಿಗಳನ್ನು ಬಳಸುವುದನ್ನು ನಾವು ಕಾಣಬಹುದು . ಅದರಲ್ಲೂ ಉತ್ತರ ಕರ್ನಾಟಕದ ಜನ ರೊಟ್ಟಿ ಚಪಾತಿ ಜೊತೆಗೆ ಹಸಿ ಈರುಳ್ಳಿ ಸೌತೆಕಾಯಿ ಕ್ಯಾರೆಟ್ ಅನ್ನು ಸೇವಿಸುತ್ತಾರೆ. ಹೀಗೆ ಹಸಿಯಾಗಿ ಇಡೀ ತರಕಾರಿಯನ್ನು ನಾವು ಸೇವಿಸುವುದರಿಂದ ಅದರಲ್ಲಿನ ಎಲ್ಲಾ ಪೋಷಕಾಂಶಗಳನ್ನು ನಾವು ಪಡೆದುಕೊಳ್ಳಬಹುದು.