Tomoto Success Story In Kannada: ನಮ್ಮ ದೇಶದ ಬೆನ್ನೆಲುಬು ರೈತ, ರೈತ ಬೆಳೆದಂತ ಬೆಳೆಗಳಿಗೆ ಸಾಮಾನ್ಯವಾಗಿ ಬೆಂಬಲ ಬೆಲೆ ಸಿಗೋದು ತುಂಬಾ ಕಡಿಮೆ. ನಾನಾ ರೀತಿಯ ಬೆಳೆಗಳನ್ನು ಬೆಳೆಯುವಂತ ರೈತ ಬಹಳಷ್ಟು ಸಾರಿ ಸರಿಯಾದ ಬೆಲೆ ಸಿಗದೇ ಸಾಲಗಾರನಾಗುತ್ತಾನೆ. ಆದ್ರೆ ಇದೀಗ ಎಲ್ಲೆಡೆ ಟೊಮೊಟೊ ಹಾಗೂ ಮೆಣಸಿಕಾಯಿಯ ಬೆಳೆಯದ್ದೇ ಮಾತು, ಹೌದು ಅಷ್ಟರ ಮಟ್ಟಿಗೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.

ಕೆಲವು ತಿಂಗಳುಗಳಿಂದ ಟೊಮೊಟೊ ಬೆಲೆಯಲ್ಲಿ ಬಾರಿ ಏರಿಕೆಯಾಗಿದ್ದು ರೈತನ ಮುಖದಲ್ಲಿ ಇದೀಗ ಸ್ವಲ್ಪ ಮಂದಹಾಸ ಮೂಡಿಸಿದೆ, ಆದ್ರೆ ಗ್ರಾಹಕರಿಗೆ ಸಂಕಷ್ಟ. ಹೌದು ಮುಖ್ಯವಾಗಿ ವಿಷಯಕ್ಕೆ ಬರೋಣ ಟೊಮೊಟೊ ಬೆಲೆಯಲ್ಲಿ ಒಂದೇ ದಿನಕ್ಕೆ ಕೋಟಿ ಕೋಟಿ ಸಂಪಾದನೆ ಮಾಡಿದ ಈ ದಂಪತಿ ಯಾರು? ಇದು ಹೇಗೆ ಸಾಧ್ಯವಾಯಿತು ಅನ್ನೋದನ್ನ ಮುಂದೆ ನೋಡಿ.

Tomoto Success Story

ಮಹಾರಾಷ್ಟ್ರದ ಪುಣೆ ಜಿಲ್ಲೆಯ 36 ವರ್ಷದ ರೈತ ಈಶ್ವರ್‌ ಗಾಯ್ಕರ್‌ (Ishwar Gaykar) ಟೊಮೆಟೋ ಬೆಳೆದು ಕೇವಲ ಒಂದೇ ತಿಂಗಳಿನಲ್ಲಿ ಕೋಟ್ಯಧಿಪತಿಯಾಗಿದ್ದಾರೆ. ಗಾಯ್ಕರ್‌ ಕೇವಲ ಒಂದು ತಿಂಗಳಲ್ಲಿ 17,000 ಕ್ರೇಟ್‌ ಟೊಮೆಟೋ ಮಾರಾಟ ಮಾಡಿ ಬರೋಬ್ಬರಿ 2.8 ಕೋಟಿ ರೂ. ಆದಾಯ ಗಳಿಸಿದ್ದಾರೆ. ಇವರು ಸುಮಾರು 5 ರಿಂದ 6 ವರ್ಷಗಳಿಂದ ಟೊಮೊಟೊ ಬೆಳೆಯುತ್ತಿದ್ದರು ಆದ್ರೆ ಸರಿಯಾದ ಬೆಲೆ ಸಿಕ್ಕಿರಲಿಲ್ಲ ಇದೀಗ ಟೊಮೊಟೊ ಬೆಲೆಯಲ್ಲಿ ಉತ್ತಮ ಇಳುವರಿ ಬಂದಿದ್ದು ಕೈ ತುಂಬಾ ಹಣ ಸಂಪಾದನೆ ಮಾಡಿದ್ದಾರೆ.

ಕರ್ನಾಟಕದಲ್ಲೂ ಕೂಡ ಟೊಮೊಟೊ ಬೆಲೆಯಲ್ಲಿ ಉತ್ತಮ ಲಾಭಗಳಿಸಿದ್ದಾರೆ ಕೆಲ ರೈತರು, ಹೌದು ಅರ್ಧ ಒಂದು ಎಕರೆಯಲ್ಲಿ ಲಕ್ಷ ಲಕ್ಷ ಗಳಿಸಿರುವಂತ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.ಅದೇನೇ ಇರಲಿ ಇನ್ನೂ ಎಷ್ಟುದಿನ ಈ ಟೊಮೊಟೊ ಬೆಲೆ ಇಗೆ ಇರುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಇದನ್ನೂ ಓದಿ Electronic Scooty: ಒಂದೇ ಚಾರ್ಜ್ ನಲ್ಲಿ 800 ಕಿ.ಮೀ ಮೈಲೇಜ್ ನೀಡುವ ಈ ಸ್ಕೂಟಿ, ಇದರ ಬೆಲೆ ಹೀಗಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!