ಬಾದಾಮಿಯ ವಿಶೇಷತೆ ಏನು ಅದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭಗಳು ಇವೆ ಅನ್ನೋದರ ಬಗ್ಗೆ ನಮಗೆಲ್ಲ ಈಗಾಗಲೇ ತಿಳಿದಿದೆ. ಎಷ್ಟೋ ಜನರು ಬೆಳಿಗ್ಗೆ ಎದ್ದಾಗ ನೆನೆಸಿಟ್ಟ ಬಾದಾಮಿಯನ್ನು ತಿನ್ನುತ್ತಾರೆ. ನಮ್ಮ ದೇಹಕ್ಕೆ ಬೇಕಾದ ಹಲವಾರು ರೀತಿಯ ಪೋಷಕಾಂಶಗಳು ಈ ಬಾದಾಮಿಯಲ್ಲಿವೇ. ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳು ಇವೆ ವಿಟಮಿನ್ ಇ ಇದೆ. ಅಷ್ಟೇ ಅಲ್ಲದೆ ಕೋಪರ್, ಮ್ಯಾಗ್ನಿಶಿಯಂ, ಪಾಸ್ಪರಸ್ ಇನ್ನೂ ಹಲವಾರು ಪೋಷಕಾಂಶಗಳು ಇವೆ. ಇನ್ನು ಬಾದಾಮಿಯ ಕ್ಯಾಲೋರಿ ಬಗ್ಗೆ ಹೇಳುವುದಾದರೆ ಒಂದು ಬಾದಾಮಿಯಲ್ಲಿ 6 ಕ್ಯಾಲೋರಿ ಇರತ್ತೆ. ಅತೀ ಹೆಚ್ಚು ನ್ಯೂಟ್ರೀಷ್ಯನ್ ಒಂದು ಬಾದಾಮಿಯಲ್ಲಿ ಇರುತ್ತದೆ. ಬಾದಾಮಿಯ ಉಪಯೋಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುವುದರಿಂದ ಹೇಗೆ ಸೇವಿಸಬೇಕು? ಎಷ್ಟು ಸೇವಿಸಬೇಕು ಮತ್ತು ಯಾವಾಗ ಸೇವಿಸಬೇಕು ಅನ್ನೋದನ್ನ ನೋಡೋಣ.
ಬಾದಾಮಿಯಲ್ಲಿರುವ ಆಂಟಿ ಆಕ್ಸಿಡಂಟ್ ಅಂಶ ನಮ್ಮನ್ನು ಕ್ಯಾನ್ಸರ್ ನಿಂದ ದೂರ ಇರುವಂತೆ ಮಾಡುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಈ ಇಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗ ಮತ್ತು ಕ್ಯಾನ್ಸರ್ ನಿಂದ ದೂರ ಇರಬಹುದು. ಇನ್ನು ಬಿಪಿ ಹೆಚ್ಚು ಇರುವವರು ಬಾದಾಮಿಯನ್ನು ತಿನ್ನುವುದು ತುಂಬಾ ಒಳ್ಳೆಯದು. ಯಾಕಂದ್ರೆ ಬಾದಾಮಿಯಲ್ಲಿರುವ ಮ್ಯಾಗ್ನಿಶಿಯಂ ಅಂಶವು ಬಿಪಿಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಇನ್ನು ಒಂದು ರಿಸರ್ಚ್ ನ ಪ್ರಕಾರ ನಮ್ಮ ದೇಹದಲ್ಲಿರಿವ ಕೊಬ್ಬನ್ನು ಕರಗಿಸಲು ಬಾದಾಮಿಯಲ್ಲಿರುವ ಅತೀ ಹೆಚ್ಚು ಪೌಷ್ಟಿಕ ಅಂಶಗಳು ಸಹಾಯ ಮಾಡುತ್ತದೆ.
ಬಾದಾಮಿಯನ್ನು ತಿನ್ನುವ ಸರಿಯಾದ ವಿಧಾನ ಅಂದರೆ ರಾತ್ರಿ ಪೂರ್ತಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಬೇಕು. ನಂತರ ಬೆಳಿಗ್ಗೆ ಬಾದಾಮಿಯ ಸಿಪ್ಪೆಯನ್ನು ತೆಗೆದು ತಿನ್ನಬೇಕು. ಕೆಲವರು ಬಾದಾಮಿ ಸಿಪ್ಪೆಯಲ್ಲಿ ಕೂಡಾ ಜಾಸ್ತಿ ಪೋಷಕಾಂಶಗಳು ಇರುವುದರಿಂದ ಸಿಪ್ಪೆ ಯನ್ನೂ ಸಹ ತಿನ್ನಬೇಕು ಎಂದು ಹೇಳುತ್ತಾರೆ. ಆದರೆ ಯಾಕೆ ಬಾದಾಮಿ ಸಿಪ್ಪೆಯನ್ನು ತಿನ್ನಬಾರದು ಎನ್ನುವುದನ್ನು ಮಾವು ತಿಳಿದುಕೊಂಡಿರಬೇಕು. ಬಾದಾಮಿ ಸಿಪ್ಪೆಯಲ್ಲಿ ಏಂಜೆಮ್ ಇನ್ಹೇಬಿಟಸ್ ಅಂಶ ಇರುತ್ತದೆ. ಇದು ಬಾದಾಮಿಗೆ ಕ್ರಿಮಿ ಕೀಟಗಳಿಂದ ರಕ್ಷಣೆ ನೀಡುತ್ತದೆ. ಹೀಗಿದ್ದಾಗ ನಾವು ಬಾದಾಮಿಯನ್ನು ಸಿಪ್ಪೆ ಜೊತೆಗೆ ತಿಂದರೆ ಸಿಪ್ಪೆಯಲ್ಲಿರುವ ಏಂಜೆಮ್ ಇನ್ಹೇಬಿಟಸ್ ಅಂಶ ನಗೆ ಬಾದಾಮಿಯಲ್ಲಿ ಇರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸರಿಯಾಗಿ ಸಿಗುವುದಿಲ್ಲ. ಸಿಪ್ಪೆ ಸಮೇತ ತಿನ್ನುವುದರಿ ದ ಬಾದಾಮಿ ನಮ್ಮ ದೇಹದಲ್ಲಿ ಪೂರ್ಣ ಪ್ರಮಾಣದಲ್ಲಿ ಜೀರ್ಣ ಆಗುವುದಿಲ್ಲ. ಹಾಗಾಗಿ ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿತ್ತು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು.
ಅಷ್ಟೇ ಅಲ್ಲದೆ ಮೊಳಕೆ ಬಂದ ಬಾದಾಮಿಯನ್ನು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದು. ಮೊಳಕೆ ಬಂದ ಬಾದಾಮಿಯಲ್ಲಿ ಶೇಕಡಾ 30ರಷ್ಟು ಹೆಚ್ಚು ನ್ಯೂಟ್ರಿಷಿಯನ್ ಪವರ್ ಇರುತ್ತದೆ. ಒಂದೆರಡು ದಿನ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟರೆ ಅದು ಮೊಳಕೆ ಬರುತ್ತದೆ. ಇದನ್ನು ತಿನ್ನುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ರಿಸರ್ಚ್ ನ ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಎಂಟರಿಂದ ಹತ್ತು ಬಾದಾಮಿಯನ್ನು ಸೇವಿಸುವುದು ಉತ್ತಮ. ಹೆಚ್ಚು ಸೇವಿಸಿದರೂ ಸಹ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ ವಿಟಮಿನ್ ಇ ಕೂಡಾ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಆಯುರ್ವೇದದ ಪ್ರಕಾರ, ಹೆಚ್ಚು ಬಾದಾಮಿಯನ್ನು ತಿನ್ನುವುದರಿಂದ ಪಿತ್ತ ಹೆಚ್ಚು ಆಗುತ್ತದೆ. ಹಾಗಾಗಿ ದಿನಕ್ಕೆ ಎಂಟರಿಂದ ಹತ್ತು ಬಾದಾಮಿಯನ್ನು ತಿಂದರೆ ಯಾವುದೇ ಸಮಸ್ಯೆ ಇರುವುದಿಲ್ಲ.