Ration Card New Updates: ರೇಷನ್ ಕಾರ್ಡ್ ಇರುವಂತಹ ಎಲ್ಲರಿಗೂ ಅನ್ನ ಭಾಗ್ಯ ಯೋಜನೆ ಅನ್ವಯ ಆಗುವುದಿಲ್ಲ. ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಇರುವಂತಹ ಎಲ್ಲರಿಗೂ ಕೂಡ ಹಣ ವರ್ಗಾವಣೆ ಆಗುವುದಿಲ್ಲ. ಯಾರಿಗೆಲ್ಲ ಹಣ ವರ್ಗಾವಣೆಯಾಗುತ್ತದೆ ಹಾಗೂ ಯಾರಿಗೆಲ್ಲ ಆಗೋದಿಲ್ಲ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಕಾಂಗ್ರೆಸ್ 5 ಗ್ಯಾರಂಟಿಯಲ್ಲಿ ಒಂದು ಗ್ಯಾರೆಂಟಿಯಾದ ಅನ್ನಭಾಗ್ಯ ಯೋಜನೆ ಪ್ರಾರಂಭಗೊಂಡಿದೆ. 10 ಕೆಜಿ ಯಲ್ಲಿ 5 ಕೆಜಿ ಅಕ್ಕಿ ವಿತರಣೆ ಮಾಡಿ ಹಾಗೂ ಇನ್ನು 5 ಕೆಜಿಗೆ ಹಣ ನೀಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯ ಫಲವನ್ನು ಪಡೆಯಲು ಕೆಲವು ಶರತ್ತುಗಳು ಅನ್ವಯವಾಗುತ್ತದೆ. ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವಂತಹ ಎಲ್ಲರಿಗೂ ಕೂಡ ಈ ಯೋಜನೆ ಅನ್ವಯವಾಗುವುದಿಲ್ಲ.

ಮೊದಲನೆಯದಾಗಿ ರೇಷನ್ ಕಾರ್ಡಿನಲ್ಲಿ ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದರೆ ಆ ಕುಟುಂಬಗಳಿಗೆ ಹಣ ಹಾಕಬಾರದು ಎಂದು ಸರ್ಕಾರ ನಿರ್ಧಾರ ಮಾಡಿದೆ. ಎರಡನೇಯದಾಗಿ ಅಂತ್ಯೋದಯ ಕಾರ್ಡ್ ನಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಜನ ಕುಟುಂಬದಲ್ಲಿ ಇದ್ದರೆ ಅಂತವರಿಗೆ ಹಣ ಸಿಗುವುದಿಲ್ಲ . ಏಕೆಂದರೆ ಈಗಲೇ ಅವರಿಗೆ ಹತ್ತು ಕೆಜಿ ಅಕ್ಕಿಯನ್ನು ನೀಡುತ್ತಿದ್ದಾರೆ ಹಾಗಾಗಿ ಅವರಿಗೆ ಹಣ ಸಿಗುವುದಿಲ್ಲ.

Ration Card New Updates

ಮೂರನೇಯದಾಗಿ ಅಂತ್ಯೋದಯ ಕಾರ್ಡಿನಲ್ಲಿ ನಾಲ್ಕು ಜನ ಇದ್ದರೆ ಮೂರು ಜನಕ್ಕೆ ಹಣ ಸಿಗುವುದಿಲ್ಲ ಆದರೆ ಒಬ್ಬರಿಗೆ ಮಾತ್ರ ಹಣ ಸಿಗುತ್ತದೆ .ಏಕೆಂದರೆ ಅವರು ಈಗಾಗಲೇ 30 ಕೆಜಿ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ದಾರೆ. ನಾಲ್ಕನೆಯದಾಗಿ ಕಳೆದ ಮೂರು ತಿಂಗಳಲ್ಲಿ ಯಾರೆಲ್ಲ ರೇಷನ್ ಪಡೆದಿದ್ದೀರೋ ಅವರಿಗೆಲ್ಲ ಈ ಯೋಜನೆ ಅನ್ವಯ ಆಗುತ್ತದೆ. ಕೇವಲ ರೇಷನ್ ಕಾರ್ಡ್ ಹೊಂದಿದ್ದು ರೇಷನ್ ಪಡೆದುಕೊಳ್ಳದೆ ಇದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ.

ಐದನೆಯದು ಮನೆಯಲ್ಲಿರುವಂತಹ ಮಹಿಳೆಯರೇ ಕುಟುಂಬದ ಮುಖ್ಯಸ್ಥರಾಗಿರಬೇಕು. ಆರನೇಯದಾಗಿ ಕುಟುಂಬದ ಸದಸ್ಯರ ಆಧಾರ್ ಕಾರ್ಡಿಗೆ ರೇಷನ್ ಕಾರ್ಡ್ ಲಿಂಕ್ ಆಗಿರಬೇಕು ಹಾಗೂ ಪಾಸ್ ಬುಕ್ಕಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ನಿಮ್ಮ ಎಲ್ಲಾ ಮಾಹಿತಿಯನ್ನು ಜುಲೈ 20ರ ಒಳಗಾಗಿ ನಿಮ್ಮ ರೇಷನ್ ಕಾರ್ಡ್ ಅಂಗಡಿಯಲ್ಲಿ ಹೋಗಿಕೊಡಬೇಕು. ಜುಲೈ 20ರ ಒಳಗಾಗಿ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಚೀಟಿ ಕುಟುಂಬಕ್ಕೆ ಆಗಸ್ಟ್ ತಿಂಗಳಲ್ಲಿ ದುಡ್ಡು ಸಿಗಲಿದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ ಫ್ಲಿಪ್ಕಾರ್ಟ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಕೂಡಲೇ ಅರ್ಜಿಹಾಕಿ

By AS Naik

Leave a Reply

Your email address will not be published. Required fields are marked *