Diabetes Control yoga: ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರ? ನಾವು ಹೇಳುವಂತಹ ಆಸನವನ್ನು ಸರಿಯಾಗಿ ಒಂದು ತಿಂಗಳು ಮಾಡಿದರೆ ನಿಮಗೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಮತ್ಸೇಂದ್ರಾಸನದಿಂದ ನಿಮ್ಮ ಸಕ್ಕರೆ ಕಾಯಿಲೆ ಕಮ್ಮಿ ಮಾಡುವುದಷ್ಟೇ ಅಲ್ಲದೆ ಪ್ಯಾಂಕ್ರಿಯಾಸ್, ಲಿವರ್, ಕಿಡ್ನಿ ಹಾಗೂ ಕರುಳಿಗೆ ಹೇರಳವಾದಂತ ಆಕ್ಸಿಜನನ್ನು ಪೂರೈಕೆ ಮಾಡುತ್ತದೆ. ಜಠರದಲ್ಲಿ ಆಗುವಂತಹ ನಿಷ್ಕ್ರಿಯತೆಯನ್ನು ಸಮತೋಲನಕ್ಕೆ ತರಲು ಸಹಾಯ ಮಾಡುತ್ತದೆ.
ಪವನಮುಕ್ತಾಸನದಿಂದಾಗಿ ಹೊಟ್ಟೆ ಬೊಜ್ಜು ಕರಗುತ್ತದೆ. ನಿಯಮಿತವಾದ ಆಹಾರವನ್ನು ಸೇವಿಸಬೇಕು ಹಾಗೂ ಸರಿಯಾದ ಸಮಯಕ್ಕೆ ಮಲಗಿ ಸರಿಯಾದ ಸಮಯಕ್ಕೆ ಏಳುವುದು ಉತ್ತಮ. ಬೊಜ್ಜು ಕಡಿಮೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರುವುದು ತಡೆಗಟ್ಟುತ್ತದೆ ಹಾಗಾಗಿ ಈ ಆಸನ ಮಾಡುವುದು ಬಹಳ ಮುಖ್ಯ. ಪವನಮುಕ್ತ ಆಸನ ಅಂದರೆ ವಾಯುವಿಕಾರಗಳಿಂದ ಶರೀರದಲ್ಲಿ ಸೂಕ್ಷ್ಮತೆ ಕಡಿಮೆಯಾಗುತ್ತದೆ.
ಆಸನವನ್ನು ಕೇವಲ ವ್ಯಾಯಾಮ ರೀತಿಯಲ್ಲಿ ಮಾಡಬಾರದು, ಆಸನದಲ್ಲೂ ಕೂಡ ಉಸಿರಾಟ ಕ್ರಮವನ್ನ ನಾವು ಸರಿಯಾಗಿ ಅನುಸರಣೆ ಮಾಡಿದರೆ ಆಸನ ಮಾಡುತ್ತಲೇ ಪ್ರಾಣಾಯಾಮ ಮಾಡಿದಂತಿರಬೇಕು, ಸರಿಯಾಗಿ ಮಾಡಿದರೆ ಯೋಗ ಸರಿಯಾಗಿ ಮಾಡದಿದ್ದರೆ ರೋಗ ಎನ್ನುವ ಮಾತಿದೆ.
Diabetes Control yoga
ಅರ್ಧಹಾಲಾಸನವು external stimulation ಮೂಲಕ ಇಂಟರ್ನಲ್ ಆರ್ಗನ್ಸ್ ಕ್ರಿಯಾಶೀಲಗೊಳಿಸುತ್ತದೆ. ಅರ್ಧಹಾಲಾಸನದಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ, ಒತ್ತಡ ಬೀಳುವಂತಹ ಯಾವುದೇ ಆಸನವನ್ನು ಮಾಡಿದರೂ ಕೂಡ ಅಂಗಾಂಗಗಳಿಗೆ ಚೈತನ್ಯ ಹೆಚ್ಚಾಗುತ್ತದೆ ಅಲ್ಲಿ ಕ್ರಿಯಾಶೀಲತೆ ಉಂಟಾಗುತ್ತದೆ. ಸಕ್ಕರೆ ಕಾಯಿಲೆಯನ್ನು ಬೇರು ಸಮೇತ ನಿವಾರಣೆ ಮಾಡಲು ಇದು ಒಂದು ಒಳ್ಳೆಯ ಆಸನ. ಯೋಗಾಸನವನ್ನು ಯಾವಾಗಲೂ ಪ್ರಕೃತಿಯ ಮಧ್ಯೆ ಮಾಡಿದರೆ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ಆರೋಗ್ಯವಂತನಾಗಿ ಇಡುವ ಶಕ್ತಿಗೆ ಯೋಗವೆಂದು ಕರೆಯುತ್ತೇವೆ.
ಭುಜಂಗಾಸನ ಅಂದರೆ ಹಾವು, ಹಾವಿನ ರೀತಿಯಲ್ಲಿ ಶರೀರ ಹೆಡೆ ಎತ್ತುವುದಕ್ಕೆ ಭುಜಂಗಾಸನ ಎಂದು ಕರೆಯುತ್ತಾರೆ. ಯಾವಾಗ ಹೊಟ್ಟೆ ಹಾಗೂ ಹೊಟ್ಟೆ ಸುತ್ತಲಿನ ಬೊಜ್ಜು ಕರಗುತ್ತದೆ ಆಗ pancreas ಗೆ ಆಕ್ಸಿಜನ್ ಪೂರೈಕೆ ಸರಿಯಾಗಿ ಆಗುತ್ತದೆ. ಇಲ್ಲಿ ನಾವು ಹೇಳಿರುವಂತಹ ಆಸನವನ್ನು ಮಾಡುವುದರಿಂದ ಸಕ್ಕರೆ ಕಾಯಿಲೆ ಬರುವುದನ್ನು ತಡೆಯಬಹುದು ಹಾಗೂ ಬಂದಿರುವ ಸಕ್ಕರೆ ಕಾಯಿಲೆ ಕಡಿಮೆ ಮಾಡುವ ಶಕ್ತಿ ಈ ಆಸನಕ್ಕಿದೆ.