Udyogini Yojane 2023: ಮಹಿಳೆಯರೇ ನಿಮಗೆ ದುಡ್ಡಿನ ಅವಶ್ಯಕತೆ ಇದೆಯಾ ಸಾಲದ ಹಣಕ್ಕಾಗಿ ಹುಡುಕುತ್ತಿದ್ದೀರಾ? ಅಂತವರಿಗೆ ಒಂದು ಒಳ್ಳೆಯ ಮಾಹಿತಿ ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ. 3 ಲಕ್ಷ ದವರಗೆ ಸಾಲದ ಸೌಲಭ್ಯ ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಸರ್ಕಾರ ಮಹಿಳೆಯರಿಗಾಗಿ ಎಲ್ಲಾ ರೀತಿಯ ಸಮಾನತೆಯನ್ನು ಒದಗಿಸಿ ಕೊಡುವಂತಹ ಕೆಲಸವನ್ನು ಮಾಡುತ್ತಿದೆ. ಮಹಿಳೆಯರನ್ನು ಕೂಡ ಪುರುಷರಷ್ಟೇ ಪ್ರಬಲರಾಗಿ ಮಾಡಬೇಕೆಂದು ಸರ್ಕಾರ ಕೆಲವು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ ಅದರಲ್ಲಿ ಇದು ಒಂದು. ಹೊಸದಾಗಿ ಉದ್ಯೋಗ ಮಾಡುವಂತವರಿಗೆ ಈ ಯೋಜನೆ ತುಂಬಾ ಉಪಯೋಗಕಾರಿಯಾಗುತ್ತದೆ. ಈಗಿನ ಕಾಲದಲ್ಲಿ ಮಹಿಳೆಯರನ್ನು ನಾವು ಎಲ್ಲಾ ಕ್ಷೇತ್ರದಲ್ಲೂ ನೋಡಬಹುದು.

ಉದ್ಯೋಗಿನಿ ಯೋಜನೆಯ ಉದ್ದೇಶ ಹಾಗೂ ಪ್ರಯೋಜನಗಳು:-
ಸ್ವಂತ ಉದ್ಯೋಗ ಮಾಡಲು ಒಳ್ಳೆಯ ಅವಕಾಶವಾಗಿದೆ ಮತ್ತು ಸಾಲ ನೀಡುವುದು ಅಷ್ಟೇ ಅಲ್ಲದೆ ಉದ್ಯೋಗಿನಿ ಯೋಜನೆಯಡಿ ಸಾಲ ಪಡೆದ ಮಹಿಳೆಯರಿಗೆ ತರಬೇತಿಗಳನ್ನು ನೀಡುವ ಮೂಲಕ ಅವರ ಕೌಶಲ್ಯವು ಇನ್ನಷ್ಟು ಅಭಿವೃದ್ಧಿ ಆಗುವಂತೆ ಮಾಡುತ್ತದೆ. ಮಹಿಳೆಯರು ತಮ್ಮ ಕನಸಿನ ಸಾಕಾರಕ್ಕಾಗಿ ಖಾಸಗಿ ಸಾಲಗಾರರ ಬಳಿ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಯ ಸಾಲವನ್ನು ಪಡೆದು ತೊಂದರೆಗೆ ಸಿಲುಕಿಕೊಳ್ಳುವುದನ್ನು ತಪ್ಪಿಸುವುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದಂತಹ ಅರ್ಹತೆಗಳು:
ಏನೆಂದರೆ ಮೊದಲನೆಯದಾಗಿ ಗ್ರಾಮೀಣ ಮತ್ತು ಹಿಂದುಳಿದ ವರ್ಗದ ಮಹಿಳೆಯಾಗಿರಬೇಕು ಹಾಗೂ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ಮೀರಿರಬಾರದು. ಈ ಹಿಂದೆ ಬ್ಯಾಂಕಿನಲ್ಲಿ ಸಾಲ ಪಡೆದ ಹಣವಿದ್ದರೆ ಅದು ಮರುಪಾವತಿಸಿರಬೇಕು.ವ್ಯಾಪಾರಕ್ಕಾಗಿ ಸಾಲ ಪಡೆಯುವವರು ಅವರೇ ವ್ಯಾಪಾರದ ಮಾಲೀಕರಾಗಬೇಕು.

ಅರ್ಜಿ ಸಲ್ಲಿಸುವ ವಿಧಾನ :
ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಹತ್ತಿರದಲ್ಲಿರುವಂತಹ ಬ್ಯಾಂಕ್ ಶಾಖೆಗೆ ಹೋಗಿ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಇರುವ ಅರ್ಜಿ ಫಾರಂ ಪಡೆದು ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಕೇಳಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.

ಬೇಕಾಗುವ ದಾಖಲಾತಿಗಳು :
ಅರ್ಜಿದಾರರ ಆಧಾರ್ ಕಾರ್ಡ್,ಜನನ ಪ್ರಮಾಣಪತ್ರ, ಆದಾಯದ ಪುರಾವೆ,ವಿಳಾಸ ಪುರಾವೆ, ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ಸರಿಯಾಗಿ ಭರ್ತಿ ಮಾಡಿದ ಉದ್ಯೋಗಿನಿ ಯೋಜನೆಯ ಅರ್ಜಿ ನಮೂನೆ, ಪಡಿತರ ಚೀಟಿ (BPL ಕಾರ್ಡ್ ಹೊಂದಿರಬೇಕು), ಜಾತಿ ಪ್ರಮಾಣಪತ್ರ, ಬ್ಯಾಂಕ್ ಪಾಸ್‌ಬುಕ್‌ನ ವಿವರ ಮತ್ತು ಬ್ಯಾಂಕ್/NBFC ಗೆ ಅಗತ್ಯವಿರುವ ಯಾವುದೇ ಇತರ ದಾಖಲೆ (ಇದನ್ನೂ ಓದಿ) Gruha Jyoti Bill: ಗೃಹಜೋತಿ ಅರ್ಜಿ ಸಲ್ಲಿಸುವಾಗ ತುಂಬಾ ಎಚ್ಚರವಾಗಿರಿ, ತಪ್ಪು ಮಾಡಿದರೆ ಗೃಹ ಜ್ಯೋತಿ ಸೌಲಭ್ಯ ಸಿಗಲ್ಲ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!