ನೈಸರ್ಗಿಕವಾಗಿ ಸಿಗುವಂತ ಈ ಹಣ್ಣು ತರಕಾರಿಗಳು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಲು ಹೆಚ್ಚು ಪೂರಕವಾಗಿದೆ. ಅದರಲ್ಲೂ ಈ ಒಣ ಹಣ್ಣುಗಳು ಅಂದರೆ ಡ್ರೈ ಪ್ರುಟ್ಸ್ ಬಾದಾಮಿ, ಪಿಸ್ತಾ, ಗೋಡಂಬಿ, ಒಣ ಅಂಜೂರ ಎಲ್ಲವು ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತವೆ ಹಾಗೂ ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ. ಅವುಗಳಲ್ಲಿ ಈ ಪಿಸ್ತಾ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಆಗುತ್ತೆ ಅನ್ನೋದನ್ನ ನೋಡಣ ಬನ್ನಿ ನಿಮಗೆ ಈ ಅರೋಗ್ಯ ಮಾಹಿತಿ ಇಷ್ಟವಾದ್ರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.
ದಿನಕ್ಕೆ ೩ ರಿಂದ ೪ ಪಿಸ್ತಾ ಸೇವನೆ ಮಾಡುವುದರಿಂದ ಹಲವಾರು ರೋಗಗಳಿಂದ ದೂರ ಉಳಿಯಬಹುದಾಗಿದೆ, ಅಷ್ಟೇ ಅಲ್ದೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ಕ್ಯಾಲೋರಿ ಕರಗುವ ನಾರಿನಂಶವನ್ನು ಈ ಪಿಸ್ತಾ ಹೊಂದಿದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಜೊತೆಗೆ ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತದೆ.
ಪಿಸ್ತಾ ಮೆದುಳಿನ ಜೀವಕೋಶಗಳಿಗೆ ಪೋಷಣೆ ನೀಡುತ್ತದೆ ಹಾಗೂ ಕಣ್ಣಿನ ಅರೋಗ್ಯ ವೃದ್ಧಿಸುತ್ತದೆ, ಕಣ್ಣುಗಳ ಸವೆತ (macular degeneration)ದಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಬಿ6 ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಇನ್ನು ಅರೋಗ್ಯ ತಜ್ಞರ ಪ್ರಕಾರ ಪಿಸ್ತಾ ಸೇವನೆಯಿಂದ ಏನೆಲ್ಲಾ ಲಾಭವಿದೆ ಅನ್ನೋದನ್ನ ನೋಡುವುದಾದರೆ, ಕಣ್ಣಿನ ಅರೋಗ್ಯ ವೃದ್ಧಿಸುತ್ತದೆ, ಮೆದುಳಿನ ಅರೋಗ್ಯ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಅಂಡುತ್ತದೆ ಅಲ್ಲದೆ ದೇಹದ ಸೌಂದರ್ಯಕ್ಕೂ ಕೂಡ ಇದು ಪೂರಕವಾಗಿ ಕೆಲಸ ಮಾಡುತ್ತದೆ. ಇನ್ನು ದೇಹಕ್ಕೆ ಪಿಸ್ತಾ ಶಕ್ತಿಯನ್ನು ವೃದ್ಧಿಸಲು ಸಹಕಾರಿ.
ಮಧುಮೇಹಿಗಳಿಗೆ ಪಿಸ್ತಾ ಸೇವನೆ ಒಳ್ಳೆಯದು ಹಾಗೂ ದೇಹದಲ್ಲಿನ ರಕ್ತ ಸಂಚಲನಕ್ಕೆ ದೇಹದಲ್ಲಿನ ನರವ್ಯೂಹ ವ್ಯವಸ್ಥೆ ಪಿಸ್ತಾದಲ್ಲಿರುವ ವಿಟಮಿನ್ B6 ನರವ್ಯೂಹ ವ್ಯವಸ್ಥೆಗು ಕೂಡ ಪಿಸ್ತಾ ತುಂಬಾನೇ ಉಪಯೋಗಕಾರಿಯಾಗಿದೆ. ರೋಗಗಳಿಂದ ದೂರ ಮಾಡುತ್ತದೆ ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಹತ್ತಾರು ಲಾಭಗಳನ್ನು ಪಿಸ್ತಾ ಸೇವನೆಯಿಂದ ಪಡೆಯಬಹುದಾಗಿದೆ.