ಎತ್ತ ನೋಡಿದರೂ ಹಾಲಿನಂತೆ ಮುತ್ತಿಡುವ ಮಂಜಿನ ಮುಸುಕು, ಬೀಸುವ ತಣ್ಣನೆಯ ಗಾಳಿ ಇನ್ನೇನು ಎರಡು ಹೆಜ್ಜೆ ಮುಂದಿಟ್ಟರೆ ಆಕಾಶವನ್ನೇ ಕೈಯಿಂದ ಮುಟ್ಟುತ್ತೇವೆಯೇನೋ ಎನ್ನುವ ಅನುಭವ ಅದುವೇ ಕರ್ನಾಟಕ ರಾಜ್ಯದ ಅತೀ ಎತ್ತರದ ಪರ್ವತ ಶಿಖರ, ಕಾಫಿ ನಾಡು ಎಂದು ಪ್ರಖ್ಯಾತ ಆಗಿರುವ ಚಿಕ್ಕಮಂಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನ ಗಿರಿಯ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಮುಳ್ಳಯ್ಯನ ಗಿರಿ ಕರ್ನಾಟಕ ರಾಜ್ಯದ ಚಿಕ್ಕಮಂಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಚಂದ್ರ ದ್ರೋಣ ಸಾಲಿನಲ್ಲಿರುವಂತಹ ಒಂದು ಅತ್ಯಂತ ಎತ್ತರವಾದ ಶಿಖರವಾಗಿದೆ. ಹೆಸರೇ ಹೇಳುವಂತೆ ಮುಳ್ಳಯ್ಯನ ಗಿರಿ ಬೆಟ್ಟ ಕರ್ನಾಟಕದಲ್ಲೇ ಅತ್ಯಂತ ಎತ್ತರದ ಶಿಖರ ಎಂದು ಪ್ರಖ್ಯಾತಿಯನ್ನು ಹೊಂದಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 6330 ಅಡಿ ಎತ್ತರವಿದೆ. ಹಾಗಾಗಿ ಇದು ಚಾರಣಿಗಳಿಗೆ ಸ್ವರ್ಗ ಎಂದೇ ಹೆಸರುವಾಸಿ ಆಗಿದೆ. ಬೆಟ್ಟದ ಬುಡದಲ್ಲಿ ನಿಂತು ನೋಡಿದರೆ ಮೋಡಗಳು ಶಿಖರವನ್ನು ಆವರಿಸಿಕೊಂಡಂತೆ ಭಾಸವಾಗುತ್ತದೆ. ಒಂದೊಮ್ಮೆ ಬೆಟ್ಟದ ತುದಿ ಕಂಡರೆ ತಕ್ಷಣ ಮಾಯವಾಗುತ್ತದೆ. ಅಂತಹ ಅನುಭವವನ್ನು ಎಲ್ಲರೂ ಪಡೆಯಲೇಬೇಕು. ಮುಳ್ಳಯ್ಯನ ಗಿರಿ ಬೆಟ್ಟದ ಇನ್ನೊಂದು ವಿಶೇಷತೆ ಏನು ಅಂದರೆ,, ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ಪ್ರದೇಶಗಳ ನಡುವಿನ ಅತೀ ಎತ್ತರದ ಪರ್ವತವು ಇದಾಗಿದೆ.
ಇದು ನಮ್ಮ ಕರ್ನಾಟಕಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ. ಈ ಬೆಟ್ಟದ ಮೇಲ್ಭಾಗದಲ್ಲಿ ಮುಳ್ಳಯ್ಯ ಸ್ವಾಮಿಯ ದೇವಾಲಯವಿದೆ ಇನ್ನು ಕೆಲವರು ಇದನ್ನು ಮಠ ಎಂದೂ ಸಹ ಕರೆಯುತ್ತಾರೆ. ಹಬ್ಬದ ದಿನಗಳಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವಾಲಯಗಳಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ. ಹಾಗೆ ಇದು ಚಾರಣಿಕರಿಗೆ ಸ್ವರ್ಗ ಕೂಡಾ ಆಗಿದೆ. ಬೆಟ್ಟದ ಮೇಲ್ಭಾಗಕ್ಕೆ ಹೋಗಲು ರಸ್ತೆ ಕೂಡಾ ಇದೆ ಹಾಗೂ ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಕಾಲು ದಾರಿಯೂ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರ್ದಯು ನೈಸರ್ಗಿಕ ಗುಹೆಗಳನ್ನು ನಾವು ಕಾಣಬಹದು. ಮುಳ್ಳಯ್ಯನ ಗಿರಿ ಶಿಖರ ಚಿಕ್ಕಮಂಗಳೂರಿನಿಂದ 22 ಕಿಲೋಮೀಟರ್ ದೂರದಲ್ಲಿದೆ. ಕಡಿದಾದ ತಿರುವುಗಳಿಂದ ಕೂಡಿದ ಡಾಂಬರು ರಸ್ತೆಯ ಮೂಲಕ ಸಾಗಿದರೆ ಮುಳ್ಳಯ್ಯನ ಗಿರಿ ಬುಡಕ್ಕೆ ಸಾಗಬಹುದು. ಅಲ್ಲಿಂದ ಮುಂದೆ ಕಾಲು ನಡಿಗೆಯಲ್ಲಿ ಸಾಗಬೇಕಾಗುತ್ತದೆ. ಬೆಟ್ಟದ ಬುಡದಿಂದ ಕಾರು ಅಥವಾ ಬೈಕು ಬೆಟ್ಟತದ ತುದಿಯವರೆಗೂ ಹೋಗಲು ಸಾಧ್ಯ. ಬಸ್, ಮಿನಿ ಬಸ್ ಗಳನ್ನು ಬೆಟ್ಟದ ಬುಡದಲ್ಲೇ ನಿಲ್ಲಿಸಿ ಮುಂದೆ ಚಾರಣದ ಮೂಲಕ ಹೋಗಬೇಕಾಗುತ್ತದೆ.
ಮುಳ್ಳಯ್ಯನ ಗಿರಿ ಬೆಟ್ಟವು ಹುಬ್ಬಳ್ಳಿ ಧಾರವಾಡದಿಂದ 317 ಕಿಲೋಮಿಟರ್ ದೂರದಲ್ಲಿದ್ದರೆ ಮಧ್ಯ ಕರ್ನಾಟಕದ ರಾಜಧಾನಿ ದಾವಣಗೆರೆಯಿಂದ 175 ಕಿಲೋಮೀಟರ್ ದೂರದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 264 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಬಸ್ ಸೇವೆಗಳು ಇವೆ. ಅಷ್ಟೇ ಅಲ್ಲದೆ ಚಿಕ್ಕಮಂಗಳೂರಿನಿಂದ ಬಾಡಿಗೆ ಟ್ಯಾಕ್ಸಿ ಕೂಡಾ ಸಿಗುತ್ತದೆ. ಇನ್ನಿ ತಂಗಲು ಮುಳ್ಳಯ್ಯನ ಗಿರಿಯ ಸುತ್ತ ಮುತ್ತ ಸಾಕಷ್ಟು ಹೊಂ ಸ್ಟೇ ಗಳು ರೆಸಾರ್ಟ್ ಗಳು ಹಾಗೂ ಹೋಟೆಲ್ಗಳು ಸಿಗುತ್ತವೆ. ಅಂಥದ್ದರಲ್ಲಿ ಕಾಫಿಯ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಚಿಕ್ಕಮಂಗಳೂರು ಭೂಲೋಕದಲ್ಲಿ ಪ್ರವಾಸಿಗರ ಸ್ವರ್ಗ ಎಂದೇ ಹೆಸರುವಾಸಿ ಆಗಿದೆ. ಇಲ್ಲಿಗೆ ಭೇಟಿ ನೀಡಿದರೆ ಅದರ ಅನುಭವವೇ ಬೇರೆ. ಇಲ್ಲಿ ಸಾಕಷ್ಟು ಪ್ರವಾಸಿಗರು, ಚಾರಣಿಕರು ಭೇಟಿ ನೀಡಿತ್ತಲೇ ಇರುವುದರಿಂದ ಚಿಕ್ಕಮಂಗಳೂರು ರಸ್ತೆ ಸದಾ ವಾಹನಗಳಿಂದಲೇ ತುಂಬಿರುತ್ತದೆ.
ಇಲ್ಲಿನ ಶಿಖರಗಳನ್ನು ಹತ್ತುವಾಗ ಸಿಗುವ ಸಂತೋಷ ಬೇರೆಲ್ಲೂ ಸಿಗದು. ಮುಳ್ಳಯ್ಯನ ಗಿರಿ ಅನ್ನುವ ಹೆಸರೇ ಸಾಮಾನ್ಯವಾಗಿ ಜನರನ್ನು ಆಕರ್ಷಿಸುತ್ತದೆ. ಕಾರು ಹಾಗೂ ಬೈಕ್ ಮಾತ್ರ ಚಲಿಸಬಹುದಾದ ಕಿರಿದಾದ ಮಾರ್ಗದಲ್ಲಿ ಸಂಚರಿಸುವಾಗ ನಾವೆಲ್ಲೋ ಹಿಮಾಲಯದ ತಪ್ಪಲಿನಲ್ಲಿ ಇದ್ದೇವೆ ಅನ್ನುವ ಅನುಭವ ನಮಗೆ ಸಿಗುತ್ತದೆ. ಜೊತೆಗೆ ಜೀವದ ಭಯವೂ ಕಾಡುತ್ತದೆ. ಒಂದು ಬದಿಯಲ್ಲಿ ಬೆಟ್ಟದ ಧರೆ ಆದರೆ ಇನ್ನೊಂದು ಬದಿಯಲ್ಲಿ ನೂರಾರು ಅಡಿಯಲ್ಲಿ ಆಲವಿರುವ ಕಂದಕಗಳು ಹಾಗೂ ಅಪಾಯಕಾರಿ ತಿರುವಿನಿಂದ ಕೂಡಿದ ರಸ್ತೆಗಳು ನಮ್ಮ ತಾಳ್ಮೆಯನ್ನು ನಮ್ಮ ಸಹನೆಯನ್ನು ಪರೀಕ್ಷಿಸುತ್ತವೆ.
ಚಾರಣಿಕರಿಗೆ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಸೂಕ್ತವಾದ ಸಮಯ ಆಗಿದೆ. ಮುಳ್ಳಯ್ಯನ ಗಿರಿ ತಲುಪುವ ಮೊದಲು ಸಿಗುವ ಸ್ಥಳ ಸೀತಾಳಯ್ಯನ ಗಿರಿ ಈ ಸ್ಥಳದಲ್ಲಿ ಸೀತಾಳಯ್ಯ ತಪಸ್ಸು ಮಾಡಲು ಕುಳಿತಿದ್ದರಿಂದ ಸೀತಾಳಯ್ಯನ ಗಿರಿ ಎಂದು ಪ್ರಸಿದ್ಧವಾಗಿದೆ. ಇಲ್ಲಿ ಈಶ್ವರನ ದೇವಾಲಯವೂ ಇದೆ. ಇಲ್ಲಿಂದ ಪೂರ್ವದ ಕಡೆಗೆ ನೋಡಿದರೆ ಎರಡು ಕಿಲೋಮೀಟರ್ ಅಂತರದಲ್ಲಿ ಕರ್ನಾಟಕದ ಅತೀ ಎತ್ತರದ ಶಿಖರ ಎಂದೇ ಹೆಸರು ಪಡೆದಿರುವ ಮುಳ್ಳಯ್ಯನ ಗಿರಿ ಶಿಖರ ನಿಮಗೆ ಕಾಣಿಸುತ್ತದೆ. ಇದನ್ನು ನಾವು ಸೌಂದರ್ಯದ ಕಳಶ ಅಥವಾ ಕರ್ನಾಟಕದ ಕಳಶ ಎಂದೇ ಕರೆಯಬಹುದು. ಇಲ್ಲಿ ಬೆಟ್ಟದ ಅರ್ಧ ಭಾಗದವರೆಗೆ ವಾಹನಗಳ ಸಂಚಾರವಿದ್ದು ನಂತರ 300 ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ನಡೆದೇ ಸಾಗಬೇಕಾಗುತ್ತದೆ.
ಇದರಲ್ಲಿ ಸಿಗುವ ಎಯೋಚಕ ಅನುಭವ ಮಾತಿನಲ್ಲಿ ವರ್ಣಿಸುವುದು ಅಸಾಧ್ಯ. ಮೆಟ್ಟಿಲುಗಳನ್ನು ಏರುತ್ತಾ ಇದ್ದಂತೆ ಅಲ್ಲಿ ಬೀಸುವ ಗಾಳಿಯನ್ನು ಸೇಳಿಕೊಂಡು ಮುನ್ನುಗ್ಗುವ ಅನುಭವವೇ ಬೇರೆ. ಭಯದ ಜೊತೆಗೆ ಬೆಟ್ಟದ ತುದಿಯನ್ನು ತಲುಪಬೇಕು ಎನ್ನುವ ಛಲ ಇವುಗಳನ್ನೆಲ್ಲ ದಾಟಿ ಬೆಟ್ಟದ ತುದಿ ತಲುಪಿದಾಗ ಸಿಗುವುದೇ ಶ್ರೀ ಗುರು ಮುಳ್ಳಪ್ಪ ಸ್ವಾಮಿ ತಪಸ್ಸು ಮಾಡಿರುವ ಗದ್ದುಗೆ ಹಾಗೂ ದೇವಾಲಯ. ಕರ್ನಾಟಕದ ಕಲಶವಾಗಿರುವ ಈ ಗಿರಿಯ ತುದಿಯನ್ನು ತಲುಪಿದಾಗ ಜೀವನ ಸಾರ್ಥಕ ಎನಿಸುತ್ತದೆ. ಒಂದುವೇಳೆ ಚಿಕ್ಕಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಹಿದಾಗ ಒಂದು ಬಾರಿ ಈ ಮುಳ್ಳಯ್ಯನ ಗಿರಿಗೆ ಭೇಟಿ ಕರ್ನಾಟಕದ ತುತ್ತ ತುದಿಯನ್ನು ನೋಡಿಬನ್ನಿ.
