Paralysis Stroke about Health information: ಜ್ವರ ನೆಗಡಿ ಹಾಗೆಯೇ ಇನ್ನಿತರ ಸಣ್ಣ ಪುಟ್ಟ ಖಾಯಿಲೆಗಳು ಬಂದು ಹೋದ ಹಾಗೆ ಸ್ಟ್ರೋಕ್ (Stroke) ಒಂದು ಸಣ್ಣ ಖಾಯಿಲೆ ಅಲ್ಲ ಬದಲಾಗಿ ಮನುಷ್ಯ ನ ಜೀವವನ್ನೆ ತೆಗೆದುಕೊಳ್ಳುವಷ್ಟು ಅಪಾಯಕಾರಿಯಾಗಿದೆ ಮೆದುಳಿಗೆ (Maind) ಪೂರೈಕೆಯಾಗುವ ರಕ್ತ ಸಂಚಾರದಲ್ಲಿ ತೊಂದರೆ ಉಂಟಾಗಿ ಈ ಖಾಯಿಲೆ ಸಂಭವಿಸುತ್ತದೆ ಹಾಗೆಯೇ ಇದೊಂದು ಗಂಭೀರ ಸಮಸ್ಯೆಯಾಗಿದೆ ಹಾಗೆಯೇ ಜೀವ ಮತ್ತು ಸಮಯದ ನಡುವಿನ ಹೋರಾಟವಾಗಿದೆ
ಕೆಲವರು ಪಾರ್ಶ್ವವಾಯುವನ್ನು ಸ್ಟ್ರೋಕ್ (Paralysis Stroke) ಎಂದು ತಿಳಿದುಕೊಳ್ಳುತ್ತಾರೆ ಆದರೆ ಸ್ಟ್ರೋಕ್ ಒಂದು ಮೆದುಳಿಗೆ ಸಂಭಂದಿಸಿದ್ದು ಹಾಗೆಯೇ ಪಾರ್ಶ್ವವಾಯು ದೇಹದ ಒಂದು ಭಾಗಕ್ಕೆ ಬರುವಂತದ್ದು ಸ್ಟ್ರೋಕ್ ಅಲ್ಲಿ ಮೂರು ವಿಧ ಅವು ಇಸ್ಕೆಮಿಕ್ ಸ್ಟ್ರೋಕ್ ಮತ್ತು ಹೆಮರಾಜಿಕ್ ಸ್ಟ್ರೋಕ್ ಹಾಗೂ ಮಿನಿ ಸ್ಟ್ರೋಕ್ ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಅನಾರೋಗ್ಯಕರ ಆಹಾರ ಅಧಿಕ ರಕ್ತದ ಒತ್ತಡ ದಿಂದ ಸಹ ಸ್ಟ್ರೋಕ್ ಕಂಡು ಬರುತ್ತದೆ
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹಾಗೂ ಮಧ್ಯಮ ತೂಕ ಹೊಂದಿರುವುದರಿಂದ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಈ ಸ್ಟ್ರೋಕ್ ಸಮಸ್ಯೆಯಿಂದ ದೂರ ಇರಬಹುದು ನಾವು ಈ ಲೇಖನದ ಮೂಲಕ ಸ್ಟ್ರೋಕ್ ಸಮಸ್ಯೆ ಹಾಗೂ ಲಕ್ಷಣ ಹಾಗೂ ನಿಯಂತ್ರಣ ಮಾಡಿಕೊಳ್ಳುವ ಕ್ರಮದ ಬಗ್ಗೆ ತಿಳಿದುಕೊಳ್ಳೋಣ.
ಪ್ರತಿ 40 ಸೆಕೆಂಡ್ ಗೆ ಒಂದು ಸ್ಟ್ರೋಕ್ ಕೇಸ್ ಭಾರತದಲ್ಲಿ ಕಂಡು ಬರುತ್ತಿದೆ ಸ್ಟ್ರೋಕ್ ನಿಂದ ಪ್ರತಿ ನಾಲ್ಕು ನಿಮಿಷಕ್ಕೆ ಸಾವು ಕಂಡು ಬರುತ್ತಿದೆ ಸ್ಟ್ರೋಕ್ ಅನ್ನು ಮೆದುಳಿನ attack ಎಂದು ಸಹ ಕರೆಯುತ್ತಾರೆ ಮೆದುಳಿಗೆ ಪೂರೈಕೆಯಾಗುವ ರಕ್ತ ಸಂಚಾರದಲ್ಲಿ ತೊಂದರೆ ಉಂಟಾಗಿ stroke ಸಂಭವಿಸುತ್ತದೆ ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಅಥವಾ ಮೆದುಳಿನಲ್ಲಿ ರಕ್ತ ನಾಳಗಳು ಒಡೆದಾಗ ಮೆದುಳಿನ attack ಸಂಭವಿಸುತ್ತದೆ ಈ ಸಮಯದಲ್ಲಿ ಮೆದುಳು ಕೆಲಸ ಮಾಡುವುದನ್ನು ಸಹ ನಿಲ್ಲಿಸಬಹುದಾಗಿದೆ
ನಮ್ಮ ಇಡೀ ದೇಹವನ್ನು ಮೆದುಳು ನಿಯಂತ್ರಣ ಮಾಡುತ್ತದೆ ಹೀಗಾಗಿ ಸರಿಯಾಗಿ ಕೆಲಸ ಮಾಡಲು ಆಕ್ಸಿಜನ್ ಬೇಕಾಗುತ್ತದೆ ಪೂರೈಕೆಯಲ್ಲಿ ಕೊರತೆ ಉಂಟಾದಾಗ ಮೆದುಳು ಸೆಲ್ ಗಳು ಸಾಯುವುದಕ್ಕೆ ಆರಂಭ ಮಾಡುತ್ತದೆ .ಸರಿಯಾಗಿ ರಕ್ತ ಪೂರೈಕೆ ಆಗದೆ ಇದ್ದಾಗ ಆಕ್ಸಿಜನ್ ಇರುವುದು ಇಲ್ಲ ಸ್ಟ್ರೋಕ್ ಆಗುವುದು ಮೆದುಳಿಗೆ ಹಾಗೆಯೇ ಇದರಿಂದ ದೇಹದ ಅನೇಕ ಭಾಗಗಳಿಗೆ ಸಮಸ್ಯೆ ಕಂಡು ಬರುತ್ತದೆ ಕೈ ಕಾಲು ಸ್ವಾಧೀನ ಕಳೆದುಕೊಳ್ಳುತ್ತದೆ ಕಣ್ಣಿನ ದೃಷ್ಟಿ ಹೋಗುವ ಸಾಧ್ಯತೆ ಇರುತ್ತದೆ ಮಾತಾಡಲು ಸಹ ಕಷ್ಟಕರವಾಗಿ ಇರುತ್ತದೆ ಹೀಗೆ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ.
ಪಾರ್ಶ್ವವಾಯು ದೇಹದ ಒಂದು ಭಾಗದಲ್ಲಿ ಆಗುತ್ತದೆ ಸ್ಟ್ರೋಕ್ ನ ಲಕ್ಷಣದಲ್ಲಿ ಒಂದಾಗಿದೆ ಸ್ಟ್ರೋಕ್ ಅಲ್ಲಿ ಮೂರು ವಿಧಗಳು ಇರುತ್ತದೆ ಇಸ್ಕೆಮಿಕ್ ಸ್ಟ್ರೋಕ್ ಮತ್ತು ಹೆಮರಾಜಿಕ್ ಸ್ಟ್ರೋಕ್ ಹಾಗೂ ಮಿನಿ ಸ್ಟ್ರೋಕ್ ಸುಗಮ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ರಕ್ತ block ಆಗುತ್ತದೆ ಆ ಸಮಯದಲ್ಲಿ ಆಕ್ಸಿಜನ್ ಪೂರೈಕೆ ಆಗದೆ ಇದ್ದಾಗ ಸಮಸ್ಯೆ ಕಂಡು ಬರುತ್ತದೆ ಇನ್ನೊಂದು ವಿಧವೆಂದರೆ ಮೆದುಳಿಗೆ ಪೂರೈಕೆಯಾಗುವ ರಕ್ತ ರಕ್ತನಾಳಗಳ ಮೂಲಕ ಪೂರೈಕೆ ಆಗುತ್ತದೆ
ಅಮೆರಿಕದ ಸಂಶೋಧನೆಯ ಪ್ರಕಾರ ಮೂರನೆಯ ವಿಧವೆಂದರೆ ಮಿನಿ ಸ್ಟ್ರೋಕ್ ಇದರಲ್ಲಿ ಮೆದುಳಿನಲ್ಲಿ ರಕ್ತ block ಆಗುತ್ತದೆ. ಸಾಮಾನ್ಯವಾಗಿ ಐದು ನಿಮಿಷ block ಆಗುತ್ತದೆ ಅದಾದ ನಂತರ ಸರಿಯಾಗಿ ರಕ್ತ ಪೂರೈಕೆ ಮಾಡುತ್ತದೆ ಇದು ಮುಂದೆ ಆಗುವ ಸ್ಟ್ರೋಕ್ ಗೆ ಸಿಗ್ನಲ್ ಆಗಿದೆ ಇನ್ನೊಂದು ಸ್ಟ್ರೋಕ್ ಅಂದರೆ ಸೈಲೆಂಟ್ ಸ್ಟ್ರೋಕ್ ಇದನ್ನು ಪರೀಕ್ಷೆ ಮಾಡಿದಾಗ ಮಾತ್ರ ಕಾಣಿಸಿಕೊಳ್ಳುತ್ತದೆ
ಇದು ಯಾವುದೇ ಪರಿಣಾಮವನ್ನು ತಂದು ಕೊಡುವುದು ಇಲ್ಲ ಸ್ಟ್ರೋಕ್ ನ ಲಕ್ಷಣಗಳು ಯಾವುದೆಂದರೆ ಮೊದಲಿಗೆ ಕೈ ಕಾಲಿಗೆ ಜೋಮು ಹಿಡಿಯುತ್ತದೆ ಹಾಗೆಯೇ ಮಾತನಾಡಲು ಕಷ್ಟ ಹಾಗೂ ಮಾತನಾಡಲು ಕಷ್ಟ ಆಗುತ್ತದೆ ಸಡನ್ ಆಗಿ ಗೊಂದಲ ಆಗುತ್ತದೆ ಯಾವುದೇ ಕಾರಣ ಇಲ್ಲದೆ ತಲೆ ನೋಯುತ್ತದೆ ಕಣ್ಣುಗಳಲ್ಲಿ ಸಮಸ್ಯೆ ಕಂಡು ಬರುತ್ತದೆ ತಲೆ ತಿರುಗುತ್ತದೆ ನಡೆಯೋಕೆ ತೊಂದರೆ ಆಗುತ್ತದೆ ದೇಹವನ್ನು ಬ್ಯಾಲೆನ್ಸ್ ಮಾಡಲು ಆಗುವುದು ಇಲ್ಲ .
ಸ್ಟ್ರೋಕ್ ಒಂದು ಗಂಭೀರ ಸಮಸ್ಯೆಯಾಗಿದೆ ಜೀವ ಮತ್ತು ಸಮಯದ ನಡುವಿನ ಹೋರಾಟವಾಗಿದೆ ಸ್ಟ್ರೋಕ್ ಆದ ಮೊದಲ ಮೂರು ಗಂಟೆ ಗೋಲ್ಡನ್ ಟೈಂ ಎಂದು ಕರೆಯುತ್ತಾರೆ ಸ್ಟ್ರೋಕ್ ಆಗಿದೆಯೇ ಇಲ್ಲ ಎಂದು ತಿಳಿಯಲು ನಗಲು ಹೇಳಬೇಕು ಆದ ಮುಖದ ಭಾಗ ಸರಿಯಾಗಿ ಇದೆಯಾ ಎಂದು ನೋಡುತ್ತಾರೆ ಹಾಗೆಯೇ ಎರಡು ಕೈ ಗಳನ್ನು ಮೇಲೆ ಎತ್ತಲು ಹೇಳುತ್ತಾರೆ ಮಾತನಾಡುವಾಗ ವ್ಯಕ್ತಿಯನ್ನು ಕೇಳಬೇಕು ಸರಿಯಾಗಿ ಉಚ್ಚಾರ ಮಾಡುತ್ತಾನೆಯೆ ಇಲ್ಲ ಎಂದು ನೋಡಬೇಕು ಇವೆಲ್ಲ ಲಕ್ಷಣವನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು
ನಮ್ಮ ಜೀವನ ಶೈಲಿ ಹಾಗೂ ಆಹಾರ ಶೈಲಿಯಲ್ಲಿ ಹದಗೆಟ್ಟಿದಾಗ ಹಾಗೂ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕೆಟ್ಟಿದಾಗ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ ಅತಿಯಾದ ರಕ್ತದ ಒತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಸ್ಟ್ರೋಕ್ ಗೆ ಕಾರಣ ಆಗುತ್ತದೆ. ಅನುವಂಶೀಯತೆಯ ಕೆಲವು ಕಾರಣಗಳು ಸ್ಟ್ರೋಕ್ ಗೆ ಕಾರಣ ಆಗುತ್ತದೆ ಸ್ಟ್ರೋಕ್ ಒಂದು ಸಹ ಬಂದರೆ ಮನುಷ್ಯನನ್ನು ಶಾಶ್ವತವಾಗಿ ಸಮಸ್ಯೆಗೆ ದುಡುತ್ತದೆ ಸ್ಟ್ರೋಕ್ ಬಗ್ಗೆ ಎಲ್ಲರೂ ಎಚ್ಚರ ವಹಿಸುವುದು ಅಗತ್ಯವಾಗಿದೆ ಸ್ಟ್ರೋಕ್ ನಿಂದ ತಪ್ಪಿಸಿಕೊಳ್ಳಲು ಸರಿಯಾದ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು
ತಂಬಾಕು ಸೇವನೆಯನ್ನು ಮಾಡಬಾರದು ಹೆಚ್ಚಿನ ಸಕ್ಕರೆ ಇರುವ ಪದಾರ್ಥವನ್ನು ಸೇವನೆ ಮಾಡಬಾರದು ಅಧಿಕ ಫೈಬರ್ ಇರುವ ಆಹಾರವನ್ನು ಸೇವನೆ ಮಾಡಬೇಕು ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಹೃದಯದ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಹೀಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸ್ಟ್ರೋಕ್ ಸಮಸ್ಯೆಯಿಂದ ದೂರ ಇರಬಹುದು.
ಇದನ್ನೂ ಓದಿ..ಆಯುರ್ವೇದ ಪ್ರಕಾರ ಹೊಕ್ಕಳಿಗೆ ಯಾವ ಎಣ್ಣೆ ಲಾಭ ಗೊತ್ತಾ ಇಲ್ಲಿದೆ ನೋಡಿ