Temple story: ನಮ್ಮ ದೇಶದಲ್ಲಿ ಹತ್ತಾರು ಬಗೆಯ ದೇವಸ್ಥಾನಗಳಿವೆ ಪ್ರತಿ (Temple) ದೇವಾಲಗಳು ಕೂಡ ತನ್ನದೆಯಾದ ವಿಶಿಷ್ಟತೆ ಹೊಂದಿದೆ ಅದೇ, ನಿಟ್ಟಿನಲ್ಲಿ ಕನ್ಯಾ ರಾಶಿಯವರು ಈ (Temple) ದೇವಸ್ಥಾನಕ್ಕೆ ಹೋದ್ರೆ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತೆ ಅನ್ನೋದನ್ನ ಕುರಿತು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿಕನ್ಯಾರಾಶಿಯು ಸ್ತ್ರೀ ಲಿಂಗಕ್ಕೆ ಸೇರಿದ ರಾಶಿಯಾಗಿದ್ದು, ಈ ರಾಶಿಯಲ್ಲಿ ಜನಿಸಿದವರು ಬಹಳ ಭಾಗ್ಯಶಾಲಿಗಳಾಗುತ್ತಾರೆ.
ಕನ್ಯಾರಾಶಿಗೆ (Virgo) ಬುಧನು ಅಧಿಪತಿಯಾಗಿದ್ದಾನೆ ಹಾಗೂ ಬ್ರಹಸ್ಪತಿ ಗ್ರಹವು ಯೋಗವನ್ನು ತರುವಂತದ್ದಾಗಿದೆ. ಈ ರಾಶಿಯವರು ಬಹಳ ರೂಪವಂತರು ಹಾಗೂ ಗುಣವಂತರಾಗಿರುತ್ತಾರೆ. ಕನ್ಯಾರಾಶಿಯಲ್ಲಿ ಜನಿಸಿದಂತ ವ್ಯಕ್ತಿಯು ಬಹಳ ಗಟ್ಟಿ ಮನಸ್ಸನ್ನು ಹೊಂದಿದವರಾಗಿದ್ದು, ನೇರಾನೇರ ಮಾತಿನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರಿಗೆ ಮನದೊಳಗೆ ಒಂದು ಮಾತು, ಎದುರು ಇನ್ನೊಂದು ಮಾತು ಆಡಲು ಬರುವುದಿಲ್ಲ. ಇವರದು ಸ್ಪಷ್ಟ ಹಾಗೂ ಶುಭ್ರ ವ್ಯಕ್ತಿತ್ವವಾಗಿರುತ್ತದೆ.
ಇಂತಹ ಕನ್ಯಾರಾಶಿಯಲ್ಲಿ ಜನಿಸಿದವರ ಭವಿಷ್ಯವು 2023ರ ಶೋಭಾಕೃತ ಸಂವತ್ಸರದಲ್ಲಿ ಹೇಗಿರಲಿದೆ ಎಂದು ತಿಳಿಯೋಣ. ಮಾರ್ಚ್ 22ರಿಂದ ಹೊಸ ಸಂವತ್ಸರವಾದ ಶೋಭಾಕೃತ ಸಂವತ್ಸರದ ಆರಂಭವಾಗಲಿದ್ದು, ಈ ಸಂವತ್ಸದಲ್ಲಿ ಕನ್ಯಾರಾಶಿಯವರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಗಾಯವೊಂದು ಆಗಲು ಕ್ಷಣ ಸಾಕು. ಆದರೆ ಆ ಗಾಯವನ್ನು ಗುಣ ಪಡಿಸಿಕೊಳ್ಳಲು ವರ್ಷಗಟ್ಟಲೆ ಬೇಕಾಗುತ್ತದೆ. ಅಂತೆಯೇ ಈ ಹಿಂದೆ ಕನ್ಯಾರಾಶಿಯವರು ಅನುಭವಿಸಿದ ನೋವುಗಳಿಗು ನೆಮ್ಮದಿ ಸಿಗಲು ಕಾಲದ ಅವಶ್ಯಕತೆ ಇದೆ.
ಎರಡನೇ ಮನೆಯಲ್ಲಿ ಕೇತುಗ್ರಹ ಇರುವುದರಿಂದ ಸ್ವಲ್ಪ ಮಟ್ಟಿಗೆ ಸಾಲಬಾಧೆ ನಿಮ್ಮನ್ನು ಆವರಿಸಲಿದೆ. ಏಪ್ರಿಲ್22 ರ ನಂತರ ಗುರುವು ಅಷ್ಟಮ ಸ್ಥಾನಕ್ಕೆ ಬರುತ್ತಾನೆ. ಅಂದಿನಿಂದ ನೀವು ಕೆಲ ಕಾಲ ಕಷ್ಟದ ದಿನಗಳನ್ನು ಕಾಣಲಿದ್ದಿರಿ. ನಿಶ್ಚಯಿಸಿದ ಮದುವೆ ಕಾರ್ಯಗಳು ನಿಂತು ಹೋಗಿ ಅವಮಾನ ಅನುಭವಿಸುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿವೆ. ಹೊಸ ಹೊಸ ಕೆಲಸಗಳಲ್ಲಿ ತೊಡಗಿಕೊಳ್ಳುವ ಯೋಚನೆಯಿಂದಾಗಿ ಕೈಯ್ಯಲ್ಲಿರುವ ಹಣವೆಲ್ಲ ಖಾಲಿ ಮಾಡಿಕೊಳ್ಳುತ್ತಿರಿ, ಹಾಗಾಗಿ ಸದ್ಯ ಯಾವುದೇ ಹೊಸ ಯೋಜನೆಯಲ್ಲಿ ತೊಡಗಬೇಡಿ.
ಇದನ್ನೂ ಓದಿ..Sri Krishna: ಹಸುವಿನ ಆ ಅಂಗ ಮುಟ್ಟಿದರೆ ದಾರಿದ್ರ್ಯತೆ ನಿವಾರಣೆ ಆಗುತ್ತೆ, ಬಡತನ ಇರೋದಿಲ್ಲ ಶ್ರೀ ಕೃಷ್ಣಾ ಹೇಳಿದ ಮಾತು
ಶನಿಯು ಆರನೇ ಮನೆಯಲ್ಲಿ ಉಚ್ಛ ಸ್ಥಾನದಲ್ಲಿ ಇರುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಈ ವರ್ಷದಲ್ಲಿ ವಾಸಿಯಾಗುತ್ತವೆ. ಆದರೆ ಇದಕ್ಕಾಗಿ ನೀವು ಬಹಳ ಹಣವನ್ನು ವ್ಯಯಿಸಬೇಕಾಗಿ ಬರುವುದರಿಂದ, ಬೇರೆ ಚಿಂತೆಗಳಿಂದ ಹೊಸ ಖಾಯಿಲೆಗೆ ತುತ್ತಾಗುವ ಸಂಭವವಿದ್ದು ಆದಷ್ಟು ಆರೋಗ್ಯ ರಕ್ಷಣೆ ಮಾಡಿಕೊಳ್ಳಿ. ಮಾನಸಿಕ ಚಿಂತೆಗಳಿಗೆ ಅವಕಾಶ ನೀಡಬೇಡಿ. ಈ ಸಮಯ ಕಳೆದು ಹೋಗುತ್ತದೆ ಚಿಂತೆ ಬೇಡ. ವೈವಾಹಿಕ ಜೀವನವನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಿ. ಆದಷ್ಟು ಹೊರಗಿನ ಸಂಬಂಧಗಳಿಗೆ ಮನಸ್ಸು ಜಾರದಂತೆ ನೋಡಿಕೊಳ್ಳಿ
ಕನ್ಯಾರಾಶಿಯಲ್ಲಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್ ತನಕ ಒಳ್ಳೆಯ ಸಮಯವಿದೆ. ಇಲ್ಲಿಯವರೆಗೆ ನೀವು ಚೆನ್ನಾಗಿ ಓದಿರುವುದರಿಂದ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿರಿ. ಆದರೆ ಏಪ್ರಿಲ್ ನಂತರ ನಡೆಯುವ ಪರೀಕ್ಷೆಗಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯವಿದ್ದು, ಓದಿನಲ್ಲಿ ಏಕಾಗ್ರತೆ ಹೆಚ್ಚಾಗಿ ಬೇಕಾಗಿದೆ. ಸ್ನಾತಕೋತ್ತರ ಪದವಿಯನ್ನು ಪಡೆಯುವ ನಿಟ್ಟಿನಲ್ಲಿ ಬಹಳ ಶ್ರಮ ಪಡಬೇಕಾಗಿ ಬರುತ್ತದೆ. ಶೋಭಾಕೃತ ಸಂವತ್ಸರದ ಆರು ತಿಂಗಳ ನಂತರ ನಿಮಗೆ ವಿದೇಶ ಪ್ರವಾಸ ಹಾಗೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಯೋಗವು ಕೂಡಿಬರಲಿದೆ.
ಇದನ್ನೂ ಓದಿ..Virgo Horoscope: ಕನ್ಯಾ ರಾಶಿಯವರು ಯಾವ ರಾಶಿಯವರೊಂದಿಗೆ ಚನ್ನಾಗಿ ಹೊಂದಾಣಿಕೆ ಆಗ್ತಾರೆ ಗೊತ್ತಾ..
ಶನಿ ಪಂಚಮದಲ್ಲಿ ಇರುವುದರಿಂದ ಶತೃನಾಶದ ಯೋಗವಿದೆ. ನಿಮಗೆ ಯಾರಿಂದ ಎಂತಹುದೆ ಅವಮಾನಗಳಾದರೂ ಸಹ, ಶನಿ ಉಚ್ಛ ಸ್ಥಾನದಲ್ಲಿ ಇರುವುದರಿಂದ ಆದಷ್ಟು ಬೇಗ ಸಮಸ್ಯೆಗಳ ಪರಿಹಾರವಾಗುತ್ತದೆ. ಶನಿಯ ಬಲದಿಂದ ಕೆಲವೊಂದು ಕೆಲಸಗಳು ಕೈಗೂಡಲಿವೆ. ಗುರುವಿನ ಆರಾಧನೆ ಬಹು ಮುಖ್ಯವಾಗಿ ಕನ್ಯಾರಾಶಿಯವರಿಗೆ ಬೇಕಾಗಿದೆ. ಇದರ ಜೊತೆಗೆ ಅಮ್ಮನವರ ಆರಾಧನೆಯನ್ನು ಬಹುಮುಖ್ಯವಾಗಿ ಮಾಡಲೇಬೇಕು. ಯಾವುದೇ ಅಮ್ಮನವರ ಕ್ಷೇತ್ರಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದು ಉತ್ತಮ. ಇಲ್ಲವಾದಲ್ಲಿ ಮನೆಯಲ್ಲಿಯೇ ದುರ್ಗಾಹವನವನ್ನು ಮಾಡಿಸಿಕೊಳ್ಳಿ. ಶುಭವಾಗುತ್ತದೆ.