Sri Krishna: ಹಿಂದೂ ಧರ್ಮದಲ್ಲಿ (Hinduism) ಗೋವುಗಳನ್ನು ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿದೆ. ಗೋಮಾತೆಯನ್ನು (cow) ದೇವತೆ ಎಂದು ಪೂಜಿಸುತ್ತಾರೆ. ಹಿಂದೂ ಧರ್ಮದಲ್ಲಿ ಹಸುವಿಗೆ ತಾಯಿಯ ಸ್ಥಾನ ನೀಡಿ ಗೌರವಿಸುತ್ತಾರೆ. ಅದಕ್ಕಾಗಿಯೇ ಜನರು ಇದನ್ನು ‘ಗೌ ಮಾತಾ’ ಎಂದು ಕರೆಯುತ್ತಾರೆ‌, ಗೋವಿನ ಆರಾಧನೆ (Cow worship) ಹಾಗೂ ಪಾಲನೆ ಪೋಷಣೆ ಮಾಡುವುದರಿಂದ ನಿಮಗೆ ಒಳ್ಳೆಯ ಫಲ ದೊರಕುತ್ತದೆ.

ಯಾರ ಮನೆಯಲ್ಲಿ ಹಸು ಇರುತ್ತದೆಯೋ ಅವರ ಮನೆಯಲ್ಲಿ ಇರುವಂತಹ ಎಲ್ಲಾ ವಾಸ್ತುದೋಷಗಳು ನಿವಾರಣೆಯಾಗುತ್ತದೆ. ಒಂದು ಹಸುವಿನಲ್ಲಿ 36 ಕೋಟಿ ದೇವಾನ್ ದೇವತೆಗಳು ವಾಸವಾಗಿದ್ದು ಅದಕ್ಕೆ ಅದನ್ನು ಶ್ರೇಷ್ಠ ಪ್ರಾಣಿ ಎನ್ನುತ್ತಾರೆ ಮತ್ತು ಇದನ್ನು ಮಾತೇ ಎಂದು ಪೂಜಿಸುತ್ತಾರೆ. ಹಸುವಿನ ಪೂಜೆ ಮಾಡುವುದರಿಂದ ಎಲ್ಲಾ ದೇವಾನುದೇವತೆಗಳ ಆರಾಧನೆ ಮಾಡಿದ ಹಾಗೆ. ಗೋಮಾತೆಯನ್ನು ಪೂಜಿಸುವುದರಿಂದ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ.

ಗೋದೂಳಿ ಸಮಯದಲ್ಲಿ ಹಸು ಮನೆಗೆ ಬರುವಾಗ ಅದರ ದೂಳು ತಾಗಿದರೆ ಮನುಷ್ಯನ ಪಾಪಕರ್ಮಗಳು ನಿವಾರಣೆ ಆಗುತ್ತದೆ. ಯಾವುದಾದರು ಕಾರ್ಯಕ್ರಮ ನಿಂತು ಹೋದರೆ ಅಥವಾ ತೊಂದರೆ ಉಂಟಾಗುತ್ತಿದ್ದರೆ ಹಸುವಿಗೆ ರೊಟ್ಟಿಯನ್ನು ತಿನ್ನಿಸುವುದರಿಂದ ಕಾರ್ಯ ಯಶಸ್ವಿಯಾಗುತ್ತದೆ ಮತ್ತು ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಬೇಸಿಗೆ ಕಾಲದಲ್ಲಿ ಮನೆಯ ದ್ವಾರದ ಮುಂಭಾಗದಲ್ಲಿ ನೀರು ಕೊಡುವುದರಿಂದ ರೋಗಗಳು ಬರುವುದನ್ನು ತಡೆಗಟ್ಟುತ್ತದೆ.

ಹಸುವನ್ನು ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿ ಒಲಿಯುತ್ತಾಳೆ ಮತ್ತು ಧನ, ಸಂಪತ್ತು ಅಭಿವೃದ್ಧಿಗೊಳ್ಳುತ್ತದೆ. ನಮ್ಮ ಆಸೆ ಆಕಾಂಕ್ಷೆಗಳನ್ನ ಗೋವಿನ ಕಿವಿಯಲ್ಲಿ ಹೇಳಿದಾಗ ಅದು ಈಡೇರುತ್ತದೆ ಎಂದು ಪೂರ್ವಜರು ಹೇಳುತ್ತಾರೆ. ಹಸುವನ್ನು ಕಾಮಧೇನು, ಗೋಮಾತೆ ಮತ್ತು ಗಾಯತ್ರಿ ಎಂದು ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ತುಂಬಾ ಗೌರವವಿಸುವ ಮತ್ತು ಆರಾಧಿಸುವ ಪ್ರಾಣಿ ಎಂದರೆ ಅದು “ಗೋವು”.

ಹಸುವಿನ ಹಾಲನ್ನು ಅಮೃತಕ್ಕೆ ಹೋಲಿಸುತ್ತಾರೆ. ಹಸುವಿನ ಹಾಲಿನಲ್ಲಿ ತುಂಬಾ ಪೌಷ್ಟಿಕಾಂಶವಿರುತ್ತದೆ ಪ್ರತಿಯೊಬ್ಬರು ಹಸುವಿನ ಹಾಲನ್ನು ಬಳಸುತ್ತಾರೆ ಹಾಗೂ ದೇವರಿಗೂ ಅರ್ಪಿಸುತ್ತಾರೆ. ಹಸುವಿನ ಹಾಲು ತುಂಬಾ ಶ್ರೇಷ್ಠವಾದದ್ದು . ಹಸುವನ್ನು ಬಡ ಬ್ರಾಹ್ಮಣರಿಗೆ ಅಥವಾ ಬಡವರ್ಗದವರಿಗೆ ದಾನ ಮಾಡುವುದು ಬಹಳ ಒಳ್ಳೆಯ ಕೆಲಸ. ನವಗ್ರಹ ಹಾಗೂ ಶನಿ ದೇವರನ್ನು ಶಾಂತಗೊಳಿಸುವುದಾದರೆ ಕಪ್ಪು ಹಸುವನ್ನು ದಾನ ಮಾಡಬೇಕು.

ಹೊಸ ಮನೆ ಕಟ್ಟುವ ಮೊದಲು ಆ ಸ್ಥಳದಲ್ಲಿ ಹಸುವಿನ ಕರವನ್ನು ಕಟ್ಟುವುದರಿಂದ ವಾಸ್ತುದೋಷಗಳು ದೂರವಾಗುತ್ತದೆ. ಮನೆಯಲ್ಲಿ ಮಾಡಿದ ಮೊದಲ ತಿಂಡಿಯನ್ನು ಕೊಡುವುದರಿಂದ ಸುಖ ಶಾಂತಿ ನೆಮ್ಮದಿ ಅಭಿವೃದ್ಧಿಗೊಳ್ಳುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!