ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಹಲವು ಮನೆಮದ್ದುಗಳನ್ನು ತಿಳಿದುಕೊಳ್ಳೋವುದು ಉಪಯುಕ್ತವಾಗಿದೆ. ಹಾಗೆಯೇ ಈ ಲೇಖನದ ಮೂಲಕ ಕಣ್ಣು ಕಣ್ಣುಕುಟರೆ ಸೇರಿದಂತೆ ಕೆಲವು ಸಮಸ್ಯೆಗೆ ಮನೆಮದ್ದನ್ನು ಈ ಮೂಲಕ ತಿಳಿದುಕೊಳ್ಳೋಣ ಬನ್ನಿ ನಿಮಗೆ ಈ ಮನೆಮದ್ದು ಇಷ್ಟವಾದ್ರೆ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.
ಮೊದಲನೆಯದಾಗಿ ಕಣ್ಣುಕುಟರೆ ಸಮಸ್ಯೆಯನ್ನು ನಿವಾರಿಸಲು ಕರಬೇವು ಹೇಗೆ ಸಹಕಾರಿ ಅನ್ನೋದನ್ನ ನೋಡುವುದಾದರೆ ಕರಿಬೇವಿನ ಎಲೆಗಳೊಂದಿಗೆ ಎದೆಹಾಲನ್ನು ಸೇರಿಸಿ ಅರೆದು, ಅದನ್ನು ಕಣ್ಣುಕುಟರೆ ಬಂದಿರುವ ಸ್ಥಳದಲ್ಲಿ ಸವರಿದರೆ ಕಣ್ಣುಕುಟರೆ ವಾಸಿಯಾಗುತ್ತದೆ.
ಮತ್ತೊಂದು ಮನೆಮದ್ದು: ಚರ್ಮ ರೋಗ ನಿವಾರಣೆಗೆ ಈ ಸಸ್ಯ ಔಷಧಿಯಾಗಿ ಕೆಲಸ ಮಾಡುತ್ತದೆ ನೆಲನೆಲ್ಲಿ ಗಿಡದ ಎಲೆಗಳೊಂದಿಗೆ ಉಪ್ಪನ್ನು ಸೇರಿಸಿ ಅರೆದು ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕಜ್ಜಿ ತುರಿಕೆ ಮುಂತಾದ ಚರ್ಮ ರೋಗ ಸಮಸ್ಯೆ ನಿವಾರಣೆಯಾಗುತ್ತದೆ.
ಮೂರನೆಯ ಮನೆಮದ್ದು: ಕೆಮ್ಮು ಕಫ ನಿವಾರಣೆಗೆ ಪಗಡೆ ಹೂವು ಗಿಡದ ತೊಗಟೆಯನ್ನು ಸ್ವಲ್ಪ ತಗೆದುಕೊಂಡು ಎಲೆ ಅಡಿಕೆಯೊಂದಿಗೆ ಸೇರಿಸಿಕೊಂಡು ಮೆಲುಕು ಹಾಕಿದರೆ ಕಫ ಕರಗಿ ಕಾಪಾಡ ಕೆಮ್ಮು ಕೂಡ ನಿವಾರಣೆಯಾಗುತ್ತದೆ.