Kalyana Karnataka Road Transport Corporation: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಪ್ರೆಂಟಿಸ್ ಕಾಯ್ದೆ (Apprentice Act) 1961 ರ ಪ್ರಕಾರ ವೃತ್ತಿ ಶಿಶಿಕ್ಷು ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.
ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ಇಲಾಖೆ ಹೆಸರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹುದ್ದೆಗಳ ಹೆಸರು ಶಿಶಿಕ್ಷು ತರಬೇತಿದಾರರು
ಒಟ್ಟು ಹುದ್ದೆಗಳು 259
ಹುದ್ದೆಗಳ ವಿವರ ಇಂತಿದೆ
ಆಟೋ ಎಲೆಕ್ನಿಷಿಯನ್ – 60
ಡೀಸೆಲ್ ಮೆಕ್ಯಾನಿಕ್ – 98
ಮೆಕ್ಯಾನಿಕಲ್ ಮೋಟಾರ್ ವೆಹಿಕಲ್ – 69
ವೆಲ್ಡರ್ – 6
ಎಸ್.ಎಂ.ಡಬ್ಲ್ಯೂ – 10 ಪೇಂಟರ್ – 6 ವಿದ್ಯಾರ್ಹತೆ: ಅಭ್ಯರ್ಥಿಗಳು ಐಟಿಐ ಪಾಸ್ ಆಗಿರಬೇಕು (ಆಟೋ ಇಲೆಕ್ನಿಷಿಯನ್, ವೆಲ್ಡರ್, ಎಸ್ಎಮ್ ಡಬ್ಲ್ಯೂ, ಪೇಂಟರ್, ಆಟೋ ಎಲೆಕ್ನಿಷಿಯನ್, ಡೀಸಲ್ ಮೆಕ್ಯಾನಿಕ್, ಮೆಕ್ಯಾನಿಕಲ್ ಮೋಟರ್ ವೆಹಿಕಲ್) ವೇತನಶ್ರೇಣಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಮಾನುಸಾರವಾಗಿ ಹುದ್ದೆಗಳಿಗೆ ಅನುಗುಣವಾಗುವಂತೆ ವೇತನ ನಿಗದಿಪಡಿಸಲಾಗುತ್ತದೆ.
ಇದನ್ನೂ ಓದಿ..ಹೋಂ ಗಾರ್ಡ್ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ
ಆಯ್ಕೆ ವಿಧಾನ: ಸಂದರ್ಶನ / ಮೂಲ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು ದಿನಾಂಕ 23-03-2023 ರಂದು ಬೆಳಿಗ್ಗೆ 09-00 ಗಂಟೆಯಿಂದ ಮಧ್ಯಾಹ್ನ 03-00 ಗಂಟೆಯೊಳಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು ಸಂದರ್ಶನವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿವಿಧ ವಿಭಾಗೀಯ ಕಛೇರಿಗಳಲ್ಲಿ ನಡೆಸಲಾಗುತ್ತದೆ.
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ವಿಜಯಪುರ, ಪ್ರಾದೇಶಿಕ
ಕಾರ್ಯಾಗಾರ ಯಾದಗಿರಿ ಇಲ್ಲಿ ನಡೆಸಲಾಗುತ್ತದೆ. ಶಿಶಿಕ್ಷು ನೇಮಕಾತಿ ಬಯಸುವ ಅಭ್ಯರ್ಥಿಗಳು ಮೂಲ ದಾಖಲೆ ಹಾಗೂ ಇತರೆ ದಾಖಲೆಗಳೊಂದಿಗೆ ಸಂಬಂಧಪಟ್ಟ ವಿಭಾಗೀಯ ಕಛೇರಿಗಳಲ್ಲಿ ನಿಗಧಿತ ಸಮಯದಲ್ಲಿ ನೇರ ಸಂದರ್ಶನಕ್ಕಾಗಿ ಹಾಜರಾಗುವುದು. ಸಂದರ್ಶನಕ್ಕೆ ಹಾಜರುಪಡಿಸಬೇಕಾದ ಮೂಲ ದಾಖಲೆಗಳ ಲಿಸ್ಟ್
ಇದನ್ನೂ ಓದಿ..ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿಹಾಕಿ
SSLC ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಐಟಿಐ ಪಾಸ್ ಸರ್ಟಿಫಿಕೇಟ್
ಇತರೆ, ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 13 ಮಾರ್ಚ್2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23 ಮಾರ್ಚ್ 2023 ಆಗಿರುತ್ತದೆ ಆಸಕ್ತ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.