Ultimate magazine theme for WordPress.

Home Guard: ಹೋಂ ಗಾರ್ಡ್ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

0 35

Home Guard: ಗೃಹರಕ್ಷಕ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸಂದರ್ಶನಕ್ಕೆ ದಿನಾಂಕ ಕೂಡ ನಿಗದಿಪಡಿಸಿದ್ದಾರೆ.

ತುಮಕೂರು: ಜಿಲ್ಲೆಯ ಗೃಹರಕ್ಷಕ ದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ 182 ಸ್ವಯಂ ಸೇವಾ ಗೃಹರಕ್ಷಕ, ಗೃಹರಕ್ಷಕಿಯರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮಾರ್ಚ್ ತಿಂಗಳಲ್ಲಿ ಪೊಲೀಸ್ ಕವಾಯತು ಮೈದಾನ ( ಡಿಎಆರ್) ದಲ್ಲಿ ಸಂದರ್ಶನ ಏರ್ಪಡಿಸಲಾಗಿದೆ.

ಇದನ್ನೂ ಓದಿ..ಅಮೆಜಾನ್‌ ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಅರ್ಜಿಹಾಕಿ ಇಲ್ಲಿದೆ ಸಂಪೂರ್ಣ ವಿವರ

ವಿದ್ಯಾರ್ಹತೆ: ಎಂಟನೇ ಅಥವಾ ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು.
ಅರ್ಜಿ ಸಲ್ಲಿಸಿರುವ ಎಲ್ಲಾ ಗೃಹರಕ್ಷಕ ಅಭ್ಯರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಮೂಲ ಅಂಕಪಟ್ಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಸ ಸ್ಥಳ ದೃಢೀಕರಣ (ರೇಷನ್ ಕಾರ್ಡ್) ರಾಷ್ಟ್ರೀಕೃತ ಬ್ಯಾಂಕಿನ ಉಳಿತಾಯ ಖಾತೆ ಹಾಗೂ ಪೊಲೀಸ್ ಪರಿಶೀಲನ ವರದಿಯ ಮೂಲ ದಾಖಲಾತಿಗಳೊಂದಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂದು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಆರ್. ಪಾತಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ..ತಕ್ಷಣ ಬೇಕಾಗಿದ್ದಾರೆ ಆಸಕ್ತಿ ಇರುವವರು ಅರ್ಜಿಹಾಕಿ

Leave A Reply

Your email address will not be published.