Shramika Niwas Scheme: ಕೇಂದ್ರ ಸರ್ಕಾರದಿಂದ ಕಾರ್ಮಿಕರ ಕಾರ್ಡ್ (Labor Card) ಹೊಂದಿರುವ ಅಭ್ಯರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇದೀಗ ಮನೆ ಇಲ್ಲದವರಿಗೆ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕ ಕಾರ್ಡ್ ಹೊಂದಿರುವ ವಲಸೆ ಕಾರ್ಮಿಕರಿಗೆ ಈ ಯೋಜನೆ ಆಶ್ರಯವಾಗಲಿದ್ದು ಮನೆ ಇಲ್ಲದ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಈ ಯೋಜನೆ ಅತ್ಯಂತ ಉಪಕಾರಿಯಾಗಿದೆ.
ಶ್ರಮಿಕ ನಿವಾಸ ಯೋಜನೆಯ (Shramika Niwas Scheme) ಅಡಿಯಲ್ಲಿ ಈ ಒಂದು ಮನೆ ನಿರ್ಮಾಣದ ಕಾರ್ಯವನ್ನ ಕೈಗೊಳ್ಳಲಾಗಿದ್ದು ಸದ್ಯಕ್ಕೆ ಕಾರ್ಮಿಕರಿಗಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಯೋಜನೆಯ ಅಡಿಯಲ್ಲಿ ಒಂದು ಬಿಲ್ಡಿಂಗ್ ಅನ್ನು ನಿರ್ಮಿಸಲಾಗಿದ್ದು ನಂತರದ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲೂ ಸಹ ಈ ಯೋಜನೆಗಳು ಅತಿ ಶೀಘ್ರದಲ್ಲೇ ಕಾರ್ಯಗತವಾಗಲಿದೆ. ಇದರಿಂದ ಕಾರ್ಮಿಕರ ಕಾರ್ಡ್ ಹೊಂದಿರುವ ಅಲೆಮಾರಿ ಕಾರ್ಮಿಕರಿಗೆ ಬಹಳ ಉಪಯೋಗವಾಗಲಿದ್ದು ಇದೇ ರೀತಿಯಲ್ಲಿ ಕೇಂದ್ರ ಸರ್ಕಾರವು ಇನ್ನೂ ಅನೇಕ ರೀತಿಯ ಯೋಜನೆಗಳನ್ನ ಕಾರ್ಮಿಕರಿಗಾಗಿ ಜಾರಿಗೆ ತರುತ್ತಿದೆ.
ಈ ಯೋಜನೆಯನ್ನು ಕಾರ್ಯಗತಗೊಳಿಸಿಕೊಳ್ಳಲು ಕಾರ್ಮಿಕರ ಕಾರ್ಡನ್ನು ಹೊಂದಿರಲೇಬೇಕು ಮತ್ತು ಮುಂಚಿತವಾಗಿ ಯಾವುದೇ ಮನೆಯನ್ನು ಹೊಂದಿರಬಾರದು, ವಿಶೇಷವಾಗಿ ಅಲೆಮಾರಿ ಕಾರ್ಮಿಕರಿಗೆ ಈ ಯೋಜನೆ ಉಪಯುಕ್ತವಾಗಿದೆ.
ಇದನ್ನೂ ಓದಿ..ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಕೃಷಿ ವಿಕಾಸ್ ಯೋಜನೆಯಡಿ ರೈತರಿಗೆ ಸಿಗಲಿದೆ 50 ಸಾವಿರ
ಈ ಯೋಜನೆಯಲ್ಲೂ ಪಡೆಯಲು ಯಾವೆಲ್ಲ ದಾಖಲಾತಿ ಬೇಕಾಗುತ್ತದೆ?
ಆಧಾರ್ ಕಾರ್ಡ್ ಪ್ರತಿ (Aadhaar)
ಬ್ಯಾಂಕ್ ಖಾತೆಯ passbook ನ ಮೊದಲ ಪುಟದ ಪ್ರತಿ
ಫಲಾನುಭವಿ ನೋಂದಣಿ ಗುರುತಿನ ಚೀಟಿ ಅಥವಾ ಕಾರ್ಡ್‌ನ ಪ್ರತಿ
BPL ವರ್ಗದ ಪ್ರಮಾಣಪತ್ರ/ಕಾರ್ಡ್ ನಕಲು (ಅನ್ವಯಿಸಿದರೆ).
ವಿಕಲಚೇತನ ಪ್ರಮಾಣಪತ್ರದ ಸ್ವಯಂ ದೃಢೀಕೃತ ಪ್ರತಿ (ಅನ್ವಯಿಸಿದರೆ).
SC ಅಥವಾ ST ಪ್ರಮಾಣಪತ್ರದ ಸ್ವಯಂ ದೃಢೀಕೃತ ಪ್ರತಿ (ಅನ್ವಯಿಸಿದರೆ).