ನೈಸರ್ಗಿಕ ಮನೆಮದ್ದು ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತದೆ. ದೇಹದಲ್ಲಿ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆ ಅನ್ನೋದು ಕಾಡುತ್ತದೆ ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತ ಕೆಲಸ ಮಾಡಬೇಕು, ಇಲ್ಲದಿದ್ದರೆ ದೊಡ್ಡ ಸಮಸ್ಯೆಯಾಗಿ ಪರಿಣಾಮ ಬೀರುತ್ತದೆ.
ಮೂತ್ರಪಿಂಡವನ್ನು ಶುದ್ದೀಕರಿಸುವ ಜೊತೆಗೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಕಷಾಯದ ಬಗ್ಗೆ ಈ ಮೂಲಕ ತಿಳಿದುಕೊಳ್ಳೋಣ. ಅಷ್ಟಕ್ಕೂ ಈ ಕಷಾಯವನ್ನು ಹೇಗೆ ಮಾಡೋದು ಅನ್ನೋದನ್ನ ನೋಡುವುದಾ್ದರೆ ಇದಕ್ಕೆ ಕೊತ್ತಂಬರಿ ಸೊಪ್ಪು ಬೇಕಾಗುತ್ತದೆ. ಕೊತ್ತಂಬರಿಯಲ್ಲಿ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳಿವೆ.
ಕೊತಂಬರಿ ಕಷಾಯವನ್ನು ಮಾಡಿ ಸೇವನೆ ಮಾಡುವುದರಿಂದ ದೇಹದಲ್ಲಿನ ಕಲ್ಮಶವನ್ನು ಹೊರಹಾಕುತ್ತದೆ. ಅಷ್ಟೇ ಅಲ್ದೆ ಯಾವುದ್ ರೀತಿಯವಿಷಕಾರಿ ಅಂಶ ಇದ್ರೆ ನಿಯಂತ್ರಿಸುತ್ತದೆ. ಕೊತಂಬರಿ ಕಷಾಯವನ್ನು ಹೇಗೆ ತಯಾರಿಸೋದು ಅನ್ನೋದನ್ನ ನೋಡಣ.
ಕೊತಂಬರಿ ಕಷಾಯ ತಯಾರಿಸುವ ವಿಧಾನ: ಮೊದಲನೆಯದಾಗಿ ಕೊತಂಬರಿ ಸೊಪ್ಪನ್ನು ಚನ್ನಾಗಿ ತೊಳೆದು ಕತ್ತರಿಸಿ ಒಂದು ಪಾತ್ರೆಯಲ್ಲಿ ನೆನಸಿಡಿ, ಸ್ವಲ್ಪ ಸಮಯದ ನಂತರ ಅದನ್ನು ಕೆಲವು ನಿಮಿಷಗಳ ಕಾಲ ಕುಡಿಸಿ ಓಲೆ ಮೇಲಿನಿಂದ ಕೆಳಗಿಳಿಸಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ನಂತರ ತಣ್ಣಗಾದ ಮೇಲೆ ಶುದ್ಧವಾದ ಬಟ್ಟೆಯಿಂದ ಸೋಸಿಕೊಂಡು ಅದನ್ನು ಸಂಗ್ರಹಿಸಿಕೊಳ್ಳಿ ದಿನಕ್ಕೆ ಒಂದು ಬಾರಿ ಒಂದು ಲೋಟದಂತೆ ತಿಂಗಳಿಗೆ ಎರಡು ಬಾರಿ ಕುಡಿದ್ರೆ ಸಾಕು ಹೊಟ್ಟೆಯಲ್ಲಿನ ಕಲ್ಮಶ ಹೊರಹೋಗುತ್ತದೆ ಹಾಗು ಮೂತ್ರದಲ್ಲಿ ಬಣ್ಣ ಬದಲಾವಣೆ ಕಾಣಬಹುದು.