ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಕಂಡು ಬರುತ್ತದೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ಗಂಡಸರು ಹೆಂಗಸರುಗೆ ಹೀಗೆ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡು ಬರುವ ಸರ್ವೇ ಸಾಮಾನ್ಯ ಸಮಸ್ಯೆ ಎಂದರೆ ಕಾಲು ಒಡಕು ಎನ್ನಬಹುದು. ಕೆಲವರಿಗೆ ಹೇಗೆ ಕಾಲು ಒಡೆಯದಂತೆ ನೋಡಿಕೊಳ್ಳುವುದು ಅನ್ನುವ ಚಿಂತೆ ಇದ್ದೆ ಇರತ್ತೆ. ಆದರೆ ಯಾಕೆ ಕಾಲು ಒಡೆಯತ್ತೆ ಅನ್ನೋದು ತಿಳಿದಿರಲ್ಲ. ಹಾಗಾಗಿ ಕಾಲು ಒಡೆಯಲು ಕಾರಣ ಅದಕ್ಕೆ ಪರಿಹಾರ ಏನು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಒಡೆದ ಹಿಮ್ಮಡಿಯ ಸಮಸ್ಯೆ ಬರೋದಕ್ಕೆ ಕಾರಣ ಏನು ಅಂದರೆ, ಹೆಚ್ಚಾಗಿ ಚಳಿಗಾಲ ಮಳೆಗಾಲದಲ್ಲಿ ಚರ್ಮ ಒಣಗಿರುತ್ತದೆ ಅದರಲ್ಲಿ ಸತ್ತು ಹೋದ ಜೀವಕೋಶಗಳು ಇರುವುದರಿಂದ ಹಿಮ್ಮಡಿ ಒಡೆಯುತ್ತದೆ. ಈ ರೀತಿ ಆಗಬಾರದು ಎಂದರೆ ಸ್ವಲ್ಪ ಆದರೂ ನಾವು ಕಾಳಜಿ ಮಾಡಲೇಬೇಕು. ಅದಕ್ಕಾಗಿ ಪ್ರತೀ ರಾತ್ರಿ ಮಲಗುವಾಗ ಸಾಕ್ಸ್ ಧರಿಸಿ ಮಲಗಬೇಕು. ಹಗಲಿನಲ್ಲಿ ಓಡಾಡುವಾಗ ಕೂಡ ಚಪ್ಪಲಿ ಧರಿಸಬೇಕು ಇದು ಧೂಳಿನಲ್ಲಿ ಓಡಾಡುವಾಗ ಧೂಳು ನಮ್ಮ ಕಾಲಿಗೆ ಅಂಟಡೆ ಇರುವ ಹಾಗೆ ಕಾಪಾಡುತ್ತದೆ. ರಾತ್ರಿ ಮಲಗುವಾಗ ಕಾಲನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಮಲಗಬೇಕು. ಹೆಚ್ಚಾಗಿ ನೀರು ಕುಡಿಯಬೇಕು ಇದರಿಂದ ಚರ್ಮ ಒಣಗಿಕೊಂಡು ಇರುವುದಿಲ್ಲ ದೇಹದಲ್ಲಿ ತೇವಾಂಶ ಹೆಚ್ಚಾಗಿ ಇರಬೇಕು. ಇಂತಹ ಚಿಕ್ಕ ಚಿಕ್ಕ ಮನೆಮದ್ದುಗಳನ್ನು ಪಾಲಿಸಿದರೆ ಹಿಮ್ಮಡಿ ಒಡೆಯದಂತೆ ಕಾಪಾಡಿಕೊಳ್ಳಬಹುದು. ಅದರ ಜೊತೆಗೆ ಈ ಟಿಪ್ಸ್ ಗಳನ್ನೂ ಕೂಡಾ ಪಾಲಿಸಿ ಹಿಮ್ಮಡಿ ಒಡೆಯುವುದನ್ನ ಕಡಿಮೆ ಮಾಡಿಕೊಳ್ಳಿ.
ಮೊದಲು ಒಂದು ಬೌಲ್ ಗೆ ಒಂದು ಟೀ ಸ್ಪೂನ್ ಅಕ್ಕಿ ಹಿಟ್ಟನ್ನು ತೆಗೆದುಕೊಂಡು, ಅಕ್ಕಿ ಹಿಟ್ಟು ಸತ್ತು ಹೋದ ಜೀವಕೋಶಗಳನ್ನು ತೆಗೆದು ಒಂದು ರೀತಿ ಸ್ಕ್ರಬ್ ತರ ಕೆಲಸ ಮಾಡುತ್ತದೇ. ನಂತರ ಅಕ್ಕಿ ಹಿಟ್ಟಿಗೆ ಕಾಲು ಟೀ ಸ್ಪೂನ್ ಅರಿಶಿನವನ್ನು ಸೇರಿಸಿ. ಅರಿಶಿನದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಹಿಮ್ಮಡಿಯ ಒಡೆದ ಗೆರೆಗಳು ಮಾಯವಾಗಳು ಸಹಾಯ ಮಾಡುತ್ತದೆ. ನಂತರ ಅರ್ಧ ಸ್ಪೂನ್ ನಿಂಬೆ ರಸವನ್ನು ಸೇರಿಸಿ. ಒಂದು ವೇಳೆ ಕಾಲು ಜಾಸ್ತಿ ಒಡೆದು ರಕ್ತ ಬರುತ್ತಾ ಇದ್ದರೆ ನಿಂಬೆ ರಸವನ್ನು ಸೇರಿಸಬಾರದು. ಯಾಕಂದ್ರೆ ನಿಂಬೆ ರಸ ಗಾಯಕ್ಕೆ ಸೇರಿದ್ರೆ ಉರಿ ಆಗತ್ತೆ. ನಂತರ ಇದಕ್ಕೆ ಬೇಕಾದಷ್ಟು ರೋಸ್ ವಾಟರ್ ಹಾಕಿ ಪೇಸ್ಟ್ ಆಗುವ ಹಾಗೆ ಮಿಕ್ಸ್ ಮಾಡಿಕೊಳ್ಳಬೇಕು. ರೋಸ್ ವಾಟರ್ ಕೂಡಾ ಹಿಮ್ಮಡಿ ಒಡೆಯೊದನ್ನ ತಡೆಯುತ್ತದೆ.
ಇದನ್ನ ಹಚ್ಚುವ ರೇಟಿ ಹೇಗೆ ಅಂದರೆ, ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಕಾಲನ್ನು ತೊಳೆದು ಕಾಲನ್ನು ಒರೆಸಿಕೊಂಡು ತಯಾರು ಮಾಡಿಕೊಂಡ ಪೇಸ್ಟ್ ಅನ್ನು ಹಚ್ಚಬೇಕು. ನಂತರ 15 ನಿಮಿಷ ಹಾಗೇ ಬಿಟ್ಟು 15 ನಿಮಿಶದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆದು ಕಾಟನ್ ಬಟ್ಟೆಯಿಂದ ಕಾಲನ್ನು ಒರೆಸಿಕೊಳ್ಳಬೇಕು. ಈ ರೀತಿ ದಿನ ಬಿಟ್ಟು ದಿನ ಮಾಡುವುದರಿಂದ ಹಿಮ್ಮಡಿ ಮೃದುವಾಗಿ ಇರುತ್ತದೆ ಹಾಗೂ ಒಡಕು ಕೂಡಾ ಕಡಿಮೆ ಆಗುತ್ತದೆ. ಕಾಲು ತೊಳೆದ ನಂತರ ಪೆಟ್ರೋಲಿಯಂ ಜೆಲ್ ಅಥವಾ ಮೊಯಿಶ್ಚರೈಸರ್ ಹಚ್ಚಿ ಮಲಗುವುದು ತುಂಬಾ ಒಳ್ಳೆಯದು. ಈ ಮನೆ ಮದ್ದನ್ನು ಪ್ರಯತ್ನಿಸಿ ನೋಡಿ