Happy married life: ಮದುವೆ ಅನ್ನೋದು ಒಂದು ಪವಿತ್ರ ಬಂಧನ. ವಧು ವರ ಅರ್ಥ ಮಾಡಿಕೊಂಡು, ಕಷ್ಟ ಸುಖದಲ್ಲಿ ಜೊತೆಯಾಗಿ ಕೂಡಿ ಬಾಳುವುದಕ್ಕೆ ಮದುವೆ ಎನ್ನುತ್ತಾರೆ. ಹಳೆಯ ಸಂಪ್ರದಾಯದ ಪ್ರಕಾರ ಗಂಡ ಹೊರಗಡೆ ದುಡಿದು ಸಂಪಾದನೆ ಮಾಡಿ ಬರುತ್ತಿದ್ದ ಮತ್ತು ಹೆಂಡತಿ ಅಡುಗೆ ಮಾಡಿಕೊಂಡು ಮನೆಯಲ್ಲಿ ಇರುತ್ತಿದ್ದರು
ಈಗ ಗಂಡನ ಜೊತೆ ಹೆಂಡತಿಯು ದುಡಿಯುತ್ತಾಳೆ ಹಾಗಾಗಿ ಸಂಬಂಧದಲ್ಲಿ ಬಿರುಕು ಬೀಳುವ ಸಾಧ್ಯತೆಗಳಿವೆ ಏಕೆಂದರೆ ಅಡಿಗೆ ಮತ್ತು ಮಕ್ಕಳ ಜವಾಬ್ದಾರಿ ಕೂಡ ಗಂಡನ ಮೇಲೆ ಬೀಳುತ್ತದೆ. ಕೆಲಸದ ಒತ್ತಡ ಮತ್ತು ಮನೆಯ ಜವಾಬ್ದಾರಿ ಗಂಡನಿಗೆ ಹೆಚ್ಚಾಗುತ್ತದೆ ಈ ಒತ್ತಡದಲ್ಲಿ ಹೆಂಡತಿಯ ಮೇಲೆ ರೇಗುವ ಸಾಧ್ಯತೆಗಳು ಕೂಡ ಜಾಸ್ತಿ ಇರುತ್ತದೆ.
ಸಂಸಾರದಲ್ಲಿ ಪತಿ ಪತ್ನಿಯರು ಇಬ್ಬರು ಸಮಾನರು ಆದರೆ ಪುರುಷನಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚು ಮತ್ತು ಬಹಳಷ್ಟು ವಿಚಾರದಲ್ಲಿ ಪುರುಷ ಮುಂದಾಳತ್ವವನ್ನು ವಹಿಸಬೇಕಾಗುತ್ತದೆ ಅಂತಹ ಕೆಲಸದಲ್ಲಿ ಹೆಂಡತಿಯ ಅನಿಸಿಕೆಯನ್ನು ಕೇಳಬಾರದು ಹೆಂಡತಿ ಆದವಳು ಗಂಡನಿಗೆ ಪ್ರೋತ್ಸಾಹ ನೀಡಬೇಕಾಗುತ್ತದೆ.
ಪುರುಷನಿಗೆ “ತಾಳ್ಮೆ” ಬಹಳ ಮುಖ್ಯ ಪುರುಷ ಹೆಂಡತಿಯ ಜೊತೆಗೆ ತಾಳ್ಮೆಯಿಂದ ವರ್ತನೆ ಮಾಡುವುದರಿಂದ ಸಂಸಾರದಲ್ಲಿ ಗಲಾಟೆ ಬರುವುದಿಲ್ಲ. ಕೆಲವು ಬಾರಿ ಕೆಲಸದ ಒತ್ತಡವಿಲ್ಲ ಹೆಂಡತಿಯ ಮೇಲೆ ರೇಗುತ್ತಾರೆ ಆಗ ಮನಸ್ಸಿಗೆ ನೋವು ಉಂಟಾಗಬಹುದು. ಕೆಲವು ಪುರುಷರು ಹೆಂಡತಿಯ ಆಸೆಗಳು ಮತ್ತು ನಿರೀಕ್ಷೆ ಕಡೆಗೆ ಗಮನ ನೀಡಿರುವುದಿಲ್ಲ ಅದು ಅವರ ಮನಸ್ಸನ್ನು ಗಾಸಿಗೊಳಿಸುತ್ತದೆ.
ಗಂಡ ಹೆಂಡತಿಯರ ನಡುವೆ ಸ್ವತಂತ್ರ ಬಾವ ಇರಬೇಕು. ಪ್ರತಿಯೊಬ್ಬರಿಗೂ ಸ್ವತಂತ್ರ ಎನ್ನುವುದು ಬಹಳ ಮುಖ್ಯ ಸ್ವತಂತ್ರವಾಗಿ ಇರಲು ಸಹಕರಿಸಬೇಕು. ಸಂಬಂಧದಿಂದ ಕಟ್ಟು ಬಿದ್ದ ಹಾಗೆ ಅವರಿಗೆ ಅನಿಸಬಾರದು. ಸ್ವತಂತ್ರ ಇದ್ದರೆ ಹೊಂದಾಣಿಕೆಯು ಬರುತ್ತದೆ.
ಕೆಲಸದ ಒತ್ತಡದಲ್ಲಿ “ರೋಮ್ಯಾನ್ಸ್” ಕಳೆದು ಹೋಗಿಬಿಡುತ್ತದೆ. ಹೆಂಡತಿಯಾದವಳಿಗೆ ಸ್ವಲ್ಪ ಸಮಯ ನೀಡುವುದು ಅವಶ್ಯಕ ಇಲ್ಲದಿದ್ದರೆ ಮನಸ್ತಾಪ ಉಂಟಾಗುವ ಸಾಧ್ಯತೆಗಳು ಕೂಡ ಜಾಸ್ತಿ ಇರುತ್ತದೆ ಆದರೆ, ದಾಂಪತ್ಯದ ಬದುಕು ಯಶಸ್ವಿಯಾಗಲು ರೋಮ್ಯಾನ್ಸ್, ಲೈಂಗಿಕತೆ ಅಗತ್ಯ. ಪರಸ್ಪರರ ನಡುವೆ ಅನುಬಂಧ ಹೆಚ್ಚಲು ಇವು ಕಾರಣವಾಗುತ್ತದೆ.