ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಪುರಾಣ ಗ್ರಂಥಗಳಲ್ಲಿ ಶನಿಮಹಾತ್ಮನನ್ನು ನ್ಯಾಯ ದೇವತೆ ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸಾಡೇಸಾತಿ ಹಾಗೂ ಎರಡುವರೆ ವರ್ಷದ ಶನಿ ದೋಷವನ್ನು ಹೊಂದಲೇ ಬೇಕಾಗುತ್ತದೆ. ಈ ಸಮಯದಲ್ಲಿ ಮಾನಸಿಕ ನೆಮ್ಮದಿ ಶಾರೀರಿಕ ಸಮಸ್ಯೆಗಳು ಸೇರಿದಂತೆ ಹಲವಾರು ರೀತಿಯ ಆರ್ಥಿಕ ಹಾಗೂ ನೈತಿಕ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಆದರೆ ಈ ನಾಲ್ಕು ರಾಶಿಗಳು ಶನಿಗೆ ಅತ್ಯಂತ ಇಷ್ಟವಾಗಿದ್ದು ಅವರಿಗೆ ಸಾಡೇಸಾತಿಯ ಪ್ರಭಾವ ಅಷ್ಟೊಂದು ಬೀರುವುದಿಲ್ಲ. ಹಾಗಿದ್ದರೆ ಆ ನಾಲ್ಕು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿ; ವೃಷಭ ರಾಶಿಯವರ ಅಧಿಪತಿ ಶುಕ್ರ ಆಗಿದ್ದರೂ ಕೂಡ ಶನಿಯ ಪ್ರಭಾವ ವೃಷಭ ರಾಶಿಯವರ ಮೇಲೆ ಸಾಕಷ್ಟು ಇರುತ್ತದೆ. ಶನಿ ಹಾಗು ಶುಕ್ರನ ನಡುವೆ ಉತ್ತಮವಾದ ಸ್ನೇಹ ಸಂಬಂಧ ಇದ್ದು ಇದರಿಂದಾಗಿ ವೃಷಭ ರಾಶಿಯವರ ಮೇಲೆ ಶನಿಯ ಕೆಟ್ಟ ಪ್ರಭಾವ ಅಷ್ಟೊಂದು ಬೀರುವುದಿಲ್ಲ.

ತುಲಾ ರಾಶಿ; ತುಲಾ ರಾಶಿಯಲ್ಲಿ ಶನಿ ಉಚ್ಛ ಸ್ಥಾನದಲ್ಲಿರುತ್ತಾನೆ. ಈ ರಾಶಿಯ ಅಧಿಪತಿ ಕೂಡ ಶುಕ್ರನೇ ಆಗಿರುವುದರಿಂದಾಗಿ ಶನಿಯ ಸಾಡೆಸಾತಿ ಹಾಗೂ ಎರಡುವರೆ ವರ್ಷದ ವಕ್ರದೃಷ್ಟಿ ಇವರ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ಇವುಗಳ ಹೊರತಾಗಿಯೂ ಕೂಡ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸುತ್ತಾರೆ.

ಮಕರ ರಾಶಿ; ಮಕರ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಹಾಗೂ ಶನಿಯ ಅತ್ಯಂತ ನೆಚ್ಚಿನ ರಾಶಿಗಳಲ್ಲಿ ಮಕರ ರಾಶಿ ಕೂಡ ಆಗಿರುವುದರಿಂದಾಗಿ ಸಾಡೆ ಸಾಥಿ ಹಾಗೂ ಎರಡುವರೆ ವರ್ಷದ ಶನಿ ಕಾಟದಲ್ಲಿ ಮಕರ ರಾಶಿಯವರು ಅಷ್ಟೊಂದು ಕಷ್ಟಪಡುವ ಅಗತ್ಯ ಇರುವುದಿಲ್ಲ. ಹೀಗಾಗಿ ಈ ಬಗ್ಗೆ ಮಕರ ರಾಶಿಯವರು ಯಾವುದೇ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ.

ಕುಂಭ ರಾಶಿ; ಕುಂಭ ರಾಶಿಗೂ ಕೂಡ ಶನಿಯ ಅಧಿಪತಿ ಆಗಿರುವುದರಿಂದಾಗಿ ಹಾಗೂ ದ್ವಾದಶ ರಾಶಿಗಳಲ್ಲಿ ಶನಿಯ ಅತ್ಯಂತ ನೆಚ್ಚಿನ ರಾಶಿಗಳಲ್ಲಿ ಕುಂಭ ರಾಶಿ ಕೂಡ ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತದೆ. ವಕ್ರದೃಷ್ಟಿಯ ಸಂದರ್ಭದಲ್ಲಿ ಕೂಡ ಶನಿ ಕುಂಭ ರಾಶಿಯವರ ಮೇಲೆ ತನ್ನ ಸಕಾರಾತ್ಮಕ ಪ್ರಭಾವವನ್ನು ಬೀರುವ ಮೂಲಕ ಯಾವುದೇ ಆರ್ಥಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಕಾಣದೆ ಇರುವ ಹಾಗೆ ಕಾಪಾಡುತ್ತಾನೆ. ಶನಿ ಇಷ್ಟಪಡುವಂತಹ ಅತ್ಯಂತ ನೆಚ್ಚಿನ ಆ ನಾಲ್ಕು ರಾಶಿಗಳು ಇವುಗಳೇ ಆಗಿವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!