Health tips: ನಮ್ಮ ದೇಹವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕಾದರೆ ಹಲವಾರು ರೀತಿಯ ಪೌಷ್ಟಿಕ ಆಹಾರಗಳನ್ನ ನಾವು ಸೇವಿಸಬೇಕಾಗುತ್ತದೆ ಅದರಲ್ಲಿ ಖರ್ಜೂರವು ಒಂದು ಉತ್ತಮವಾದ ಪಾತ್ರವನ್ನು ವಹಿಸುತ್ತದೆ. ಖರ್ಜೂರ (Dates) ತಿನ್ನುವುದರಿಂದ ಹೃದಯಾಘಾತ (Heart attack) ಸಂಭವಿಸುವುದಿಲ್ಲ ಖರ್ಜೂರದಲ್ಲಿರುವ ಮ್ಯಾಗ್ನಿಷಿಯಂ (Magnesium) ನಿಮ್ಮ ಹೃದಯದಲ್ಲಿರುವ ಅಥವಾ ರಕ್ತನಾಳದಲ್ಲಿರುವ ಸ್ನಾಯುಗಳನ್ನ ಸಡಿಲಗೊಳಿಸುತ್ತದೆ

ಇದರ ಪರಿಣಾಮವಾಗಿ ರಕ್ತದ ಒತ್ತಡ ಅಂದರೆ ಬಿಪಿ (BP) ಕಡಿಮೆಯಾಗುತ್ತದೆ ಇದರಿಂದ ಹೃದಯಘಾತ ಉಂಟಾಗುವ ಸಂಭವಗಳು ಕಡಿಮೆಯಾಗುತ್ತವೆ ನಿಮ್ಮ ರಕ್ತನಾಳಗಳಲ್ಲಿ ರಕ್ತ ಸಂಚಾರವು ಸುಗಮವಾಗಿ ನಡೆಯುತ್ತವೆ. ಖರ್ಜೂರದ ಸೇವನೆಯು ಹೃದಯದ ಯಾವುದೇ ರೀತಿಯ ಇನ್ನಿತರ ಖಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತದೆ.

ಹಾಗೆಯೇ ಖರ್ಜೂರ ಸೇವಿಸುವುದರಿಂದ ಕೊಲೆಸ್ಟ್ರಾಲ್ (Cholesterol) ಮಟ್ಟ ಕಡಿಮೆಯಾಗುತ್ತದೆ ತುಂಬಾ ಸಣ್ಣ ಇರುವವರು ಹಾಗೂ ತೂಕ ಹೆಚ್ಚಿಸಬೇಕೆಂದು ಕೊಂಡವರು ಕರ್ಜೂರವನ್ನು ಹಾಲಿನಲ್ಲಿ ನಿಯಮಿತವಾಗಿ ತಿಂದರೆ ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಖರ್ಜೂರ ಸೇವಿಸುವುದರಿಂದ ಅನ್ನನಾಳದ ಕ್ಯಾನ್ಸರ್ ಕಡಿಮೆಯಾಗುತ್ತದೆ. ಈ ಖರ್ಜೂರ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಯಾಗದಂತೆ ಸಹಾಯ ಮಾಡುತ್ತದೆ. ಖರ್ಜೂರ ಸೇವಿಸುವುದರಿಂದ ಗರ್ಭಧಾರಣೆ ಸಮಯದಲ್ಲಿ ಉಂಟಾಗುವ ಮೂಲವ್ಯಾಧಿಯನ್ನು ತಡೆಯುತ್ತದೆ.

ಹೀಗೆ ಖರ್ಜೂರ (Dates) ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಿ ದೇಹದ ಸಮತೋಲನವನ್ನ ಕಾಪಾಡುತ್ತದೆ ದಿನಕ್ಕೆ ಎರಡರಿಂದ ನಾಲ್ಕು ಖರ್ಜೂರವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!