ಇತ್ತೀಚಿನ ಬ್ಯುಸಿ ಜೀವನ, ಆಧುನಿಕ ದಿನಗಳಲ್ಲಿ ಸರಿಯಾದ ಆಹಾರವನ್ನು ಸೇವಿಸದೇ ಇರುವದರಿಂದ ನಮ್ಮ ಜೀರ್ಣ ಕ್ರಿಯೆಯಲ್ಲಿ ತೊಂದರೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಸಾಮಾನ್ಯವಾಗಿವೆ. ನಮ್ಮ ಜೀರ್ಣ ಕ್ರಿಯೆ ಸರಿಯಾಗಿ ಇದ್ದರೆ ಮಾತ್ರ ನಮ್ಮ ದೇಹ ಸರಿಯಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಒಂದು ವೇಳೆ ಜೀರ್ಣಕ್ರಿಯೆಯಲ್ಲಿ ತೊಂದರೆ ಕಂಡುಬಂದರೆ ಇದರಿಂದ ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಹೊಟ್ಟೆ, ಮೂಳೆಗಳು ಹಾಗೂ ತ್ವಚೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಸರಿಯಾದ ಆಹಾರವನ್ನು ಸೇವಿಸುವುದರ ಜೊತೆಗೆ ಹೊಟ್ಟೆ ಕೂಡಾ ಸರಿಯಾಗಿ ಖಾಲಿ ಆಗುವುದು ಕೂಡಾ ಅಷ್ಟೇ ಮುಖ್ಯ. ಇನ್ನೂ ಯಾರ ಹೊಟ್ಟೆ ಪ್ರತೀ ದಿನ ಬೆಳಿಗ್ಗೆ ಖಾಲಿ ಆಗುವುದಿಲ್ಲವೋ ಅಂಥವರಿಗೆ ಆಸಿಡಿಟಿ ಸಮಸ್ಯೆ ಇರತ್ತೆ. ಸರಿಯಾಗಿ ಮಲ ವಿಸರ್ಜನೆ ಆಗದೇ ಮೂಲವ್ಯಾದಿ ಅಂತಹ ಸಮಸ್ಯೆ ಕೂಡಾ ಕಾಡುತ್ತದೆ. ಅಷ್ಟೇ ಅಲ್ಲದೆ ಬೆಳಿಗ್ಗೆ ಪೂರ್ತಿಯಾಗಿ ಹೊಟ್ಟೆ ಖಾಲಿ ಆಗದೇ ಇದ್ದರೆ ದೇಹದಲ್ಲಿ ಆಲಸ್ಯ ತನ ಹೆಚ್ಚು ಆಗಿ ಯಾವುದೇ ಕೆಲಸದ ಮೇಲೆ ಗಮನ ಇರುವುದಿಲ್ಲ. ಹೊಟ್ಟೆ ಖಾಲಿ ಆಗದೇ ಇದ್ದರೆ ಸರಿಯಾದ ಸಮಯಕ್ಕೆ ಮತ್ತೆ ಹೊಟ್ಟೆ ಹಸಿಯುವುದೂ ಇಲ್ಲ. ಸರಿಯಾದ ನಿದ್ರೆ ಕೂಡಾ ಬರಲ್ಲ. ಇದೆ ರೀತಿ ಮುಂದುವರೆದರೆ ಇದರ ಪರಿಣಾಮ ನಮ್ಮ ಕೂದಲಿನ ಮೇಲೆ ಮತ್ತು ನಮ್ಮ ತ್ವಚೆಯ ಮೇಲೂ ಬೀಳುತ್ತದೆ. ಈ ಸಮಸ್ಯೆಯನ್ನ ಗಂಭೀರವಾಗಿ ತೆಗೆದುಕೊಳ್ಳದೆ ಹೋದರೆ, ಹೊಟ್ಟೆ ಉಬ್ಬರ, ಆಸಿಡಿಟಿ, ಮೂಲವ್ಯಾಧಿ, ಎದೆಯುರಿ, ಲಿವರ್ ನ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಕಂಡುಬರುತ್ತವೆ. ಇನ್ನೂ ಮಹಿಳೆಯರಲ್ಲಿ ಋತು ಚಕ್ರದಲ್ಲಿ ಬದಲಾವಣೆ, ರೀ ಪ್ರಾಡಕ್ಟ್ ನಲ್ಲಿ ಏರು ಪೇರು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇವತ್ತಿನ ಇ ಲೇಖನದಲ್ಲಿ ಬೆಳಗ್ಗೆ ಎದ್ದಕೂಡಲೆ ಸರಿಯಾಗಿ ಹೊಟ್ಟೆ ಖಾಲಿ ಮಾಡಿ ಮಲಬದ್ಧತೆಯನ್ನು ಹೋಗಲಾಡಿಸುವ ಸುಲಭವಾದ ಮೂರು ಮನೆ ಮದ್ದುಗಳು ಯಾವುದು ಅನ್ನೋದನ್ನ ನೋಡೋಣ.
ಮೊದಲನೆಯ ಮನೆ ಮದ್ದು ಏನೂ ಅಂದ್ರೆ, ಇದನ್ನ ರಾತ್ರಿ ಮಲಗುವಾಗ ಸೇವಿಸಬೇಕು. ಒಂದು ಪ್ಯಾನ್ ಗೆ ಎರಡು ಚಮಚ ಜೀರಿಗೆ, ಎರಡು ಚಮಚ ಅಜವಾನ (ಓಂ ಕಾಳು) , ಒಂದು ಚಮಚ ಕೊತ್ತಂಬರಿ ಬೀಜ, ೧೦ ಪುದೀನಾ ಎಲೆಗಳು, ಒಂದು ಚಮಚ ಸೋಂಪು ಕಾಳು ಸೇರಿಸಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ತಣ್ಣಗಾಗಲು ಬಿಟ್ಟು ಎಲ್ಲಾ ಪದಾರ್ಥಗಳನ್ನು ಪುಡಿ ಮಾಡಿಕೊಳ್ಳಬೇಕು. ಈ ಪುಡಿಗೆ ಒಂದು ಚಮಚ ಅರಿಶಿಣ, ಒಂದು ಚಮಚ ಕಲ್ಲು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಈ ಮಿಶ್ರಣವನ್ನು ರಾತ್ರಿ ಊಟ ಆದ ನಂತರ, ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತಯಾರಿಸಿಕೊಂಡ ಇ ಪುಡಿಯನ್ನು ಹಾಕಿ, ಹದಿನೈದು ನಿಮಿಷ ಬಿಟ್ಟು ಸೇವಿಸುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.
ಎರಡನೆಯ ಮನೆಮದ್ದು ಎಂದರೆ, ಹರಳೆಣ್ಣೆ ಅಂದರೆ ಕ್ಯಾಸ್ಟರ್ ಆಯಿಲ್ ಬೆಳಗ್ಗೆ ಎದ್ದು ಒಂದು ಲೋಟ ನೀರು ಕುಡಿದ ನಂತರ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಹರಳೆಣ್ಣೆ, ಅರ್ಧ ಚಮಚ ಉಪ್ಪು, ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ಪೂರ್ತಿಯಾಗಿ ಖಾಲಿ ಆಗತ್ತೆ. ಇದೆ ರೀತಿ ಅರಿಶಿಣ ಬೆರೆಸಿದ ಹಾಲು ಮತ್ತು ಪಪ್ಪಾಯ ಹಣ್ಣು ಕೂಡಾ ಅಷ್ಟೇ ಪರಿಣಾಮಕಾರಿಯಾದ ಮನೆ ಮದ್ದುಗಳು. ರಾತ್ರಿ ಊಟ ಆದ ನಂತರ ಅಥವಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಪಚನ ಶಕ್ತಿ ಹೆಚ್ಚುತ್ತದೆ. ಬೆಳಗ್ಗೆ ಯಾವುದೇ ತೊಂದರೆ ಇಲ್ಲದೆ ಮಲವಿಸರ್ಜನೆ ಆಗತ್ತೆ. ಇದರಿಂದ ಆರಾಮವಾಗಿ ಇರಬಹುದು.