ತೊಂಡೆಕಾಯಿ ನೈಸರ್ಗಿಕವಾಗಿ ಸಿಗುವಂತ ತರಕಾರಿಗಳಲ್ಲಿ ಒಂದಾಗಿದೆ, ಇದರಲ್ಲಿ ವಿಟಮಿನ್ ಹಾಗೂ ಪೋಷಕಾಂಶಗಳನ್ನು ಕಾಣಬಹುದಾಗಿದೆ. ವಿಟಮಿನ್ ‘ಸಿ’ ಮತ್ತು ಬೀಟಾ ಕೆರೋಟಿನ್ ಅಂಶ ಹೊಂದಿರುವಂತ ಈ ತೊಂಡೆಕಾಯಿ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಗುಣ ಹೊಂದಿದೆ ಇನ್ನು ಅಷ್ಟೇ ಅಲ್ದೆ ತೊಂಡೆಕಾಯಿ ಹೇಗೆಲ್ಲ ಉಪಯೋಗಕಾರಿ ಅನ್ನೋದನ್ನ ನೋಡುವುದಾದರೆ ಬಾಯಿಹುಣ್ಣು ಕಣ್ಣು ಉರಿ ಕಫ ಸಮಸ್ಯೆಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ.
ಪೋಷಕಾಂಶಗಳನ್ನು ಹೊಂದಿರುವಂತ ತೊಂಡೆಕಾಯಿ ಸೇವನೆಯಿಂದ ದೇಹಕ್ಕೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ, ಅಷ್ಟೇ ಅಲ್ದೆ ಬಾಯಿಹುಣ್ಣು ನಿವಾರಣೆಗೆ ಪೂರಕವಾಗಿ ಕೆಲಸ ಮಾಡುತ್ತದೆ ಹೌದು ಎಳೆಯ ತೊಂಡೆ ಕಾಯಿಯನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
ಇನ್ನು ಶೀತದಿಂದ ಉಂಟಾಗುವಂತ ಕಫ ನಿವಾರಣೆಗೆ ತೊಂಡೆಕಾಯಿ ಮದ್ದಾಗಿ ಕೆಲಸ ಮಾಡುತ್ತದೆ. ಹೌದು ತೊಂಡೆಕಾಯಿ ಸೇವನೆಯಿಂದ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ಅಡುಗೆಯಲ್ಲಿ ಬಳಸಿ ಕೂಡ ಸೇವನೆ ಮಾಡಬಹುದಾಗಿದೆ.
ಕೆಲವರಲ್ಲಿ ಕಣ್ಣು ಹುರಿ ಸಮಸ್ಯೆ ಕಂಡು ಬರುತ್ತದೆ ಇಂತಹ ಸಮಸ್ಯೆಗೆ ತೊಂಡೆಕಾಯಿ ಮದ್ದಾಗಿ ಕೆಲಸ ಮಾಡುತ್ತದೆ ಹೇಗೆ ಅನ್ನೋದನ್ನ ನೋಡುವುದಾದರೆ ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ನೀರಿಗೆ ಬೆರಸಿ ಅದನ್ನು ಒಂದು ಲೋಟ ರಸ ಆಗೋವರೆಗೂ ಕುದಿಸಿ, ತಯಾರಿಸಿದ ಆ ರಸವನ್ನು ದಿನಕ್ಕೆ 2-3 ಬಾರಿ ಕುಡಿಯೋದ್ರಿಂದ ಕಣ್ಣು ಉರಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಇನ್ನು ಮುಖ್ಯವಾಗಿ ಹೇಳಬೇಕೆಂದರೆ ನಮಗೆ ಯಾವುದೇ ರೀತಿಯ ಕ್ರಿಮಿ ಕೀಟಗಳು ಕಚ್ಚಿದಾಗ ತಕ್ಷಣ ತೊಂಡೆಕಾಯಿಯ ಎಲೆಯನ್ನು ಜಜ್ಜಿ ರಸ ತಗೆದು ಹಚ್ಚೋದ್ರಿಂದ ನೋವು ನಿವಾರಣೆ ಮಾಡಿಕೊಳ್ಳಬಹುದು ಹೀಗೆ ಹತ್ತಾರು ಲಾಭಗಳನ್ನು ತೊಂಡೆಕಾಯಿಯಿಂದ ಪಡೆದುಕೊಳ್ಳಬಹುದಾಗಿದೆ.