ನಿಜಕ್ಕೂ ಕೆಲವೊಮ್ಮೆ ಇಂತಹ ಸುದ್ದಿಗಳನ್ನು ನೋಡಿದಾಗ ಮಾನವೀಯತೆ ಅನ್ನೋದು ಇನ್ನು ಉಳಿದಿದೆ ಹಾಗೂ ಸಮಾಜಕ್ಕಾಗಿ ಸೇವೆ ಮಾಡುತ್ತಿರುವವರು ಇನ್ನು ಇದ್ದಾರೆ ಎಂಬುದಾಗಿ ಅನಿಸುತ್ತದೆ, ಆದ್ರೆ ಇಲ್ಲೊಬ್ಬ ಮಹಿಳೆ ತನಗೆ ೮೦ ವಯಸ್ಸು ಆಗಿದ್ದರು ಸಹ ಬಡವರಿಗೆ ಹಾಗೂ ಕೂಲಿಕಾರ್ಮಿಕರಿಗೆ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಬರಿ ಒಂದು ರುಪಾಯಿಗೆ ಒಂದು ಪ್ಲೇಟ್ ಇಡ್ಲಿ ಕೊಡಲು ಮುಂದಾಗಿರುವಂತ ಈ ಮಹಿಳೆ ಯಾರು ಇದು ಎಲ್ಲಿ ಅನ್ನೋದನ್ನ ಇಲ್ಲಿ ನೋಡೋಣ.
ಬಂಗಾರಪೇಟೆ ಕಾರಹಳ್ಳಿ ವೃತ್ತದ ನೀರಿನ ಸಂಪ್ ಬಳಿ ಇರುವ ಬೇಕರಿ ರವಿಕುಮಾರ್ ಎಂಬುವರ ತಾಯಿ ಸೆಲ್ವಮ್ಮ ೮೦ ವರ್ಷದ ಈ ಇಳಿವಯಸ್ಸಿನಲ್ಲಿ ಈ ರೀತಿಯ ಸೇವೆಯನ್ನು ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ, ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು ಒಂದು ರುಪಾಯಿಗೆ ಒಂದು ಪ್ಲೇಟ್ ಇಡ್ಲಿ ಕೊಟ್ರೆ ಇವರಿಗೆ ಏನ್ ಉಳಿಯುತ್ತದೆ ಎಂಬುದಾಗಿ ಇದಕ್ಕೆ ಈ ಅಜ್ಜಿ ಹೇಳೋದೇನು ಗೊತ್ತೇ? ನನಗೆ ಇಡ್ಲಿ ಮಾರಾಟದಿಂದ ಪಡೆಯುವ ದುಡ್ಡು ಮುಖ್ಯವಲ್ಲ. ಬಡವರು ಕೂಲಿಕಾರ್ಮಿಕರು ಯಾರೂ ಹಸಿವಿನಿಂದ ಬಳಲಬಾರದು ಎನ್ನುವುದು ನನ್ನ ಅಭಿಲಾಷೆ.
ಅಷ್ಟೇ ಅಲ್ಲದೆ ಎಲ್ಲರ ಹಸಿವು ನೀಗಿಸಲಾಗದಿದ್ದರೂ ನನ್ನಿಂದಾದಷ್ಟುಅಳಿಲು ಸೇವೆ ಮಾಡುತ್ತಿದ್ದೇನೆ. ನಿತ್ಯ ನಾವು ಎಷ್ಟುಸಂಪಾದನೆ ಮಾಡುತ್ತೇವೆ ಎನ್ನುವುದೇ ಮುಖ್ಯವಲ್ಲ. ಸಮಾಜಕ್ಕಾಗಿ ತನ್ನಿಂದಾದ ಸೇವೆ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯ ಅನ್ನೋದನ್ನ ಈ ಇಳಿ ವಯಸ್ಸಿನ ಅಜ್ಜಿ ಹೇಳುವಂತ ಮಾತಾಗಿದೆ. ಇವರು ಬೆಳಗ್ಗೆ ೭ ಗಂಟೆಗೆ ಓಲೆ ಹಚ್ಚಿದರೆ ೧೧ ಗಂಟೆಯವರೆಗೆ ಒಲೆಯನ್ನು ಆರಿಸುವುದಿಲ್ಲ. ಇವರು ಸುಮಾರು ವರ್ಷಗಳಿಂದ ಈ ಸೇವೆಯನ್ನು ನೀಡುತ್ತಿದ್ದಾರೆ.
ಅದೇನೇ ಇರಲಿ ಪ್ರತಿದಿನ ಮಂಡಿ ಕೈಕಾಲು ನೋವು ಇದ್ರೂ ಕೂಡ ಅದರ ನಡುವೆ ಮಗ ಸೊಸೆಯ ಸಹಾಯ ಪಡೆದು ಈ ಸೇವೆಯನ್ನು ಒದಗಿಸುತ್ತಾರೆ, ಇವರ ಈ ಕೆಲಸಕ್ಕೆ ನಿಜಕ್ಕೂ ಮೆಚ್ಚಲೇ ಬೇಕು.