foreign girls Marriage For auto drivers ಪಶ್ಚಾತ್ಯ ದೇಶದ ಹುಡುಗಿಯರು ನಮ್ಮ ದೇಶದ ವಾಹನ ಚಾಲಕರು ಮತ್ತು ಟೂರಿಸ್ಟ್ ಗೈಡರನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಅದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳೋಣ.
ಹಂಪಿ ಆಟೋ ಚಾಲಕನಾದಂತ ಅನಂತ ರಾಜ ಜೊತೆಗೆ ಬೆಲ್ಜಿಯಂ ಹುಡುಗಿಯಾದಂತಹ ಕೆಮಿಲ್ ಮದುವೆಯಾದರೆ. ಬೇರೆ ದೇಶದ ಹುಡುಗಿಯರು ಸಾಮಾನ್ಯವಾಗಿ ಆಟೋ ಚಾಲಕ ಅಥವಾ ಟೂರಿಸ್ಟ್ ಗೈಡ್ ರನ್ನು ಮದುವೆಯಾಗುತ್ತಾರೆ ಎಂದು ಹೇಳುತ್ತಾರೆ.
ಒಂದು ದಿನಕ್ಕೆ ಒಂದಿಷ್ಟು ಬಾಡಿಗೆ ಅಂತ ಕೊಟ್ಟರೆ ನಿಮಗೆ ಇಡಿ ಹಂಪಿಯನ್ನು ತೋರಿಸುವಂತಹವರು ಇದ್ದಾರೆ ಇವರು ಸ್ವಲ್ಪ ಪ್ರೊಫೆಷನಲ್ ಆಗಿರುತ್ತಾರೆ. ಬೆಳಗ್ಗೆಯಿಂದ ಸಂಜೆತನ ಎಷ್ಟು ಪ್ರೇಕ್ಷಣೀಯ ಸ್ಥಳವನ್ನು ತೋರಿಸಬಹುದು ಅಷ್ಟನ್ನು ತೋರಿಸುತ್ತಾರೆ. ಇವ್ರು ತುಂಬಾ ಪ್ರೊಫೆಷನಲ್ ಆಗಿ ನಡೆದುಕೊಳ್ಳುವುದರಿಂದ ಬೇರೆ ದೇಶದವರಿಗೆ ಇವರು ನಮಗೆ ಮೋಸ ಮಾಡಬಹುದು, ಜಾಸ್ತಿ ಹಣವನ್ನು ತೆಗೆದುಕೊಳ್ಳಬಹುದು ಎಂದು ಕೊಳ್ಳುತ್ತಾರೆ. ಕೆಲವರು ಮಾತ್ರ ಮೋಸ ಮಾಡುತ್ತಾರೆ ಹೆಚ್ಚಿನದಾಗಿ ಯಾರು ಮೋಸ ಮಾಡುವುದಿಲ್ಲ.
ಓದದೆ ಇರುವಂತಹ ವ್ಯಕ್ತಿಗಳು ಕೂಡ ಇಂಗ್ಲಿಷ್ನಲ್ಲಿ ತುಂಬಾ ಚೆನ್ನಾಗಿ ಅವರಿಗೆ ಜಾಗದ ವಿಶೇಷತೆಯ ಬಗ್ಗೆ ವಿವರಿಸಿತ್ತಾರೆ. ಮೊದಲೇ ಬೇರೆ ದೇಶ ಎನ್ನುವುದು ಅಭದ್ರತೆ ಇರುತ್ತದೆ ಆಗ ಚಾಲಕರು ಒಳ್ಳೆಯ ರೀತಿಯಲ್ಲಿ ನಡೆದುಕೊಂಡರೆ ಹೊರದೇಶದವರಿಗೂ ಕೂಡ ಖುಷಿಯಾಗುತ್ತದೆ.
ಅವರ ಮಧ್ಯ ಬಾಂಧವ್ಯ ಹೆಚ್ಚುತ್ತದೆ ಏಕೆಂದರೆ ಅವರು ಹೊರದೇಶದಿಂದ ಬಂದರೆ ಒಂದು ತಿಂಗಳು ವರ್ಷಗಟ್ಟಲೆ ಪ್ರವಾಸವನ್ನು ಮಾಡುತ್ತಾರೆ ಹಾಗಾಗಿ ಒಂದೇ ಜಾಗದಲ್ಲಿ ಕೂಡ ತುಂಬಾ ಸಮಯ ಇರುವುದರಿಂದ ಅವರು ವಾಹನ ಚಾಲಕರು ಮತ್ತು ಟೂರಿಸ್ಟ್ ಗೈಡರ ಸಹಾಯ ಜಾಸ್ತಿ ಪಡೆಯುತ್ತಾರೆ ಮತ್ತು ಜೊತೆ ಜಾಸ್ತಿ ಸಂಪರ್ಕ ಜಾಸ್ತಿ ಹೊಂದಿರುತ್ತಾರೆ ಆದಕಾರಣ ಚಾಲಕರನ್ನು ಮತ್ತು ಟೂರಿಸ್ಟ್ ಗೈಡರ್ ಅನ್ನು ಹೆಚ್ಚಾಗಿ ಪ್ರೀತಿಸುತ್ತಾರೆ . ಯಾರೇ ಆಗಿರಲಿ ಬೇರೆ ದೇಶದಿಂದ ಬಂದವರಿಗೆ ನಮ್ಮ ದೇಶದ ಬಗ್ಗೆ ಒಳ್ಳೆ ಅಭಿಪ್ರಾಯ ಬರುವಂತೆ ನಡೆದುಕೊಳ್ಳುವಂತದ್ದು ನಮ್ಮ ಕರ್ತವ್ಯ.