Abhishek Ambarish Engagement: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಎಂಗೇಜ್ಮೆಂಟ್ ಹಾಗೂ ಮದುವೆ ಮಾಡಿಕೊಳ್ಳುವ ಪರಂಪರೆ ಜೋರಾಗಿದೆ ಎಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ನಟಿ ಅದಿತಿ ಪ್ರಭುದೇವ ಮದುವೆ ಆಗಿದ್ದರು. ನಂತರ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಎಂಗೇಜ್ಮೆಂಟ್ ಮಾಡಿಕೊಂಡು ಅತಿ ಶೀಘ್ರದಲ್ಲೇ ಮದುವೆಯಾಗುತ್ತೇವೆ ಎಂಬುದಾಗಿ ಘೋಷಣೆ ಮಾಡುತ್ತಾರೆ. ಇದಾದ ನಂತರ ಈಗ ಅಭಿಷೇಕ್ ಅಂಬರೀಶ್ ಅವರು ಕೂಡ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.
ಹೌದು ಮಿತ್ರರೇ, ಅಭಿಷೇಕ್ ಅಂಬರೀಶ್ ಅವರು ಫ್ಯಾಷನ್ ಲೋಕದ ದಿಗ್ಗಜ ಆಗಿರುವ ಪ್ರಸಾದ್ ಬಿದ್ದಪ್ಪ ಅವರ ಮಗಳಾಗಿರುವ ಮಾಡೆಲ್ ಅವಿವಾ ಬಿದ್ದಪ್ಪ ಅವರನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಇಬ್ಬರೂ ಕೂಡ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಗಮನಿಸಬೇಕಾಗಿರುವ ಮತ್ತೊಂದು ವಿಚಾರ ಎಂದರೆ ಅಭಿಷೇಕ್ ಅಂಬರೀಶ್ ಅವರಿಗಿಂತ ಅವಿವಾ ಬಿದ್ದಪ್ಪ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರು. ಅದೇನೇ ಇರಲಿ ಇವರಿಬ್ಬರೂ ಸಂತೋಷದಿಂದಲೇ ಪ್ರೀತಿಸಿ ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಅಧಿಕೃತ ಮೂಲಗಳಿಂದ ಮುಂದಿನ ವರ್ಷದ ಮೊದಲಾರ್ಧದಲ್ಲಿ ಇವರಿಬ್ಬರು ಮದುವೆಯಾಗುವುದು ನಿಶ್ಚಿತ. ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಜೋಡೆತ್ತುಗಳಾಗಿರುವ (D boss And Yash) ಡಿ ಬಾಸ್ ಹಾಗೂ ಯಶ್ ಇಬ್ಬರು ಕೂಡ ಆಗಮಿಸಿದ್ದರು ಆದರೆ ಅಂಬರೀಶ್ ಕುಟುಂಬಕ್ಕೆ ಆಪ್ತರಾಗಿದ್ದ ಕಿಚ್ಚ ಸುದೀಪ್ ಎಲ್ಲೂ ಕೂಡ ಕಂಡು ಬಂದಿರಲಿಲ್ಲ. ಅವರು ಬರದಕ್ಕೆ ವೈಯಕ್ತಿಕ ಕಾರಣಗಳಿರಬಹುದು ಆದರೆ ಬಾರದೆ ಇದ್ದರೂ ಕಿಚ್ಚ ಮಾಡಿರುವ ಈ ಕಾರ್ಯ ಈಗ ಎಲ್ಲಾ ಕಡೆಯಲ್ಲಿ ಮೆಚ್ಚುಗೆ ಒಳಗಾಗಿದೆ.
ಹೌದು ಮಿತ್ರರೇ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿಷೇಕ್ ಅಂಬರೀಶ್ ಅವರಿಗೆ ಕಾಲ್ ಮಾಡಿ ನಿಶ್ಚಿತಾರ್ಥದ ಶುಭಾಶಯಗಳು ಕೋರಿದ್ದಾರೆ. ನವ ಜೋಡಿಗಳಿಗೆ ಇಬ್ಬರಿಗೂ ಕೂಡ ಬರೋಬ್ಬರಿ 25 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. (Kiccha Sudeep) ಕಿಚ್ಚ ಸುದೀಪ್ ಅವರ ಈ ಒಳ್ಳೆಯ ಕಾರ್ಯಕ್ಕೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಶುಭ ಹಾರೈಸಿ.