ಹೆಣ್ಣು ಮಕ್ಕಳು ಹುಟ್ಟಿದ ಕೂಡಲೇ ಭಾಗ್ಯ ಲಕ್ಷ್ಮಿ ಎಂದು ಖುಷಿಯಿಂದ ಹೆಣ್ಣು ಮಕ್ಕಳನ್ನು ಸಾಕುತ್ತಾರೆ ಅವಳ ಮನೆಯೇ ಸ್ವರ್ಗಕಿಂತ ಹೆಚ್ಚಾಗಿ ಪ್ರೀತಿಯಿಂದ ಎಲ್ಲ ತಂದೆ ತಾಯಿಗಳು ಸಾಕಿ ಸಲಹಿ ಬೆಳೆಸುತ್ತಾರೆ ಅವಳಿಗೆ ಯಾವುದನ್ನು ಸಹ ಕೊರತೆ ಬಾರದಂತೆ ಸಾಕಿ ಬೆಳೆಸುತ್ತಾರೆ ಕೆಲವೊಮ್ಮೆ ತಂದೆ ತಾಯಿಗಳು ತಮ್ಮ ಜವಾಬ್ದಾರಿ ಯನ್ನು ಪೂರೈಸುವುದಕ್ಕಾಗಿ ಮಗಳಿಗೆ ವಿವಾಹ ಮಾಡುವ ಸಂದರ್ಭದಲ್ಲಿ ಎಡವಿ ಬೀಳುತ್ತಾರೆ ಇದು ಅನೇಕ ತಂದೆ ತಾಯಿಯ ಮೋಸ ಹೋಗುತ್ತಾರೆ ಮದುವೆ ಅನ್ನೋದು ಸುಂದರವಾದ ಬಂಧ ಆದರೆ ಕೆಲವು ಹೆಣ್ಣು ಮಕ್ಕಳಿಗೆ ಅದೇ ಬದುಕಿನಲ್ಲಿ ದುರಂತವಾಗಿ ಇರುತ್ತದೆ

ಹೆಣ್ಣು ಮದುವೆಗು ಮುನ್ನ ಅನೇಕ ಕನಸ್ಸುಗಳನ್ನು ಹೊತ್ತು ಹಾಗೆಯೇ ಮನೆಯ ಮರ್ಯಾದೆ ಉಳಿಸುವ ಮತ್ತು ಮುಂದಿನ ಜವಬ್ದಾರಿಯನ್ನು ಹೊತ್ತು ಹಸೆ ಮಣೆಗೆ ಎರುತ್ತಾಳೆ ಆದರೆ ಮದುವೆ ಆದ ಹೆಣ್ಣು ಮಕ್ಕಳಿಗೆ ಗಂಡನ ಮನೆಯಲ್ಲಿ ಸ್ವರ್ಗದ ಅನುಭವ ಆಗುವ ಬದಲು ನರಕದ ಅನುಭವವನ್ನು ಎದುರಿಸುತ್ತಾರೆ ಅನೇಕ ಹೆಣ್ಣು ಮಕ್ಕಳು ಮದುವೆ ನಂತರವೇ ಆತ್ಮ ಹ ತ್ಯೆಯನ್ನು ಮಾಡಿಕೊಂಡರೆ ಕೆಲವು ಹೆಣ್ಣು ಮಕ್ಕಳಿಗೆ ಗಂಡನೇ ರಾಕ್ಷಸನಾಗಿ ಇರುತ್ತಾನೆ ನಾವು ಈ ಲೇಖನದ ಮೂಲಕ ರಶ್ಮಿಗೆ ಗಂಡ ಮೋಹನ ಕುಮಾರ್ ನೀಡಿದ ಕಿರುಕುಳದ ಬಗ್ಗೆ ತಿಳಿದುಕೊಳ್ಳೋಣ.

ಹೆಣ್ಣು ಮಕ್ಕಳನ್ನು ಸಾಕಿ ಸಲುಹಿ ನಂತರ ಮದುವೆ ವಿಚಾರದಲ್ಲಿ ಅನೇಕ ತಂದೆ ತಾಯಿ ಗಳು ಎಡವಿ ಬೀಳುತ್ತಾರೆ ಸರಿಯಾಗಿ ವಿಚಾರಿಸದೆ ಹೆಣ್ಣು ಮಕ್ಕಳು ಕಷ್ಟಕ್ಕೆ ಬೀಳುತ್ತಾರೆ ಹಾಗೆಯೇ ಪ್ರತಿ ದಿನ ನೋವು ಸಂಕಟ ಎದುರಿಸುತ್ತಾ ಬದುಕುತ್ತಾರೆ ಪ್ರತಿ ತಂದೆ ತಾಯಿಯು ಸಹ ಮಗಳನ್ನು ಮದುವೆ ಮಾಡುವ ಸಮಯದಲ್ಲಿ ಗಂಡಿನ ಮನೆಯ ಬಗ್ಗೆ ಸರಿಯಾಗಿ ವಿಚಾರಿಸಿ ಮದುವೆ ಮಾಡಬೇಕು ಒಮ್ಮೆ ಮದುವೆ ಮಾಡಿದರೆ ಜೀವನ ಮುಗಿಯಿತು ದಾವಣಗೆರಿಯಲ್ಲಿ ಪತ್ನಿಯನ್ನು ಕೊಂದು ಕಾಡಿನಲ್ಲಿ ಹೂತು ಇಟ್ಟಿದ್ದ

ಸುಮಾರು ನಲವತ್ತೆರಡು ದಿನದ ಬಳಿಕ ಆಕೆಯ ದೇಹ ಸಿಗುತ್ತದೆ. ಹಾಗೆಯೇ ಆಕೆ ಆರು ತಿಂಗಳ ಗರ್ಭಿಣಿ ಹುಡುಗಿಯ ಮನೆ ದಾವಣಗೆರೆಯ ಐಗುರು ಗ್ರಾಮದ ಲೋಕೇಶಪ್ಪ ಹಾಗೂ ರತ್ನಮ್ಮ ದಂಪತಿಯ ಕೊನೆಯ ಪುತ್ರಿ ಹಾಗೆಯೇ ಹುಡುಗನ ಊರು ಚೆನ್ನಗಿರಿ ತಾಲೂಕಿನ ಗಂಗಕೊಂಡನ ಹಳ್ಳಿಯವನು ಅವರಿಬ್ಬರೂ ಸಹ ಏಪ್ರಿಲ್ ಹದಿನಾರ ನೇ ತಾರಿಕಿಗೆ ಮದುವೆ ಆಗಿದ್ದರು ಹಾಗೆಯೇ ಅರೇಂಜ್ ಮ್ಯಾರೇಜ್ ಆಗಿತ್ತು ತಂದೆ ತಾಯಿ ಹುಡುಗನನ್ನು ನೋಡಿ ಮದುವೆ ಮಾಡಿದ್ದರು .

ರಶ್ಮಿ ಅವರಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸಾಗಿತ್ತು ರಶ್ಮಿ ಗೆ ಮದುವೆ ಸಂದರ್ಭದಲ್ಲಿ ಯಾವುದನ್ನು ಸಹ ಕಡಿಮೆ ಮಾಡಿರಲಿಲ್ಲ ಬೇಕಾದಷ್ಟು ವರದಕ್ಷಿಣೆಯನ್ನು ಕೊಟ್ಟಿದ್ದರು ಹಾಗೂ ಬಂಗಾರವನ್ನು ಸಹ ಹಾಕಿದ್ದರು ಹಾಗೆಯೇ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು ಮೋಹನ ಕುಮಾರ್ ಎನ್ನುವ ಹುಡುಗನಿಗೆ ಮದುವೆ ಮಾಡಿ ಕೊಟ್ಟಿದ್ದರು ಮದುವೆ ಆದ ಆರಂಭದಲ್ಲಿ ಎಲ್ಲವೂ ಚೆನ್ನಾಗಿ ಇತ್ತು ರಶ್ಮಿ ಒಂದು ತಿಂಗಳಿಗೆ ಗರ್ಭಿಣಿ ಆಗಿದ್ದಳು

ಗರ್ಭಿಣಿ ಆದ ಬಳಿಕ ಹೆಂಡತಿ ಮೇಲೆ ಅನುಮಾನ ಶುರು ಆಗುತ್ತದೆ ಯಾರಾದರು ಜೊತೆ ಮಾತನಾಡಿದರೆ ಅನುಮಾನ ಫೋನ್ ನಲ್ಲಿ ಮಾತನಾಡಿದರೆ ಅನುಮಾನ ಗಂಡ ಮೋಹನ ಕುಮಾರ್ ಮಾಡುತಿದ್ದ ಮನೆಯಿಂದ ಹೊರಗಡೆ ಹೋದರು ಸಹ ಅನುಮಾನ ಮಾಡುತಿದ್ದ ರಶ್ಮಿ ನೋಡಲು ಬಹಳ ಸುಂದರವಾಗಿ ಇದ್ದಳು ಹಾಗಾಗಿ ಅನುಮಾನ ಪಡುತಿದ್ದ ಹಾಗೆಯೇ ವಿಪರೀತವಾಗಿ ಅನುಮಾನ ಪಡುತಿದ್ದ ಮದುವೆ ಆದ ಕೆಲವೇ ತಿಂಗಳಿಗೆ ಎರಡು ಮನೆಯವರಿಗೆ ಈ ವಿಚಾರ ತಿಳಿದು ಬರುತ್ತದೆ ರಾಜಿ ಸಂಧಾನ ಮಾಡಿ ಮತ್ತೆ ಕಳುಹಿಸಿ ಕೊಟ್ಟಿರುತ್ತಾರೆ ತಂದೆ ತಾಯಿ ಜೊತೆ ನನ್ನ ಹತ್ತಿರ ಸಂಸಾರ ಮಾಡಲು ಆಗುವುದಿಲ್ಲ ಎಂದು ಸಹ ಹೇಳಿದ್ದಳು.

ವಿಪರೀತ ಅನುಮಾನ ದಿಂದ ಒಂದು ತಿಂಗಳ ಮುಂಚೆಯೇ ರಶ್ಮಿಯನ್ನು ಸಾಯಿಸಬೇಕು ಎಂದು ಪ್ಲಾನ್ ಮಾಡಿದ್ದನು ಹಾಗಾಗಿ ಶಿಗ್ಲಿ ಪೂರಾ ಎನ್ನುವ ಊರಿನಲ್ಲಿ ಒಂದು ಹಳ್ಳದ ರೀತಿಯ ಕಣಿವೆ ಇದೆ ಅಲ್ಲಿ ಹೋಗಿ ಯಾರಿಗೂ ಕಾಣದ ರೀತಿಯಲ್ಲಿ ಗುಂಡಿಯನ್ನು ತೆಗೆದು ಬರುತಿದ್ದ ದಟ್ಟ ಕಾಡಿನಲ್ಲಿ ಗಂಡಿಯನ್ನು ತೆಗೆದು ಬರುತಿದ್ದ ಅದಾದ ನಂತರ ಮನೆಗೆ ಬರುತಿದ್ದ ನಿತ್ಯವೂ ಕೂಡ ಜಗಳ ಮಾಡುತಿದ್ದ ರಶ್ಮಿ ಎಲ್ಲವನ್ನೂ ಸಹಿಸಿಕೊಂಡು ಹೋಗುತಿದ್ದಳು ಹಾಗೂ ಅವಳು ಆರು ತಿಂಗಳ ಗರ್ಭಿಣಿ ಆಗಿ ಇದ್ದಳು ಒಂದು ದಿನ ಮನೆಯಲ್ಲಿ ಯಾರೂ ಇರುವುದು ಇಲ್ಲ ಆ ಸಂದರ್ಭದಲ್ಲಿ ಹೆಂಡತಿಯ ಕತ್ತನ್ನು ಹಿಸುಕಿ ಸಾಯಿಸಿದ್ದ

ತನ್ನ ಕಾರಿನಲ್ಲಿ ಆಕೆಯ ದೇಹವನ್ನು ತೆಗೆದುಕೊಂಡು ಹೋಗಿದ್ದನ್ನು ನೇರವಾಗಿ ಶಿಂಗ್ಲಿ ಪುರದ ಕಣಿವೆಗೆ ಹೋಗುತ್ತಾನೆ ಅಲ್ಲಿ ಮೊದಲೇ ಗುಂಡಿಯನ್ನು ತೋಡಿದ್ದ ಗುಂಡಿಯ ಒಳಗಡೆ ಆಕೆಯ ದೇಹವನ್ನು ಮುಚ್ಚಿ ಸಿದ ಮನೆಗೆ ಮನೆಗೆ ಬರುತ್ತಾನೆ ಹಾಗೆಯೇ ಮಧ್ಯ ರಾತ್ರಿ ಎರಡು ಗಂಟೆಗೆ ರಶ್ಮಿ ಮನೆಯವರಿಗೆ ಫೋನ ಮಾಡಿದ್ದನು ಹಾಗೆಯೇ ಮಗಳು ಕಾಣುತ್ತಿಲ್ಲ ಎಂದು ಹೇಳಿದ್ದನು ತಂದೆ ತಾಯಿಗಳಿಗೆ ಸಹಜವಾಗಿ ಆತಂಕ ಆಗುತ್ತದೆ.

ಪೋಷಕರು ಆರಂಭದಲ್ಲಿ ರಶ್ಮಿ ಆತ್ಮ ಹತ್ಯೆ ಮಾಡಿರಬಹುದ ಎಂದು ಯೋಚಿಸುತ್ತಾರೆ ಗಂಡ ನ ಕಾಟ ಸಹಿಸಲಾರದೆ ಬೇರೆ ಕಡೆ ಹೋಗಿರಬಹುದು ಎಂದು ಸಹ ಯೋಚನೆ ಮಾಡುತ್ತಾರೆ ಊರಿನವರು ಸಹ ಪ್ರಶ್ನೆಯನ್ನು ಮಾಡುತಿದ್ದರು ಮೋಹನ ಕುಮಾರ್ ಅವರು ಹೊಸ ಕತೆಯನ್ನು ಹೇಳುತ್ತಾನೆ ಆಕೆ ಪ್ರತಿ ದಿನ ಯಾರದ್ದೋ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಳು ಆತನ ಜೊತೆಗೆ ಓಡಿ ಹೋಗಿದ್ದಾಳೆ ಎಂದು ಹೇಳಿದ್ದನು ಊರಿನ ದೇವರಿಗೆ ಆಣೆ ಸಹ ಮಾಡಿದ್ದನು ನಾನು ಆಕೆಗೆ ಎನು ಸಹ ಮಾಡಿಲ್ಲ ಅವಳು ಇನ್ನೊಬ್ಬರ ಜೊತೆ ಓಡಿ ಹೋಗಿದ್ದಾಳೆ ಎಂದು ಹೇಳುತ್ತಾನೆ ಸರಿಯಾಗಿ ಕತೆ ಕಟ್ಟಿ ನಂಬಿಸುತ್ತಾನೆ.

ಸ್ವಲ್ಪ ದಿನ ಆ ಊರಿನಲ್ಲಿ ಇದೆ ವಿಚಾರ ಸಹ ಮುಂದುವರಿಯುತ್ತದೆ ಆದರೆ ರಶ್ಮಿ ಪೋಷಕರಿಗೆ ಅನುಮಾನ ಇದ್ದೇ ಇರುತ್ತದೆ ಹಾಗಾಗಿ ಪೊಲೀಸರಿಗೆ ದೂರನ್ನು ಕೊಡುತ್ತಾರೆ ಮೋಹನ್ ಕುಮಾರ್ ಅವರನ್ನು ವಿಚಾರಣೆ ಮಾಡುತ್ತಾರೆ ಮೋಹನ್ ಕುಮಾರ್ ಪೊಲೀಸ್ ಅವರ ಬಳಿ ಸಹ ಅದೆ ಕತೆಯನ್ನು ಹೇಳುತ್ತಾನೆ ಪೊಲೀಸ್ ಅವರು ಸ್ವಲ್ಪ ದಿನ ಕಾಲ ಸುಮ್ಮನೆ ಇರುತ್ತಾರೆ ಈತನ ಚಲನ ವಲನ ಎಲ್ಲವನ್ನೂ ನೋಡುತ್ತಾರೆ ಈತನ ಪ್ರತಿ ನಡೆಯು ಸಹ ಅನುಮಾನವನ್ನು ಹುಟ್ಟಿಸುತ್ತದೆ ಅವನ ಹೇಳಿಕೆಯಲ್ಲಿ ಆತ್ಮ ವಿಶ್ವಾಸ ಇರುವುದು ಇಲ್ಲ ಸರಿಯಾಗಿ ಪೊಲೀಸ್ ತನಿಖೆ ಮಾಡಿದಾಗ ಎಲ್ಲವನ್ನೂ ಹೇಳುತ್ತಾನೆ ನಂತರ ಕಾಡಿಗೆ ಹೋದ ಸಂದರ್ಭದಲ್ಲಿ ಆಕೆಯ ದೇಹ ಸಹ ಸಿಗುತ್ತದೆ ಹೀಗೆ ಅಮಾಯಕ ಹೆಣ್ಣನ್ನು ವಿವಾಹ ಎಂಬ ಬಂಧ ಕೊಲೆಯವರೆಗೆ ಹೋಯಿತು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!