ಅಡುಗೆಯಲ್ಲಿ ಹಸಿ ಕೊಬ್ಬರಿಯನ್ನು ಬಳಸಿ ಅನೇಕ ಬಗೆಯ ರುಚಿಕರವಾದ ಪದಾರ್ಥವನ್ನು ಮಾಡುತ್ತಾರೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೆಯೇ ನಮ್ಮ ಅರೋಗ್ಯದ ಮೇಲೆ ಲಾಭದಾಯಕವಾದ ಪರಿಣಾಮವನ್ನು ಬೀರುತ್ತದೆ ಹಸಿ ಕೊಬ್ಬರಿಯನ್ನು ಸೇವನೆ ಮಾಡುವ ಮೂಲಕ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೆಯೇ ತೆಂಗಿನ ಎಣ್ಣೆ ಮತ್ತು ಹಸಿ ಕೊಬ್ಬರಿ ಬಳಕೆಯಿಂದ ಚರ್ಮದ ಆರೋಗ್ಯ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು

ಹಾಗೆಯೇ ಹಸಿ ಕೊಬ್ಬರಿ ಆರೋಗ್ಯಯುತ ಕೊಬ್ಬನ್ನು ಹೊಂದಿದೆ ಹಾಗಾಗಿ ಕೂದಲನ್ನು ಪೋಷಿಸುತ್ತದೆ ಮತ್ತು ಅಗತ್ಯವಾದ ತೇವಕಾರಕ ಪೋಷಣೆಯನ್ನು ಒದಗಿಸುತ್ತದೆ ಇದರಿಂದ ನಮ್ಮ ಕೂದಲಿನ ಶಕ್ತಿಯನ್ನು ಒದಗಿಸುತ್ತದೆ .ಹಸಿ ಕೊಬ್ಬರಿ ಕೇವಲ ರುಚಿಗೆ ಅಷ್ಟೇ ಅಲ್ಲದೆ ಅನೇಕ ಪೋಷಕಾಂಶವನ್ನು ಒಳಗೊಂಡಿದೆ ಹಾಗಾಗಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ ಇದರಿಂದ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತದೆ ನಾವು ಈ ಲೇಖನದ ಮೂಲಕ ಹಸಿ ಕೊಬ್ಬರಿಯ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿದಿನ ಅಡುಗೆಯಲ್ಲಿ ಹಸಿ ಕೊಬ್ಬರಿಯನ್ನು ಬಳಸುತ್ತೇವೆ ಆದರೆ ಆರ ಪ್ರಯೋಜನ ತುಂಬಾ ಜನರಿಗೆ ತಿಳಿದು ಇರುವುದು ಇಲ್ಲ ಕೊಬ್ಬರಿ ಚಟ್ನಿ ಕೊಬ್ಬರಿ ಹಲ್ವಾ ಹೀಗೆ ವಿಧ ವಿಧವಾದ ಅಡುಗೆಯನ್ನು ಮಾಡುತ್ತಾರೆ ಕೆಲವರು ಹಸಿ ಕೊಬ್ಬರಿಯನ್ನು ಹಾಗೆಯೇ ತಿನ್ನುತ್ತಾರೆ ಹಸಿ ಕೊಬ್ಬರಿ ಕೇವಲ ರುಚಿಗೆ ಅಷ್ಟೇ ಅಲ್ಲದೆ ಅನೇಕ ಪೋಷಕಾಂಶವನ್ನು ಒಳಗೊಂಡಿದೆ ಹಸಿ ಕೊಬ್ಬರಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ಸಿಗುತ್ತದೆ ಹಸಿ ಕೊಬ್ಬರಿಯನ್ನು ನಿತ್ಯ ಸೇವನೆ ಮಾಡುತ್ತಿದ್ದರೆ

ನಮ್ಮ ದೇಹಕ್ಕೆ ಪೋಷಕಾಂಶಗಳು ಅಷ್ಟೇ ಅಲ್ಲದೆ ಹಲವು ಅನಾರೋಗ್ಯದ ಸಮಸ್ಯೆ ಗಳು ನಿವಾರಣೆ ಆಗುತ್ತದೆ. ಹಸಿ ಕೊಬ್ಬರಿಯನ್ನು ಯಾವುದೋ ಒಂದು ವಿಧದಲ್ಲಿ ಸೇವನೆ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ದೇಹಕ್ಕೆ ಇನ್ಸ್ಪೆಕ್ಷನ ಬರುವುದು ಇಲ್ಲ ಹಾಗೆಯೇ ಕೊಬ್ಬರಿಯಲ್ಲಿ ಆಂಟಿ ವೈರಸ್ ಆಂಟಿ ಬ್ಯಾಕ್ಟೀರಿಯಾ ಆಂಟಿ ಪ್ಯಾರಾಸೈಟ್ ಗುಣಗಳು ಕೊಬ್ಬರಿಯಲ್ಲಿ ಹೇರಳವಾಗಿ ಇರುತ್ತದೆ ಹಾಗೆಯೇ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳಿಂದ ರಕ್ಷಣೆ ಸಿಗುತ್ತದೆ .

ಕ್ರೀಡಾ ಪಟುಗಳು ಹಾಗೂ ನಿತ್ಯ ವ್ಯಾಯಾಮ ಮಾಡುವರಿಗೆ ದೇಹ ದಂಡಿಸುವರಿಗೆ ಹಸಿ ಕೊಬ್ಬರಿ ತುಂಬಾ ಉಪಯುಕ್ತ ಅಥವಾ ಪ್ರಯೋಜನಕಾರಿಯಾಗಿದೆ ಹಸಿ ಕೊಬ್ಬರಿ ತಿನ್ನುವುದರಿಂದ ಶಕ್ತಿ ವೇಗವಾಗಿ ಸಿಗುತ್ತದೆ ಇದರಿಂದ ಹೆಚ್ಚು ಕೆಲಸ ಮಾಡಿದರು ಆಯಾಸ ಆಗುವುದು ಇಲ್ಲ ಜೀರ್ಣ ಸಮಸ್ಯೆಗಳು ದೂರ ಆಗುತ್ತದೆ ಜೀರ್ಣಾಂಗ ವ್ಯೂಹ ಶುದ್ದ ಆಗುತ್ತದೆ ಗ್ಯಾಸ್ ಎಸಿಡಿಟಿ ಮಲಬದ್ದತೆ ಸಮಸ್ಯೆಗಳು ಬರುವುದು ಇಲ್ಲ ತಿಂದ ಆಹಾರ ಸರಿಯಾಗಿ ಜೀರ್ಣ ಆಗುತ್ತದೆ ಮಧುಮೇಹ ರೋಗಕ್ಕೆ ಒಳಗಾದವರು ಹಸಿ ಕೊಬ್ಬರಿ ತಿನ್ನುವುದು ಉತ್ತಮ ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ ಇದರಿಂದ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತದೆ.

ಹಲವು ವಿಧದ ಕ್ಯಾನ್ಸರ್ ಗಳಿಗೆ ವ್ಯತಿರಿಕ್ತವಾಗಿ ಹೋರಾಡುವ ಔಷಧೀಯ ಗುಣಗಳು ಹಸಿ ಕೊಬ್ಬರಿಯಲ್ಲಿ ಇರುತ್ತದೆ ಹಸಿ ಕೊಬ್ಬರಿಯಲ್ಲಿನ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ಕಣಗಳ ವೃದ್ಧಿಯನ್ನು ತಡೆಯುತ್ತದೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆಯ ಕೊಲೆಸ್ಟ್ರಾಲ್ ತಯಾರು ಆಗುತ್ತದೆ ಇದರಿಂದ ಹೃದಯಕ್ಕೆ ಸಂಭಂದಿಸಿದ ಸಮಸ್ಯೆಗಳು ಬರುವುದು ಇಲ್ಲ .

ರಕ್ತ ಸಂಚಾರ ಉತ್ತಮಗೊಳ್ಳುತ್ತದೆ ಹಸಿ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಿನರಲ್ಸ್ ಗಳು ಇರುತ್ತದೆ ಹಸಿ ಕೊಬ್ಬರಿ ಸೇವನೆ ಮಾಡುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆ ಆಗುವುದನ್ನು ತಪ್ಪಿಸುತ್ತದೆ ರಕ್ತ ನಾಳಗಳ ಅಡೆತಡೆಗಳು ನಿವಾರಣೆ ಆಗುತ್ತದೆ ಥೈರಾಯ್ಡ್ ಸಮಸ್ಯೆ ಇರುವರು ಹಸಿ ಕೊಬ್ಬರಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಮೂತ್ರ ಕೋಶದ ಸಮಸ್ಯೆ ಇರುವರಿಗು ಸಹ ಹಸಿ ಕೊಬ್ಬರಿ ಒಳ್ಳೆಯದು ಮೂತ್ರ ಸುಸೂತ್ರವಾಗಿ ಹೊರಗೆ ಹೋಗುತ್ತದೆ ಹಾಗೆಯೇ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ ಅಧಿಕ ತೂಕದ ಸಮಸ್ಯೆ ಇರುವರು ಹಸಿ ಕೊಬ್ಬರಿಯನ್ನು ಆಹಾರದಲ್ಲಿ ಸೇವನೆ ಮಾಡಬೇಕು ಇದರಿಂದ ಅಧಿಕ ತೂಕ ಕಡಿಮೆ ಆಗುತ್ತದೆ ಹಸಿ ಕೊಬ್ಬರಿಯಿಂದ ಚರ್ಮ ಹಾಗೂ ಕೂದಲಿನ ಆರೋಗ್ಯ ಚೆನ್ನಾಗಿ ಇರುತ್ತದೆ ಹೀಗೆ ಹಸಿ ಕೊಬ್ಬರಿ ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಅನೇಕ ಖಾಯಿಲೆಯಿಂದ ರಕ್ಷಣೆ ಮಾಡುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!