ನವೆಂಬರ್ ತಿಂಗಳಿನಲ್ಲಿ ಹುಟ್ಟಿದವರನ್ನು ಅತ್ಯಂತ ಅದೃಷ್ಟವಂತರು ಹಾಗೂ ಮುಂದಿನ ದಿನಗಳಲ್ಲಿ ಶ್ರೀಮಂತರಾಗುತ್ತಾರೆ ಮತ್ತು ಅವರು ಬುದ್ಧಿವಂತರಾಗಿರುತ್ತಾರೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಈ ತಿಂಗಳಿನಲ್ಲಿ ಹುಟ್ಟಿದವರಿಗೆ ಗುರುವಿನ ಅನುಗ್ರಹವಿರುತ್ತದೆ. ನವೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
ಮೊದಲನೇದಾಗಿ ನವೆಂಬರ್ ತಿಂಗಳಿನಲ್ಲಿ ಜನಿಸಿದವರು ಸಾಕಷ್ಟು ಕ್ರಿಯಾಟಿವ್ ಆಗಿರುತ್ತಾರೆ ಹಾಗೂ ಯಾವತ್ತೂ ಕೂಡ ಬಾಕ್ಸ್ ವಿಚಾರಗಳನ್ನೇ ಯೋಚಿಸುತ್ತಾರೆ. ಅವರು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಾರೆ ಹೀಗಾಗಿ ಭವಿಷ್ಯವನ್ನು ಹೇಗೆ ಇನ್ನಷ್ಟು ಉತ್ತಮಗೊಳಿಸಲು ಸಾಧ್ಯ ಎಂಬುದರ ಕುರಿತಂತೆ ಸೃಜನಶೀಲರಾಗಿ ಯೋಚಿಸುತ್ತಾರೆ.
ಸಾಮಾನ್ಯವಾಗಿ ಬೇರೆಯವರು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಮೂರು ನಾಲ್ಕು ಜನರ ಬಳಿ ಹೋಗಿ ಅದರ ಸಾಧಕ ಬಾಧಕಗಳ ಕುರಿತಂತೆ ಯೋಚಿಸುತ್ತಾರೆ ಆದರೆ ನವೆಂಬರ್ ತಿಂಗಳಿನಲ್ಲಿ ಜನಿಸಿದವರು ಸಾಕಷ್ಟು ಬುದ್ಧಿವಂತರಾಗಿರುತ್ತಾರೆ. ಹೀಗಾಗಿ ಅವರು ತೆಗೆದುಕೊಳ್ಳುವ ನಿರ್ಧಾರದ ಕುರಿತಂತೆ ಬೇರೆಯವರ ಅಭಿಪ್ರಾಯದ ಅಗತ್ಯತೆ ಅವರಿಗೆ ಇರುವುದಿಲ್ಲ. ಹೀಗಾಗಿ ಅವರು ಸಾಕಷ್ಟು ಜನರಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ಕೆಲವೇ ಕೆಲವು ಸ್ನೇಹಿತರೊಂದಿಗೆ ಮಾತ್ರ ಅವರು ಸಂಪರ್ಕದಲ್ಲಿ ಇರುತ್ತಾರೆ.
ಕೇವಲ ಬುದ್ಧಿವಂತಿಕೆ ಹಾಗೂ ಸಂವಹನದಲ್ಲಿ ಮಾತ್ರವಲ್ಲದೆ ನವೆಂಬರ್ ತಿಂಗಳಲ್ಲಿ ಜನಿಸಿದವರು ನೋಡಲು ಕೂಡ ಬೇರೆಯವರಿಗೆ ಹೋಲಿಸಿದರೆ ಸಾಕಷ್ಟು ಆಕರ್ಷಕರಾಗಿರುತ್ತಾರೆ. ಯಾವುದೇ ವಿಚಾರಗಳಲ್ಲಿ ಯಶಸ್ವಿಯಾಗುವ ಕುರಿತಂತೆ ಅವರ ಯೋಚನೆಗಳು ಸದಾ ಕಾಲ ಸರಿಯಾಗಿಯೇ ಇರುತ್ತದೆ. ಇದೇ ಗೆಳೆಯರೇ ನವೆಂಬರ್ ತಿಂಗಳಿನಲ್ಲಿ ಜನಿಸಿರುವ ಅವರ ವಿಶೇಷವಾದ ಗುಣ ಸ್ವಭಾವಗಳು ಹಾಗೂ ಶಕ್ತಿಯಾಗಿದೆ ಎಂದು ಹೇಳಬಹುದಾಗಿದೆ.