ನವಂಬರ್ ತಿಂಗಳಿನಲ್ಲಿ ಮೀನ ರಾಶಿಯವರು 90 ಪ್ರತಿಶತ ಶುಭಫಲವನ್ನೇ ಕಾಣಲಿದ್ದಾರೆ ಎಂಬುದಾಗಿ ತಿಂಗಳಿನ ರಾಶಿ ಭವಿಷ್ಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲೆಕ್ಕಚಾರ ಆಗಬಹುದು. ರಾಶಿಗೆ ಅಧಿಪತಿ ಆಗಿರುವ ಗುರುವು ಕೂಡ ತನ್ನ ಆಶೀರ್ವಾದವನ್ನು ಮೀನ ರಾಶಿಯವರ ಮೇಲೆ ಇಟ್ಟಿದ್ದಾನೆ.

ನಿಮ್ಮ ಕಣ್ಣಿಗೆ ಗೋಚರವಾಗುವಂತಹ ಹಾಗೂ ನಿಮ್ಮ ಬೆನ್ನ ಹಿಂದೆ ನಿಮ್ಮ ವಿರುದ್ಧ ಮಸಾಲತ್ತು ಮಾಡುವಂತಹ ಎಲ್ಲಾ ಶತ್ರುಗಳು ಕೂಡ ನಿಮ್ಮ ಎದುರು ಸೋಲನ್ನು ಅನುಭವಿಸಿ ಅವರ ಕಾರ್ಯತಂತ್ರಗಳೆಲ್ಲವೂ ಕೂಡ ವಿಫಲವಾಗಲಿವೆ.

ಇನ್ನೂ ಒಂದು ವೇಳೆ ಯಾವುದೇ ಆಸ್ತಿ ವಿವಾದಗಳು ಇದ್ದರೆ ಅದನ್ನು ನೀವು ನಿಮ್ಮ ಎದುರು ಇರುವವರ ಜೊತೆಗೆ ಕುಳಿತು ಬಗೆಹರಿಸಿಕೊಳ್ಳಬೇಕಾದ ಅವಶ್ಯಕತೆಗಳು ಹಾಗೂ ಅವಕಾಶಗಳು ನಿಮಗೆ ದೊರಕುತ್ತವೆ. ಇನ್ನು ನಿಮ್ಮ ಒಡಹುಟ್ಟಿದವರು ಹಾಗೂ ನಿಮ್ಮನ್ನು ಹೆತ್ತವರ ಜೊತೆಗೆ ಇರುವಂತಹ ಜಗಳಗಳು ಕೂಡ ಈ ಸಂದರ್ಭದಲ್ಲಿ ಕುಳಿತುಕೊಂಡು ಬಗೆಹರಿಸಿಕೊಳ್ಳಬಹುದಾಗಿದೆ. ಈ ತಿಂಗಳು ನಿಮಗೆ ಸುಖ ಶಾಂತಿ ನೆಮ್ಮದಿ ದೊರಕುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರಿಗೂ ಕೂಡ ಉತ್ತಮ ಫಲಿತಾಂಶ ಸಿಗಲಿದ್ದು ಸೂರ್ಯಗ್ರಹಣದ ಕಾರಣದಿಂದಾಗಿ ಸರ್ಕಾರಿ ಕೆಲಸದಲ್ಲಿ ಇದ್ದವರು ಸ್ವಲ್ಪ ಕೊಂಚಮಟ್ಟಿಗೆ ಜಾಗೃತೆವಹಿಸುವುದು ಉತ್ತಮ. ಒಂದು ವೇಳೆ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಎದುರು ಕಾಣುತ್ತಿದ್ದರೂ ಕೂಡ ನಿಮ್ಮ ರಾಶಿಯ ಅಧಿಪತಿ ಆಗಿರುವ ಗುರುವಿನ ಅಧಿದೇವತೆಗಳಾಗಿರುವ ಸಾಯಿಬಾಬಾ ಹಾಗೂ ರಾಘವೇಂದ್ರ ಸ್ವಾಮಿಯ ಪೂಜೆ ಮಾಡುವುದು ಉತ್ತಮ. ಇದರಿಂದಾಗಿ ಬಹುತೇಕ ನಿಮ್ಮ ಜೀವನದಲ್ಲಿರುವ ಕೊಂಚಮಟ್ಟಿಗಿನ ಸಮಸ್ಯೆಗಳಿಂದ ಕೂಡ ನೀವು ಹೊರ ಬರಬಹುದಾಗಿದೆ.

ಇನ್ನು ನಿಮ್ಮ ಚಿಕ್ಕ ವಯಸ್ಸಿನ ಗುರುಗಳಿಗೂ ಕೂಡ ನೀವು ಏನನ್ನಾದರೂ ಸಹಾಯ ಮಾಡಬಹುದು ಹಾಗೂ ಆನೆಯ ಮಾವುತರಿಗೂ ಕೂಡ ಅವರ ಜೀವನಕ್ಕೆ ಬೇಕಾಗುವಂತಹ ಸಾಮಗ್ರಿಗಳನ್ನು ನೀಡುವ ಮೂಲಕ ಸಹಾಯ ಮಾಡುವುದರಿಂದ ನಿಮ್ಮ ಜೀವನದಲ್ಲಿ ನೀವು ಪುಣ್ಯಂ ಅಂಶಗಳನ್ನು ಪ್ರಾಪ್ತಿ ಮಾಡಿಕೊಳ್ಳಬಹುದಾಗಿದೆ.

ಇನ್ನು ಈ ತಿಂಗಳಿನಲ್ಲಿ ಯಾವುದೇ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಬರಬಾರದು ಎಂದರೆ ಓಂ ಪದ್ಮನಾಭಾಯ ನಮಃ ಓಂ ಹರಯೇ ನಮಃ ಎನ್ನುವ ಎರಡು ಮಂತ್ರಗಳನ್ನು ದಿನದಲ್ಲಿ ಮೂರು ಬಾರಿಯಾದರೂ ಜಪ ಮಾಡಿ ನಿಮಗೆ ಖಂಡಿತವಾಗಿ ಉತ್ತಮ ಕರ್ಮಫಲಗಳೇ ದೊರೆಯುತ್ತವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!