2023ರಲ್ಲಿ ಶನಿಯ ಪ್ರಭಾವ ಯಾವ ರಾಶಿಯವರ ಮೇಲೆ, ಹೇಗಿರತ್ತೆ ಗೊತ್ತಾ..

0 93

ಶನಿ ಈಗಾಗಲೇ ಅಂದರೆ ಅಕ್ಟೋಬರ್ 23 ರಂದು ಮಕರ ರಾಶಿಗೆ ಪ್ರವೇಶಿಸಿದೆ. ಈ ರಾಶಿಯಲ್ಲಿ ಜನವರಿ 16ರ ವರೆಗೆ ಇರುತ್ತಾನೆ ನಂತರ ಜನವರಿ 17 ರಿಂದ ಶನಿ ಗ್ರಹ ಮಕರ ರಾಶಿಯನ್ನು ತೊರೆದು ಕುಂಭ ರಾಶಿಗೆ ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ ಹಲವು ರಾಶಿಗಳು ಶನಿಯ ವಕ್ರ ಪ್ರಭಾವದಿಂದ ಮುಕ್ತಿ ಪಡೆಯಲಿವೆ ಎಂಬ ಉಲ್ಲೇಖ ಜ್ಯೋತಿಷಿ ಶಾಸ್ತ್ರದಲ್ಲಿ ಈಗಾಗಲೇ ಕಂಡು ಬಂದಿದೆ.

ಮಕರ ರಾಶಿಯಲ್ಲಿ ಶನಿ ಇರುವವರೆಗೂ ಕೂಡ ಕುಂಭ ಮಕರ ಹಾಗೂ ಧನು ರಾಶಿಯವರು ಸಾಡೇಸಾತಿಯನ್ನು ಎದುರಿಸಬೇಕಾಗುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಈ ವರ್ಷದ ಜನವರಿ 24ರಂದು ಕುಂಭ ರಾಶಿಯವರ ಮೇಲೆ ಸಾಡೆ ಸಾತಿ ಪ್ರಾರಂಭ ಆಗಿದ್ದು ಇದು 2027ರ ಜೂನ್ ಮೂರರ ವರೆಗೂ ಕೂಡ ಇರಲಿದೆ ಎಂಬುದಾಗಿ ಗ್ರಹಗತಿಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗಿದೆ.

ಮುಂದಿನ ವರ್ಷದ ಜನವರಿ 17ರಂದು ಶನಿ ತನ್ನ ರಾಶಿ ಚಕ್ರವನ್ನು ಬದಲಾಯಿಸಿದಾಗ ಹಲವಾರು ರಾಶಿಯವರ ಮೇಲೆ ಶುಭ ಹಾಗು ಅಶುಭ ಪರಿಣಾಮಗಳೆರಡು ಕೂಡ ಬೀರುತ್ತವೆ. ಕುಂಭ ರಾಶಿಯನ್ನು ಶನಿ ಪ್ರವೇಶಿಸಿದ ಸಂದರ್ಭದಲ್ಲಿ ಶನಿ ದೆಯ್ಯಾ ಹಾಗೂ ಸಾಡೇಸಾತಿ 2 ರಿಂದ ಕೂಡ ಕೆಲವು ರಾಶಿಯವರು ಮುಕ್ತಿಯನ್ನು ಪಡೆಯಲಿದ್ದಾರೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ಸಾಡೆ ಸಾತಿ ಹಾಗೂ ದೆಯ್ಯಾ ದಿಂದ ಮುಕ್ತಿ ಪಡೆದ ನಂತರ ಆ ರಾಶಿಯವರ ಜೀವನದಲ್ಲಿ ಕೆಟ್ಟ ಸಮಯಗಳೆಲ್ಲವೂ ಮುಗಿದು ಉತ್ತಮ ಸಂದರ್ಭಗಳು ಪ್ರಾರಂಭವಾಗುತ್ತವೆ. ಹಲವಾರು ಕ್ಷೇತ್ರಗಳಲ್ಲಿ ಗೌರವ ಹಾಗೂ ಯಶಸ್ಸನ್ನು ಸಂಪಾದಿಸಲಿದ್ದಾರೆ. ದೆಯ್ಯಾದಿಂದ ತುಲಾ ಹಾಗೂ ಮಿಥುನ ರಾಶಿಯವರು ಮುಕ್ತಿಯನ್ನು ಹೊಂದಿದ್ದರೆ ಸಾಡೇಸಾತಿಯಿಂದ ಧನು ರಾಶಿಯವರಿಗೆ ಮುಕ್ತಿ ಸಿಗಲಿದೆ.

ಇನ್ನು ಮುಂದಿನ ವರ್ಷದ ಜನವರಿಯಲ್ಲಿ ಕುಂಭ ರಾಶಿಗೆ ಶನಿಯ ಸಂಕ್ರಮಣದಿಂದಾಗಿ ಸಾಡೆ ಸಾತಿಗೆ ಒಳಗಾಗಲಿರುವ ರಾಶಿಗಳು ಯಾವುವು ಎಂದರೆ ಕುಂಭ ಮಕರ ಹಾಗೂ ಮೀನ ರಾಶಿಗಳಾಗಿವೆ. ದೆಯ್ಯಾಗೆ ಒಳಗಾಗಲಿರುವ ರಾಶಿಗಳು ಎಂದರೆ ಕರ್ಕಾಟಕ ಹಾಗೂ ವೃಶ್ಚಿಕ ರಾಶಿಗಳು. ಹೀಗಾಗಿ ಕಷ್ಟವನ್ನು ಅನುಭವಿಸುವ ಸಾಧ್ಯತೆ ಈ ಸಂದರ್ಭದಲ್ಲಿ ಹೆಚ್ಚಾಗಿರುತ್ತದೆ.

Leave A Reply

Your email address will not be published.