ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಖ್ಯಾತ ನಟಿ ನಯನತಾರಾ ಮೂರ್ನಾಲ್ಕು ತಿಂಗಳ ಹಿದೆಯಷ್ಟೇ ಮದುವೆ ಆಗಿದ್ದಾರೆ. ಮದುವೆ ಆಗಿ ನಾಲ್ಕೇ ತಿಂಗಳಿಗೆ ತಾವು ಜವಳಿ ಮಕ್ಕಳ ಪಾಲಕರಾಗುತ್ತಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ ಮಕ್ಕಳ ಕಾಲುಗಳ ಫೋಟೋವನ್ನು ಅಪ್ ಲೋಡ್ ಮಾಡಿ, ಟ್ರೋಲ್ ಗೆ ಗುರಿಯಾಗಿದ್ದಾರೆ.

ಬಾಡಿಗೆ ತಾಯಿ ಮೂಲಕ ಜವಳಿ ಮಕ್ಕಳಿಗೆ ತಾವು ತಾಯಿ ಆಗಿದ್ದೇನೆ ಎಂದು ನಯನತಾರಾ ಘೋಷಿಸುತ್ತಿದ್ದಂತೆಯೇ ಶುಭ ಹಾರೈಸಿದ್ದವರಿಗಿಂತ ನೆಗೆಟಿವ್ ಕಾಮೆಂಟ್ ಮಾಡಿದವರೇ ಹೆಚ್ಚಾಗಿದ್ದಾರೆ. ಕೆಲವರು ತಾಯ್ತನದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಅನೇಕರು ಮನೆಗೆ ಬರುತ್ತಿರುವ ಹೊಸ ಅತಿಥಿಗೆ ಶುಭ ಹಾರೈಸಿದ್ದಾರೆ. ಎರಡೂ ಮಕ್ಕಳು ನಿಮ್ಮಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆಯಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಮದುವೆಯಾದ 4 ತಿಂಗಳಿಗೆ ನಿರ್ದೇಶಕ ವಿಘ್ನೇಶ್ ಶಿವನ್, ನಟಿ ನಯನತಾರಾ ದಂಪತಿ ಅಭಿಮಾನಿಗಳಿಗಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಯನತಾರ ಅವಳಿ ಮಕ್ಕಳ ತಾಯಿ ಎಂದು ಇನ್ಸ್ಟಾದಲ್ಲಿ ದಂಪತಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅರೇ, ಮದುವೆಯಾದ 4 ತಿಂಗಳಿಗೆ ಇದು ಹೇಗೆ ಸಾಧ್ಯ ಎನ್ನುವವರಿಗೆ ಉತ್ತರವನ್ನೂ ಕೊಟ್ಟಿರುವ ದಂಪತಿ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಾಲಕರಾಗಿದ್ದಾರೆ ಈ ಜೋಡಿ. ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು.

ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕಳೆದ ಜೂನ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದ್ದರು. ತಾವಿಷ್ಟಪಟ್ಟ ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ಧರು. ಮಾರ್ಚ್ ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದರೂ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬ ಸುದ್ದಿಯೂ ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಸುದ್ದಿ ಆಯಿತು.

ಅದು ಕೂಡ ಇದೀಗ ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಅದನ್ನೂ ನಿಜ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ದಂಪತಿ ಹನಿಮೂನ್ ಗೆ ಹೋದಾಗಲೂ ಮಗುವಿನ ಪಾದಗಳಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆಗಲೂ ಕೂಡ ಅಷ್ಟೇ ಕುತೂಹಲಕ್ಕೆ ಕಾರಣವಾಗಿತ್ತು ಆ ಪೋಸ್ಟ್. ಇದೀಗ ಅದು ಕೂಡ ನಿಜವಾಗಿದೆ. ಅಭಿಮಾನಿಗಳು ಮತ್ತು ಆಪ್ತರು ಈ ಜೋಡಿಗೆ ಶುಭಾಶಯ ಹೇಳುತ್ತಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!