ಮೇಷ; ವ್ಯಾಪಾರ ವ್ಯವಹಾರಗಳ ಲಾಭವನ್ನು ಸಂಪಾದಿಸಲಿದ್ದೀರಿ. ಹಿತಶತ್ರುಗಳು ನಿಮ್ಮಿಂದ ದೂರವಾಗಲಿದ್ದಾರೆ. ಪ್ರತಿ ಶುಕ್ರವಾರ ದುರ್ಗಾಪರಮೇಶ್ವರಿಗೆ ನಿಂಬೆಹಣ್ಣಿನ ಪೂಜೆಯನ್ನು ಮಾಡುವ ಮೂಲಕ ನೀವು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ವೃಷಭ; ಭೂಮಿ ಮಾರಾಟ ಕಾರ್ಯ ಯಶಸ್ವಿಯಾಗಲಿದೆ. ಹೋಟೆಲ್ ಹಾಗೂ ಸರ್ಕಾರಿ ಉದ್ಯಮಗಳಿಗೆ ಸೇರಿದವರು ಲಾಭವನ್ನು ಸಂಪಾದಿಸಲಿದ್ದಾರೆ.
ಈ ತಿಂಗಳಿನಲ್ಲಿ ನೀವು ಗಣೇಶ ಹಾಗೂ ಪರಶಿವನ ಪೂಜೆಯನ್ನು ಮಾಡುವ ಮೂಲಕ ಪುಣ್ಯವನ್ನು ಸಂಪಾದಿಸಬಹುದಾಗಿದೆ. ಮಿಥುನ; ಬೇರೆಯವರು ಮಾಡಿದ ತಪ್ಪಿಗಾಗಿ ನೀವು ದಂಡವನ್ನು ತೆರಬೇಕಾಗುತ್ತದೆ. ಕೊಂಚಮಟ್ಟಿಗೆ ಇರಿಸು ಮುರಿಸನ್ನು ಕಾಣುವಂತಹ ಪರಿಸ್ಥಿತಿಗಳು ಎದುರಾಗಬಹುದು. ಕೊಂಚಮಟ್ಟಿಗೇ ಹಿನ್ನಡೆಯನ್ನು ಕಾಣಬಹುದಾದ ಪರಿಸ್ಥಿತಿ ಎದುರಾಗಬಹುದು ಹೀಗಾಗಿ ಇವುಗಳಿಂದ ಪರಿಹಾರ ಕಾಣಲು ದುರ್ಗಾ ಮಾತೆಯ ಪೂಜೆಯನ್ನು ಮಾಡಿ.
ಕರ್ಕ; ಆರ್ಥಿಕವಾಗಿ ಸದೃಢವಾಗಲಿದ್ದೀರಿ. ಉತ್ತಮ ಸಮಯಗಳನ್ನು ಕಾಣಬಹುದಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಮಿತ್ರರಿಂದ ಸಹಕಾರ ಸಿಗುವಂತಹ ಸಾಧ್ಯತೆ ಇದೆ. ಸಿಂಹ; ಜನಪ್ರಿಯ ಹೆಚ್ಚುತ್ತದೆ ಇದನ್ನು ನೀವು ಕಾಪಾಡಿಕೊಳ್ಳಬೇಕಾಗುತ್ತದೆ. ಸಿಗಬೇಕಾಗಿರುವ ಪಿತ್ರಾರ್ಜಿತ ಆಸ್ತಿ ನಿಮಗೆ ಸಿಗಲಿದೆ. ರೈತರಿಗೆ ಹೈನುಗಾರಿಕೆಯಲ್ಲಿ ವಿಪರೀತ ಲಾಭ ಸಿಗಲಿದೆ. ಕನ್ಯಾ; ಮನೆಯವರ ಆರೋಗ್ಯ ಸಮಸ್ಯೆ ಎದ್ದು ಕಾಣಬಹುದು ಹಾಗೂ ವಿಪರೀತ ಖರ್ಚು ಕೂಡ ಉಂಟಾಗಬಹುದು. ಫಾರೆಸ್ಟ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಇರುವವರಿಗೆ ಅವಮಾನ ಎದುರಿಸುವ ಸಂದರ್ಭ ಎದುರಾಗಬಹುದು. ಮೌನದಲ್ಲಿ ಇರುವುದು ಉತ್ತಮ.
ತುಲಾ; ವಂಶ ಪಾರಂಪರ್ಯವಾಗಿ ಬಂದಿರುವಂತಹ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಿ. ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ಉಂಟಾಗುತ್ತದೆ. ಕೋರ್ಟು ಕಚೇರಿಗಳಲ್ಲಿ ವಿವಾದ ತಣ್ಣಗಾಗಲಿದ್ದು ತೀರ್ಪು ನಿಮ್ಮ ಪರವಾಗಲಿದೆ. ವೃಶ್ಚಿಕ; ಕಂಕಣ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಮದುವೆಯಾಗಲಿದೆ. ವಿದೇಶದಲ್ಲಿ ಕೆಲಸ ಮಾಡಬೇಕು ಎಂದು ಎದುರು ನೋಡುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಗಣೇಶನ ಆರಾಧನೆ ನಿಮ್ಮ ಯಶಸ್ಸನ್ನು ಇನ್ನಷ್ಟು ಹೆಚ್ಚಿಸಲಿದೆ. ಧನು; ಕೆಲಸಕ್ಕಾಗಿ ಎದುರು ನೋಡುತ್ತಿರುವವರಿಗೆ ಕೆಲಸ ಸಿಗಲಿದೆ. ಹಲವಾರು ಸಮಯಗಳಿಂದ ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರಲಿದೆ. ಚಾಮುಂಡೇಶ್ವರಿಯ ಆರಾಧನೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಲಿದೆ.
ಮಕರ; ಶನಿಯ ವಕ್ರದೃಷ್ಟಿಯಿಂದಾಗಿ ಆರೋಗ್ಯ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಸಲ್ಲದ ಆರೋಪಗಳನ್ನು ಕಾಣಬೇಕಾಗುತ್ತದೆ. ಮನೆಯಲ್ಲಿ ಕೂಡ ಕಿರಿಕಿರಿ. ಯಾವುದೇ ಶುಭ ಕಾರ್ಯಗಳಿಗೆ ನವೆಂಬರ್ ತಿಂಗಳು ನಿಮಗೆ ಹೇಳಿ ಮಾಡಿಸಿದ್ದಲ್ಲ ಎಂದು ಹೇಳಬಹುದಾಗಿದೆ. ಕುಂಭ; ವೃದ್ಧರು ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಗಮನ ವಹಿಸಬೇಕು.
ನಿಮ್ಮನ್ನು ಕಂಡರೆ ಆಗದವರಿಂದ ನಿಮ್ಮ ಮದುವೆ ಕಾರ್ಯಗಳು ನಿಂತು ಹೋಗಬಹುದಾದಂತಹ ಸಾಧ್ಯತೆ ಕೂಡ ಇದೆ ಜಾಗೃತಿ ವಹಿಸಿ. ಮೀನ; ಮನೆ ಹಾಗೂ ಹೊಸ ಜಾಗವನ್ನು ಖರೀದಿ ಮಾಡುವಂತಹ ಯೋಗ ಕೂಡ ಕೂಡಿ ಬರಲಿದೆ. ಈ ಸಂದರ್ಭದಲ್ಲಿ ನಿಮ್ಮ ಅನಾರೋಗ್ಯ ಕೂಡ ನಿಯಂತ್ರಿತ ಪರಿಸ್ಥಿತಿಗೆ ಬರಲಿವೆ. ವ್ಯಾಪಾರವನ್ನು ಆರಂಭ ಮಾಡುವಂತಹ ಮನಸ್ಥಿತಿ ನಿಮ್ಮಲ್ಲಿದ್ದರೆ ಇದು ಶುಭ ಸಮಯ. ಇವುಗಳಲ್ಲಿ ನಿಮ್ಮ ರಾಶಿಗೆ ಶುಭ ಫಲಿತಾಂಶ ಬಂದಿದೆಯಾ ಇಲ್ಲವೇ ಅಶುಭ ಫಲಿತಾಂಶ ಬಂದಿದೆಯೇ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.